ಲಕ್ಷ ಚೀಲ ಮೆಣಸಿನಕಾಯಿ ಆವಕ

ಬ್ಯಾಡಗಿ: ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಗೆ ಎರಡನೇ ಬಾರಿ ಲಕ್ಷ ಚೀಲ ಆವಕ ದಾಟುವ ಮೂಲಕ ಮಾರುಕಟ್ಟೆ ವಹಿವಾಟಿನಲ್ಲಿ ತೀವ್ರ ಏರಿಕೆ ಕಂಡುಬಂದಿದೆ.

ಹಿಂದಿನ ವರ್ಷ ಏಳೆಂಟು ಬಾರಿ ಲಕ್ಷ ಚೀಲ, ಒಮ್ಮೆ 2 ಲಕ್ಷ ಚೀಲ ದಾಟುವ ಮೂಲಕ ದಾಖಲೆ ಗುರಿ ಮುಟ್ಟಿ, ಮಾರುಕಟ್ಟೆ ಇತಿಹಾಸ ನಿರ್ವಿುಸಿತ್ತು. ಈ ಬಾರಿ ನವೆಂಬರ್​ನಿಂದ ಆವಕವನ್ನು ಸಮನಾಗಿ ಕಾಯ್ದುಕೊಂಡಿದ್ದ ಮಾರುಕಟ್ಟೆ, ಕಳೆದ ಸೋಮವಾರದಿಂದ ಏರಿಕೆಯಾಗುತ್ತಿದೆ.

ಪ್ರಸಕ್ತ ಸಾಲಿನಲ್ಲಿ ಕಳೆದ ಸೋಮವಾರ 1 ಲಕ್ಷ 17 ಸಾವಿರ ಹಾಗೂ ಗುರುವಾರ 1,10,695 ಚೀಲಗಳು ಆವಕವಾಗುವ ಮೂಲಕ ಸಾಕಷ್ಟು ವಹಿವಾಟು ನಡೆದಿದ್ದು, ಇಂದು ಎರಡನೇ ಬಾರಿಗೆ ಲಕ್ಷ ಚೀಲ ದಾಟಿದೆ. ಪ್ರಸಕ್ತ ಸಾಲಿನಲ್ಲಿ ಕಳೆದ ವರ್ಷಕ್ಕಿಂತಲೂ ಬೆಳೆ ಹೆಚ್ಚಾಗಿದ್ದು, ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಬಿಎಸ್​ಎನ್​ಎಲ್ ನೆಟವರ್ಕ್ ಸಮಸ್ಯೆ

ಮಾರುಕಟ್ಟೆಯಲ್ಲಿ ಪ್ರತಿದಿನ ಟೆಂಡರ್ ಫಾಮ್ರ್ ಹಾಕಿದ ಬಳಿಕ ಆನ್​ಲೈನ್ ಮೂಲಕ ವರ್ತಕರಿಗೆ ರೈತರ ಮೆಣಸಿನಕಾಯಿ ಟೆಂಡರ್ ದರ ನಿಗದಿಯಾಗುತ್ತಿತ್ತು. ಆದರೆ, ಬೆಳಗ್ಗೆ 10 ಗಂಟೆಯಿಂದ ಬಿಎಸ್​ಎನ್​ಎಲ್ ನೆಟ್​ವರ್ಕ್ ಸಮಸ್ಯೆಯಿಂದ ವರ್ತಕರು ಖರೀದಿದಾರರಿಗೆ ಎರಡು ಫಾಮರ್್​ಗಳನ್ನು ನೀಡುವ ಮೂಲಕ ಮ್ಯಾನುವಲ್ ಸಿಸ್ಟಂಗೆ ಅಣಿಯಾದರು. ಹೀಗಾಗಿ ಗುರುವಾರ 10 ಸಾವಿರ ಟೆಂಡರ್ ಫಾಮರ್್​ಗಳಿದ್ದು, 50ಕ್ಕೂ ಹೆಚ್ಚು ಸಿಬ್ಬಂದಿ ಎಲ್ಲವನ್ನು ಬೇರ್ಪಡಿಸಿ ಫಾಮ್ರ್ ಹೊಂದಿಸುತ್ತಿದ್ದಾರೆ. ರೈತರಿಗೆ ಟೆಂಡರ್ ದರ ಸಂಜೆ 7 ಗಂಟೆಗೆ ಲಭಿಸಿದೆ. ಇದರಿಂದ ವರ್ತಕರು ಹಾಗೂ ರೈತರು ಎಪಿಎಂಸಿ ಕಾರ್ಯಾಲಯ ಬಳಿ ಜಮಾಯಿಸಿದ್ದರು. ಸುಮಾರು 350 ಕಿ.ಮೀ. ದೂರದಿಂದ ಆಗಮಿಸಿದ ರೈತರು ಎಂದಿನಂತೆ 2 ಗಂಟೆಗೆ ಟೆಂಡರ್ ದರ ಸಿಗದೆ, ಕಾರ್ಯಾಲಯಕ್ಕೆ ಆಗಮಿಸಿ ಕಟ್ಟೆಯ ಮೇಲೆ ನಿದ್ರಿಸತೊಡಗಿದ್ದರು.