ರೋಮಾಂಚನಕಾರಿ ಕೆಟಿಎಂ ಬೈಕ್ ಸಾಹಸ

ಹುಬ್ಬಳ್ಳಿ: ಧಾರವಾಡದಲ್ಲಿ ಶನಿವಾರ ಕೆಟಿಎಂ ಬೈಕ್​ಗಳ ರೋಮಾಂಚನಕಾರಿ ಸಾಹಸ ಪ್ರದರ್ಶನ ನಡೆಯಿತು.

ವೃತ್ತಿಪರ ಸಾಹಸಿ ಬೈಕ್ ಸವಾರರು ಮೈನವಿರೇಳಿಸುವಂತೆ ಸಾಹಸ. ಟ್ರಿಕ್​ಗಳನ್ನು ಪ್ರದರ್ಶಿಸಿದರು. ಧರ್ಮಸ್ಥಳ ಮಂಜು ನಾಥೇಶ್ವರ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ನಡೆದ ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನರು ಸಾಕ್ಷಿಯಾದರು. ಪ್ರೇಕ್ಷಕರು ಉಸಿರು ಬಿಗಿಹಿಡಿಯುವಂತೆ ಕೆಟಿಎಂ ಡ್ಯೂಕ್ ಬೈಕ್​ಗಳಲ್ಲಿ ಸವಾರರು ಸಾಹಸಗಳನ್ನು ಪ್ರದರ್ಶಿಸಿದರು. ಸಾರ್ವಜನಿಕರಿಗೆ ಉಚಿತ ಪ್ರವೇಶವಿತ್ತು.

ಕೆಟಿಎಂ ಬ್ರ್ಯಾಂಡ್ ಅಧಿಕ ಸಾಮರ್ಥ್ಯದ ರೇಸಿಂಗ್ ಬೈಕ್​ಗಳಿಗೆ ಹೆಸರಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ವೃತ್ತಿಪರ ಸಾಹಸಿ ಸವಾರರು ಈ ಪ್ರದರ್ಶನ ನೀಡುತ್ತಿದ್ದಾರೆ ಎಂದು ಬಜಾಜ್ ಆಟೋ ಲಿಮಿಟೆಡ್​ನ ಪೊ›ಬೈಕಿಂಗ್ ವಿಭಾಗದ ಉಪಾಧ್ಯಕ್ಷ ಸುಮೀತ ನಾರಂಗ್ ತಿಳಿಸಿದರು.

ಇದುವರೆಗೆ ತುಮಕೂರು, ಮಂಗಳೂರು, ಶಿವಮೊಗ್ಗ, ಕಲಬುರ್ಗಿ, ಹುಬ್ಬಳ್ಳಿ, ಹಾಸನ, ಧಾರವಾಡ, ಚಿಕ್ಕಮಗಳೂರು, ಗೋಕಾಕ, ಹೊಸಪೇಟೆ, ಮಂಗಳೂರು, ಉಡುಪಿ, ವಿಜಯಪುರ, ಕೋಲಾರ, ಚೆನ್ನೈ, ಇಂದೋರ್, ಕಂಚಿಪುರ, ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕೆಟಿಎಂ ಸಾಹಸ ಪ್ರದರ್ಶನ ನಡೆದಿವೆ.