ಲಸಿಕೆ ಹಾಕಿಸಿ ಅಂಗವಿಕಲತೆ ದೂರ ಮಾಡಿನರೇಗಲ್ಲ:ಪೋಲಿಯೋದಿಂದಾಗುವ ಅಂಗವಿಕಲತೆ ತಪ್ಪಿಸುವ ಜವಾಬ್ದಾರಿ ಪ್ರತಿಯೊಬ್ಬ ತಂದೆ ತಾಯಿ ಹಾಗೂ ಪಾಲಕರದ್ದಾಗಿದೆ ಎಂದು ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎ.ಡಿ. ಸಾಮುದ್ರಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮೂರು ದಿನಗಳ ಕಾಲ ನರೇಗಲ್ಲ ವ್ಯಾಪ್ತಿಯಲ್ಲಿ ಬರುವ 10 ಗ್ರಾಮಗಳ 6369 ಮನೆಗಳಿಗೆ ಭೇಟಿ ನೀಡಲಿದ್ದೇವೆ. 19 ತಂಡಗಳ ನೇಮಕ ಮಾಡಲಾಗಿದೆ ಎಂದರು. ಡಾ. ಕೆ.ಬಿ. ಧನ್ನೂರ, ಡಾ. ಆರ್.ಕೆ. ಗಚ್ಚಿನಮಠ, ವಕೀಲ ಕೆ.ಜಿ. ಉಡುಪಿ, ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಎ.ಎಂ.ಒ ಪಿ. ಲಿಂಗನಗೌಡ್ರ ಇತರರು ಇದ್ದರು.

ಜಕ್ಕಲಿ ಗ್ರಾಮ: ಗ್ರಾಮದ ಆರೋಗ್ಯ ಉಪ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ಜಾಲಣ್ಣವರ ಚಾಲನೆ ನೀಡಿದರು. ಆರೋಗ್ಯ ಸಹಾಯಕ ಎಸ್.ಎಫ್. ಅಂಗಡಿ, ತಾ.ಪಂ ಸದಸ್ಯ ಅಂದಾನಪ್ಪ ದೊಡ್ಡಮೇಟಿ, ಗ್ರಾ.ಪಂ ಉಪಾಧ್ಯಕ್ಷ ಅಶೋಕಪ್ಪ ಯಾವಗಲ್ಲ, ಹಿರಿಯ ಆರೋಗ್ಯ ಸಹಾಯಕ ಎಸ್.ಎನ್. ಪಾಟೀಲ ಇತರರು ಇದ್ದರು.

ಅಭಿಯಾನ ಜಾಥಾ

ಅಡವಿಸೋಮಾಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಭಾನುವಾರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅಭಿಯಾನ ಜಾಥಾ ಜರುಗಿತು.

ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಎಸ್. ಕೊಟಗಿ ಚಾಲನೆ ನೀಡಿ ಮಾತನಾಡಿ, ತಾಲೂಕಿನ ಅಡವಿಸೋಮಾಪುರ ಸಣ್ಣತಾಂಡೆ ಹಾಗೂ ದೊಡ್ಡ ತಾಂಡೆ, ಪಾಪನಾಶಿ ತಾಂಡೆಯಲ್ಲಿ 3 ದಿನಗಳ ಕಾಲ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಜರುಗಲಿದ್ದು, 5 ವರ್ಷದೊಳಗಿನ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಹೇಳಿದರು.

ಅಡವಿಸೋಮಾಪುರ ಉಪಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾದ ಸಿದ್ದಪ್ಪ ಲಿಂಗದಾಳ, ಮಂಜುನಾಥ ದೊಡ್ಡಮನಿ, ಡಿ.ಕೆ. ಕಲ್ಲೊಳ್ಳಿ, ಬಿ.ಎಸ್. ಚವಡಿ, ಎಸ್.ಆರ್. ಮಟ್ಟಿ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎಂ.ಸಿ. ದೊಡ್ಡಮನಿ, ಎಂ.ಎನ್. ದಂಡಿನ, ಮಾಲಾ ಮೇವುಂಡಿ, ರೇಣುಕಾ ಪುರದ, ಮೀನಾಕ್ಷಿ ವಡ್ಡರ ಹಾಗೂ ಶಾಲಾ ಮಕ್ಕಳು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅಭಿಯಾನ ಜಾಥಾದಲ್ಲಿ ಪಾಲ್ಗೊಂಡಿದ್ದರು.