ಲಂಕಾ ತಂಡಕ್ಕೆ 4ನೇ ಸೋಲು

ಪೋರ್ಟ್​ಎಲಿಜಬೆತ್: ಆತಿಥೇಯ ದಕ್ಷಿಣ ಆಫ್ರಿಕಾ ತಂಡ ತೋರಿದ ಭರ್ಜರಿ ನಿರ್ವಹಣೆ ಎದುರು ಸಂಪೂರ್ಣ ಮಂಕಾದ ಶ್ರೀಲಂಕಾ ತಂಡ ಸತತ 4ನೇ ಏಕದಿನ ಪಂದ್ಯದಲ್ಲೂ ಸೋಲನುಭವಿಸಿದೆ. ಇದರೊಂದಿಗೆ ಐದು ಏಕದಿನ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ತಂಡ 0-4 ರಿಂದ ಹಿನ್ನಡೆ ಅನುಭವಿಸುವ ಮೂಲಕ ವೈಟ್​ವಾಷ್ ಭೀತಿಯಲ್ಲಿದೆ. ಬುಧವಾರ ನಡೆದ 4ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 6 ವಿಕೆಟ್​ಗಳಿಂದ ಶರಣಾಯಿತು. ಮೊದಲು ಬ್ಯಾಟಿಂಗ್ ಲಂಕಾ ತಂಡ 39.2 ಓವರ್​ಗಳಲ್ಲಿ 189 ರನ್​ಗಳಿಗೆ ಸರ್ವಪತನ ಕಂಡರೆ, ಪ್ರತಿಯಾಗಿ ದಕ್ಷಿಣ ಆಫ್ರಿಕಾ 32.5 ಓವರ್​ಗಳಲ್ಲಿ 4 ವಿಕೆಟ್​ಗೆ 190 ರನ್​ಗಳಿಸಿ ಜಯದ ನಗೆ ಬೀರಿತು. ಅಂತಿಮ ಏಕದಿನ ಪಂದ್ಯ ಶನಿವಾರ ಕೇಪ್​ಟೌನ್​ನಲ್ಲಿ ನಡೆಯಲಿದೆ.

ಶ್ರೀಲಂಕಾ: 39.2 ಓವರ್​ಗಳಲ್ಲಿ 189 (ಇಸುರು ಉದಾನ 78, ಅವಿಷ್ಕ ಫೆರ್ನಾಂಡೊ 29, ಆನ್ರಿಚ್ ನೋರ್ಜೆ 57ಕ್ಕೆ 3, ಆಂಡಿಲೆ ಪೆಹ್ಲುಕ್​ವಾಯೊ 21ಕ್ಕೆ 2, ಡೇಲ್ ಸ್ಟೈನ್ 32ಕ್ಕೆ 1, ಎನ್​ಗಿಡಿ 22ಕ್ಕೆ 1), ದಕ್ಷಿಣ ಆಫ್ರಿಕಾ: 32.5 ಓವರ್​ಗಳಲ್ಲಿ 190 (ಕ್ವಿಂಟನ್ ಡಿ ಕಾಕ್ 51, ಮಾರ್ಕ್ರಮ್ 29, ಫಾಫ್ ಡು ಪ್ಲೆಸಿಸ್ 43, ಡೇವಿಡ್ ಮಿಲ್ಲರ್ 25*, ಜೆಪಿ ಡುಮಿನಿ 31*, ಧನಂಜಯ 41ಕ್ಕೆ 3, ರಜಿತಾ 32ಕ್ಕೆ 1).

ಕೋಚ್​ಗೆ ಬುಲಾವ್

ಕೊಲಂಬೊ: ಶ್ರೀಲಂಕಾ ತಂಡದ ಮುಖ್ಯ ಕೋಚ್ ಚಂಡಿಕಾ ಹತುರುಸಿಂಘ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮಧ್ಯದಲ್ಲಿಯೇ ತವರಿಗೆ ವಾಪಸ್ ಆಗುವಂತೆ ಬುಲಾವ್ ನೀಡಲಾಗಿದೆ. ತಂಡದ ಫೀಲ್ಡಿಂಗ್ ಕೋಚ್ ಸ್ಟೀವ್ ರಿಕ್ಸನ್ ಅವರನ್ನು ಪ್ರವಾಸದ ಅಂತಿಮ ಏಕದಿನ ಹಾಗೂ ಟಿ20 ಸರಣಿಗೆ ಉಸ್ತುವಾರಿ ಕೋಚ್ ಆಗಿ ನೇಮಿಸಲಾಗಿದೆ. ‘ಪ್ರವಾಸದಿಂದ ವಾಪಸಾಗಲು ಚಂಡಿಕಾ ಹತುರುಸಿಂಘಗೆ ಸೂಚಿಸಲಾಗಿದ್ದು, ಸ್ಟೀವ್ ರಿಕ್ಸನ್ ಅವರನ್ನು ಉಸ್ತುವಾರಿ ಕೋಚ್ ಆಗಿ ನೇಮಿಸಲಾಗಿದೆ. ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ಧತೆ ಕುರಿತು ರ್ಚಚಿಸುವ ಸಲುವಾಗಿ ತವರಿಗೆ ಕರೆಸಲಾಗುತ್ತಿದೆ’ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವಾ ಹೇಳಿದ್ದಾರೆ.

Leave a Reply

Your email address will not be published. Required fields are marked *