ಬೈಲಹೊಂಗಲ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ರೋಟರಿ ಮತ್ತು ಇನ್ನರ್‌ವ್ಹೀಲ್ ಸಂಸ್ಥೆ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಯಿತು.
ರೋಟರಿ ಸಂಸ್ಥೆ ಅಧ್ಯಕ್ಷ ಮಹಾಂತೇಶ ಜಿಗಜಿನ್ನಿ, ಅಸಿಸ್ಟೆಂಟ್ ಗವರ್ನರ್ ಮಹೇಶ ಬೆಲ್ಲದ ಮಾತನಾಡಿ, ಸಮಾಜಮುಖಿ ಕಾರ್ಯಗಳ ಭಾಗವಾಗಿ ರೋಟರಿ ಸಂಸ್ಥೆಯಿಂದ ಪ್ರತಿ ವರ್ಷದಂತೆ 400 ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಗಿದೆ. ಪ್ರತಿ ಕಿಟ್ ಐದು ಸಾವಿರ ರೂ. ಮೌಲ್ಯದ್ದಾಗಿದೆ. ವಿದ್ಯಾರ್ಥಿಗಳು ಸದುಪಯೋಗಪಡೆದು ಅಭಿವೃದ್ಧಿಯಾಗಬೇಕು ಎಂದರು.
ಬೆಳಗಾವಿ ರೋಟರಿ ಕ್ಲಬ್ ಅಧ್ಯಕ್ಷ ಸುಹಾಸ ಚಿಂದಕ, ಮನಿಷಾ ಹೆರೇಕರ್, ರಾಜು ಪೋತದಾರ, ಗಣೇಶ ದೇಶಪಾಂಡೆ, ಆರುಣ ದುರ್ಗಶೆಟ್ಟಿ, ಪ್ರಶಾಂತ ಹಾಲಪ್ಪನವರ, ರೋಟರಿ ಕಾರ್ಯದರ್ಶಿ ಅನಿಲ ಚಡಿಚಾಳ, ಖಜಾಂಚಿ ಸುನೀಲ ಪಾಟೀಲ, ಪದಾಧಿಕಾರಿಗಳಾದ ಡಾ.ಬಿ.ಎಸ್. ಮಹಾಂತಶೆಟ್ಟಿ, ಪ್ರಮೋದಕುಮಾರ ವಕ್ಕುಂದಮಠ, ಪ್ರುಲ್ ಪಾಟೀಲ, ನಾಗೇಶ ಮರಕುಂಬಿ, ಅರ್ಜುನ ಕಲಕುಟಕರ, ಗೌತಮ ಇಂಚಲ, ಸುರೇಶ ಉಡುಪಿ, ಆನಂದ ವಾಲಿ, ಶಿವಶಂಕರ ತಟವಾಟಿ, ಇನ್ನರ್‌ವ್ಹೀಲ್ ಅಧ್ಯಕ್ಷೆ ಸುಮಂಗಲಾ ಜಿಗಜಿನ್ನಿ, ವಿಜಯಾ ಕಳ್ಳಿಬಡ್ಡಿ, ಸವಿತಾ ಉಡುಪಿ, ಗಿರಿಜಾ ವಕ್ಕುಂದಮಠ, ಸುಷ್ಮಾ ಬಡಸ ಇತರರಿದ್ದರು.