ಲಕ್ಷ ದೀಪೋತ್ಸವಕ್ಕೆ ಭಕ್ತರ ಸಹಕಾರ ಅವಶ್ಯ

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ಲಕ್ಷ ದೀಪೋತ್ಸವಕ್ಕೆ ಸರ್ವರ ಸಹಕಾರ ಅಗತ್ಯ ಎಂದು ಸೋಮೇಶ್ವರ ಭಕ್ತರ ಟ್ರಸ್ಟ್ ಅಧ್ಯಕ್ಷ ಶಿವಣ್ಣ ನೆಲವಗಿ ಹೇಳಿದರು.

ಪಟ್ಟಣದ ರಂಭಾಪುರಿ ಜ. ವೀರಗಂಗಾಧರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

2015ರಲ್ಲಿ ಜೀಣೋದ್ಧಾರಗೊಂಡ ದೇವಸ್ಥಾನದಲ್ಲಿ 5 ವರ್ಷಕ್ಕೊಮ್ಮೆ ಲಕ್ಷ ದೀಪೋತ್ಸವ ಆಚರಿಸಲು ನಿರ್ಣಯಿಸಲಾಗಿತ್ತು ಎಂದರು.

ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ದೇವಸ್ಥಾನದ ತೇರಿನ ಮನೆ ಹತ್ತಿರದ 11 ಗುಂಟೆ ನಿವೇಶನವನ್ನು ಶಿಗ್ಲಿಮಠ ಕುಟುಂಬದವರು ಯಾತ್ರಿ ನಿವಾಸ ನಿರ್ವಣಕ್ಕೆ ಬಿಟ್ಟುಕೊಡಲು ಒಪ್ಪಿದ್ದಾರೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು.

ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಸೋಮಣ್ಣ ಮುಳಗುಂದ ಮಾತನಾಡಿದರು.

ಚೆಂಬಣ್ಣ ಬಾಳಿಕಾಯಿ, ಚನ್ನಪ್ಪ ಜಗಲಿ, ಸುರೇಶ ರಾಚನಾಯಕರ್, ನೀಲಪ್ಪ ಕರ್ಜಕಣ್ಣವರ, ಸಿದ್ದನಗೌಡ ಬೊಳ್ಳೊಳ್ಳಿ, ಚಂದ್ರು ಹಂಪಣ್ಣವರ. ಆರ್.ಸಿ. ಲಕ್ಕುಂಡಿಮಠ, ಕುಬೇರಪ್ಪ ಮಹಾಂತಶೆಟ್ಟರ, ಎಂ. ಸಿದ್ಧಲಿಂಗಯ್ಯ, ಡಾ. ಜಯಶ್ರೀ ಹೊಸಮನಿ, ಇಂದುಮತಿ ಜಕ್ಕನಗೌಡ್ರ, ಸುಲೋಚನಾ ಜವಾಯಿ, ಗಂಗಾಧರ ಮೆಣಸಿನಕಾಯಿ, ಮರುಳಾರಾಧ್ಯ ಕಳ್ಳಿಮಠ, ಅನಿಲ ಮುಳಗುಂದ ಇತರರಿದ್ದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪೂರ್ಣಾಜಿ ಕರಾಟೆ ನಿರೂಪಿಸಿದರು.