ಲಾರಿ ನಿಲ್ಲಿಸಿ ಕಸ ವಿಲೇವಾರಿಗೆ ತಡೆ: ಮಿಟ್ಟಗಾನಹಳ್ಳಿ ಕಲ್ಲುಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿಗೆ ವಿರೋಧ

ಕೆ.ಆರ್.ಪುರ: ರಾತ್ರೋರಾತ್ರಿ ಮಿಟ್ಟಗಾನಹಳ್ಳಿ ಕಲ್ಲುಕ್ವಾರಿಯಲ್ಲಿ ಕಸ ಹಾಕುತ್ತಿರುವುದನ್ನು ಖಂಡಿಸಿ ಸ್ಥಳೀಯರು ಕಸದ ಲಾರಿಗಳನ್ನು ತಡೆದು ಬುಧವಾರ ಪ್ರತಿಭಟನೆ ನಡೆಸಿದರು.

ಮೂರು ದಿನಗಳಿಂದ ಸಾವಿರಕ್ಕೂ ಹೆಚ್ಚು ಲಾರಿ ಕಸ ವಿಲೇವಾರಿ ಮಾಡಿದ್ದಾರೆಂದು ಆಕೊ್ರೕಶ ವ್ಯಕ್ತಪಡಿಸಿದರು.

ಕಣ್ಣೂರು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದಾಗಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ರಂದೀಪ್ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

Leave a Reply

Your email address will not be published. Required fields are marked *