ಲಕ್ಷ್ಮೀಸಾಗರ ಕೆರೆಗೆ ರಮೇಶ್​ಕುಮಾರ್ ಭೇಟಿ

ಕೋಲಾರ: ಕೆಸಿ ವ್ಯಾಲಿ ಮೂಲಕ ಲಕ್ಷ್ಮೀಸಾಗರ ಕೆರೆಗೆ ನೀರು ಹರಿಯುತ್ತಿರುವುದನ್ನು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಭಾನುವಾರ ಬೆಳಗ್ಗೆ ವೀಕ್ಷಿಸಿದರಲ್ಲದೆ, ಅಂತರ್ಜಲ ಅಭಿವೃದ್ಧಿ ಕುರಿತು ಕೆರೆ ಸುತ್ತಮುತ್ತಲ ಪ್ರದೇಶದ ರೈತರಿಂದ ಮಾಹಿತಿ ಪಡೆದರು. ಕೆಸಿ ವ್ಯಾಲಿ ಮೂಲಕ ಲಕ್ಷ್ಮೀಸಾಗರ ಹಾಗೂ ಇನ್ನಿತರ ಕೆರೆಗಳಿಗೆ ನೀರು ಹರಿಯುತ್ತಿರುವುದರಿಂದ ಬತ್ತಿದ್ದ ಕೊಳವೆ ಬಾವಿಗಳು ಚೇತರಿಕೆ ಕಾಣುತ್ತಿವೆ. ಅಂತರ್ಜಲ ಹೆಚ್ಚಾಗುತ್ತಿದೆ, ಹೋರಾಟದ ಫಲದಿಂದ ಭೂಮಿ ಬಾಡುವುದು ತಪ್ಪಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕೆಸಿ ವ್ಯಾಲಿ ನೀರಿನಿಂದ ರೈತರ ಮುಖದಲ್ಲಿ ನಗು ನೋಡುವ ಕಾತುರ ಹೆಚ್ಚಾಗಿದೆ. ಕೆಸಿ ವ್ಯಾಲಿ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಕಾಮಗಾರಿ ಮುಂದುವರಿದಿದೆ. ನೀರು ಪೋಲು ತಪ್ಪಿಸಲು ಚೆಕ್​ಡ್ಯಾಮ್ ನಿರ್ವಿುಸಲಾಗುತ್ತಿದ್ದು, ಮಾರ್ಚ್ ಅಂತ್ಯಕ್ಕೆ ನಿರ್ಮಾಣ ಕೆಲಸ ಮುಗಿದಲ್ಲಿ ನೀರಿನ ಸಮಸ್ಯೆಗೆ ದೊಡ್ಡಮಟ್ಟದಲ್ಲಿ ಪರಿಹಾರ ಸಿಕ್ಕಿದಂತಾಗುತ್ತದೆ ಎಂದು ರೈತರಿಗೆ ತಿಳಿಸಿ ಕೋಲಾರದತ್ತ ಪ್ರಮಾಣ ಬೆಳೆಸಿದರು.