ಕಲಬುರಗಿ: ರಾಜ್ಯದಲ್ಲಿ ವಕ್ಫ್ ಹೆಸರಿನಲ್ಲಿ ರೈತರ ಜಮೀನಿಗೆ ಕೈ ಹಾಕಿದರೆ ಜನಾಂದೋಲನ ನಡೆಯಲಿದೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಎಚ್ಚರಿಕೆ ನೀಡಿದರು. ಇನ್ನು ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದು, ವಿಪಕ್ಷವಾದ ಬಿಜೆಪಿಯೂ ವಾಲ್ಮೀಕಿ, ಮೂಡಾ ನಂತರ ಇದೀಗ ವಕ್ಫ್ ಎನ್ನುತ್ತಿದೆ. ಕೂಡಲೇ ರೈತರ ಸಮಸ್ಯೆಗಳ ಕುರಿತು ಧ್ವನಿ ಎತ್ತಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ರಾಜ್ಯದಲ್ಲಿ ನಬಾರ್ಡ್ನ ಅನುದಾನ ಶೇ.೫೮ ಕಡಿತ ಮಾಡಲಾಗಿದೆ. ಸಹಕಾರ ಬ್ಯಾಂಕ್‌ಗೆ ೩ರಿಂದ ೫ ಲಕ್ಷ ರೂ. ಸಾಲ ನೀಡುತ್ತೇವೆ ಎನ್ನುತ್ತಿದ್ದು, ಎಲ್ಲಿಂದ ಕೊಡುತ್ತಾರೆ ತಿಳಿಯುತ್ತಿಲ್ಲ. ಎನ್‌ಡಿಆರ್‌ಎಫ್ ಪ್ರಕಾರ ಪರಿಹಾರ ನೀಡಿಲ್ಲ. ಫಲಸ ವಿಮಾ ಯೋಜನೆ ಅಡಿ ಸ್ಪಂದನೆ ದೊರಕಿಲ್ಲ. ಅಕಾಲಿಕ ಮಳೆಯಿಂದ ಬೆಳೆ ಹಾನಿ ಆಗಿದ್ದು, ಖರೀದಿ ಕೇಂದ್ರ ತೆಗೆಯುತ್ತಿಲ್ಲ. ಖರೀದಿ ಕೇಂದ್ರದ ಹೆಸರಿನಲ್ಲಿ ರೈತರಿಗೆ ವಂಚನೆ ಮಾಡಲಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು. ಸಾಲದ ನೋಟಿಸ್ ನೀಡುತ್ತಿರುವ ಬ್ಯಾಂಕ್‌ಗಳು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದರು. ಬಡಗಲಪುರ ನಾಗೇಂದ್ರ, ಶಿವಾನಂದ ಕುಗ್ವೆ, ಗೋಪಾಲ ಪಾಪೇಗೌಡ, ಮಲ್ಲಿಕಾರ್ಜುನ ಸತ್ಯಂಪೇಟ, ನಾಗರತ್ನ ಪಾಟೀಲ್, ಮಂಜುಳಾ ಭಜಂತ್ರಿ ಇತರರಿದ್ದರು.
ರೈತರ ಜಮೀನಿಗೆ ಕೈ ಹಾಕಿದರೆ ಜನಾಂದೋಲನ

You Might Also Like
ಈ ಸಮಸ್ಯೆಗಳಿರುವ ಜನರು, ಅಪ್ಪಿತಪ್ಪಿಯೂ ಸಹ ಬಿಸಿನೀರನ್ನು ಕುಡಿಯಬಾರದು! hot water
hot water: ಸಾಮಾನ್ಯವಾಗಿ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ವಯಸ್ಕರು…
ದಂಪತಿ ನಡುವೆ ಜಗಳ, ಹಣದ ಸಮಸ್ಯೆಗಳನ್ನು ತಪ್ಪಿಸಲು, ಮನೆಯ ಈ ಮೂಲೆಯಲ್ಲಿ ನವಿಲು ಗರಿಯನ್ನು ಇರಿಸಿ ಸಾಕು… Vastu Tips
Vastu Tips : ಪೌರಾಣಿಕ ಗ್ರಂಥಗಳ ಪ್ರಕಾರ, ಹಿಂದೂ ಧರ್ಮದಲ್ಲಿ ನವಿಲು ಗರಿಗಳಿಗೆ ವಿಶೇಷ ಸ್ಥಾನವಿದೆ. …
ಮಧ್ಯಾಹ್ನದ ಊಟದಲ್ಲಿ ಈ 2 ಪದಾರ್ಥಗಳನ್ನು ತಿಂದರೆ ನಿಮ್ಮನ್ನು ಮಧ್ಯಾಹ್ನ ಕಾಡುವ ನಿದ್ರೆ ಮಾಯ!
sleep: ಮಧ್ಯಾಹ್ನ ಊಟ ಮಾಡಿದ ನಂತರ ನಿದ್ರೆ ಬರುವುದು ಸಹಜ. ಈ ರೀತಿಯ ನಿದ್ರೆ ಬರುವುದರಿಂದ,…