ಲೋಕಾಪುರ: ಪಟ್ಟಣದಲ್ಲಿ ನಡೆದ ಬೃಹತ್ ಮಾನವ ಸರಪಳಿಯಲ್ಲಿ ಹೆಚ್ಚು ಜನರು ಭಾಗಿಯಾಗುವ ಮೂಲಕ ಪ್ರಜಾಪ್ರಭುತ್ವ ಅತ್ಯಂತ ಬಲಷ್ಠ ಮತ್ತು ಶ್ರೇಷ್ಠ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಜಮಖಂಡಿ ಎಸಿ ಶ್ವೇತಾ ಬೀಡಿಕರ ಹೇಳಿದರು.
ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಜಿಲ್ಲಾಡಳಿತ, ಮುಧೋಳ ತಾಲೂಕು ಆಡಳಿತದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ಅವರು ಸಂವಿಧಾನ ಪೀಠಿಕೆ ಓದಿದರು.
ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಪ್ರಾಂತ್ಯಗಳನ್ನು ಹೊಂದಿದರೂ ಪ್ರಜಾಪ್ರಭುತ್ವದಲ್ಲಿ ಏಕತೆ ಕಾಣುತೇವೆ. ಸಂವಿಧಾನದಡಿ ಎಲ್ಲರಿಗೂ ಸಮಾನ ಹಕ್ಕು ನೀಡಲಾಗಿದೆ ಎಂದರು.
ಖಜ್ಜಿಡೋಣಿ ಗ್ರಾಮದಿಂದ ಬೆಳಗಾವಿ ಜಿಲ್ಲೆ ಗಡಿಗ್ರಾಮವಾದ ಸಾಲಾಪೂರವರೆಗಿನ 20 ಕಿ.ಮೀ ಅಂತರದಲ್ಲಿ ಅಂದಾಜು 20 ಸಾವಿರಕ್ಕಿಂತ ಹೆಚ್ಚು ಜನರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಮಖಂಡಿ ಉಪವಿಭಾಗದ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಸದಸ್ಯೆರು, ಸಾರ್ವಜನಿಕರು, ಕಲಾವಿದರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಡಿವೈಎಸ್‌ಪಿ ಶಾಂತವೀರ ಈ., ತಹಸೀಲ್ದಾರರಾದ ಮಹಾದೇವ ಸನ್ನಮುರಿ, ಸದಾಶಿವ ಮುಕ್ಕೊಜಿ, ಗಿರೀಶ ಸವದಿ, ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಉಪತಹಸೀಲ್ದಾರ್ ಸತೀಶ ಬೇವೂ, ಮುಖಂಡರಾದ ಅಶೋಕ ಕಿವಡ, ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಯಮನಪ್ಪ ಹೊರಟ್ಟಿ, ಭೀಮನಗೌಡ ಪಾಟೀಲ, ಸುಭಾಸ ಗಸ್ತಿ ಇತರರಿದ್ದರು.