ಕುರುಗೋಡು: ಕಳಪೆ ಬಿತ್ತನೆ ಬೀಜ ವಿತರಣೆ ಮಾಡಿದ್ದ ಕೋಳೂರಿನ ರೈತ ಉತ್ಪಾದಕ ಸಂಸ್ಥೆ ಮಂಗಳವಾರ ರೈತರಿಗೆ ಪರಿಹಾರ ನೀಡಲಾಯಿತು.

ರೈತ ಉತ್ಪಾದಕ ಸಂಸ್ಥೆ ಆಂಧ್ರ ಪ್ರದೇಶ ಮೂಲದ ಕಂಪನಿಯಿಂದ ಕೆಂಪು ತೊಗರಿ ಖರೀದಿಸಿ ತಾಲೂಕಿನ ವಿವಿಧ ಗ್ರಾಮದ ರೈತರಿಗೆ ಬಿತ್ತನೆಗೆ ನೀಡಿತ್ತು. ಕಳಪೆ ಬಿತ್ತನೆ ಬೀಜದ ಪರಿಣಾಮ ಬೆಳೆ ಕಾಳು ಕಟ್ಟದೆ ರೈತರಿಗೆ ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ರೈತರು ತಹಸೀಲ್ದಾರ್ ನರಸಪ್ಪ ಮೊರೆ ಹೋಗಿದ್ದರಿಂದ ಪರಿಹಾರ ನೀಡುವಂತೆ ರೈತ ಉತ್ಪಾದಕ ಕಂಪನಿಗೆ ತಹಸೀಲ್ದಾರ್ ಸೂಚಿಸಿದ್ದರು. ಪ್ರತಿ ಪಾಕೆಟ್‌ಗೆ ತಲಾ 1500 ರೂ. ನೀಡಲಾಗಿದೆ ಎಂದು ಸಂಸ್ಥೆ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಆದಿನಾರಾಯಣ ರೆಡ್ಡಿ, ಉಪಾಧ್ಯಕ್ಷ ಹೇಮರೆಡ್ಡಿ, ಸದಸ್ಯರಾದ ವೆಂಕಟರೆಡ್ಡಿ, ಆಗಲೂರು ಎರ‌್ರಿಸ್ವಾಮಿ, ಹನುಮಂತ, ಪಾಲಾಕ್ಷಿ, ದಮ್ಮೂರು ಶಂಕ್ರಪ್ಪ ಇದ್ದರು.