ಕಿಕ್ಕೇರಿ: ಹೋಬಳಿಯ ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷರಾಗಿ ನೇತ್ರಾವತಿ ಚಂದ್ರೇಗೌಡ ಲಾಟರಿ ಮೂಲಕ ಬುಧವಾರ ಆಯ್ಕೆಯಾದರು.
ಕನಕಾ ರಾಜೇಶ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಚುನಾವಣೆ ನಿಗದಿಯಾಗಿತ್ತು. 16 ಸದಸ್ಯರಿರುವ ಗ್ರಾಪಂಗೆ ನಡೆದ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ತುಳಸಿ ಗ್ರಾಮದ ನೇತ್ರಾವತಿ ಚಂದ್ರೇಗೌಡ ಹಾಗೂ ಲಕ್ಷ್ಮೀಪುರ ಗ್ರಾಮದ ಅನಿತಾ ಬಬ್ರುವಾಹನ ಸ್ಪರ್ಧಿಸಿದ್ದರು. ಇಬ್ಬರು ಸ್ಪರ್ಧಿಗಳು ತಲಾ 8 ಮತಗಳು ಪಡೆದು ಸಮಬಲ ಸಾಧಿಸಿದರು.
ಅಂತಿಮವಾಗಿ ಅಧ್ಯಕ್ಷರ ಆಯ್ಕೆಯನ್ನು ಲಾಟರಿ ಮೂಲಕ ಮಾಡಲಾಯಿತು. ಲಾಟರಿಯಲ್ಲಿ ತುಳಸಿ ಗ್ರಾಮದ ನೇತ್ರಾವತಿ ಚಂದ್ರೇಗೌಡ ಆಯ್ಕೆಯಾದರು.
ನೂತನ ಅಧ್ಯಕ್ಷರು ತಮ್ಮ ಅಧಿಕಾರ ಅವಧಿಯಲ್ಲಿ ಕುಡಿಯುವ ನೀರು, ಬೀದಿ ದೀಪ, ಒಳಚರಂಡಿ ಹಾಗೂ ಮೂಲಭೂತ ಸಮಸ್ಯೆ ಪರಿಹಾರಕ್ಕೆ ಕೆಪಿಸಿಸಿ ಸದಸ್ಯ ಸುರೇಶ್ ಹಾಗೂ ಸದಸ್ಯರ ಮಾರ್ಗದರ್ಶನದಲ್ಲಿ ಆದ್ಯತೆ ನೀಡಲಾಗುವುದು ಎಂದರು.
ಕೆಪಿಸಿಸಿ ಸದಸ್ಯ ಸುರೇಶ್, ಗ್ರಾಪಂ ಸದಸ್ಯರಾದ ರಮೇಶ್, ಆಶೋಕ್, ರಘು, ಶ್ರೀಧರ್, ಉಮೇಶ್, ಬಸವರಾಜು, ರಾಜಶೇಖರಮೂರ್ತಿ, ಸ್ವಾಮಿ, ಶ್ವೇತಾ, ಅನಿತಾ, ಚಂದ್ರಕಲಾ, ಪುಷ್ಟಾಲತಾ, ಮಂಜುಳಾ, ಮಮತಾ, ಮುಖಂಡರಾದ ಚಂದ್ರಮೋಹನ್, ಜಾಣೇಗೌಡ, ಲೋಕೇಶ್, ವಿಶ್ವನಾಥ್, ನವೀನ್, ಸುರೇಶ್, ರವಿ, ಮಂಜುನಾಥ್, ಪ್ರಸನ್ನ, ಹರೀಶ್ ಇದ್ದರು.