More

    ರೈತರ ಕಬ್ಬಿನ ಬಾಕಿ ಪಾವತಿಗೆ ಸೂಚನೆ

    ಬಾಗಲಕೋಟೆ: ಕಳೆದ ೨೦೧೮-೧೯, ೨೦೨೧-೨೨ನೇ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಹಾಗೂ ರೈತರೊಂದಿಗೆ ಒಪ್ಪಂದ ಮಾಡಿಕೊಂಡ ಹೆಚ್ಚುವರಿ ಬಿಲ್ಲಿನ ಮೊತ್ತ ಪಾವತಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಸೂಚನೆ ನೀಡಿದರು.
    ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ರೈತರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಧೋಳನ ನಿರಾಣಿ ಶುಗರ್ಸ
    ವರು ಬಾಕಿ ಇರುವ ೨೭.೭೫ ಕೋಟಿ ರೂ.ಗಳ ಪೈಕಿ ೧೨ ಕೋಟಿ ರೂ. ಪಾವತಿಸಿದ್ದು, ಉಳಿದ ಹಣವನ್ನು ತುರ್ತಾಗಿ ಪಾವತಿಸಲು ಸೂಚಿಸಿದರು. ಕುಂದರಗಿ ಜೆಮ್ ಶುಗರ್ಸನವರು ೮.೩೭ ಕೋಟಿ ರೂ.ಗಳ ಬಾಕಿ ಹಣದಲ್ಲಿ ೬ ಕೋಟಿ ರೂ. ಪಾವತಿಸಿದ್ದು, ಉಳಿದ ಹಣವನ್ನು ಪಾವತಿಗೆ ಜಿಲ್ಲಾಽಕಾರಿಗಳು ಸೂಚಿಸಿದರು.
    ಕಳೆದ ೨೦೨೧-೨೨ರ ಹಂಗಾಮಿನಲ್ಲಿ ಹೆಚ್ಚುವರಿಯಾಗಿ ಪ್ರತಿ ಮೆಟ್ರಿಕ್ ಟನ್‌ಗೆ ೬೨ ರೂ.ಗಳನ್ನು ನೀಡುವುದಾಗಿ ತಿಳಿಸಿದ್ದರು. ಜಿಲ್ಲೆಯಲ್ಲಿರುವ ಒಟ್ಟು ೧೩ ಸಕ್ಕರೆ ಕಾರ್ಖಾನೆಗಳ ಪೈಕಿ ಇಐಡಿ ಪ್ಯಾರಿ ಶುರ‍್ಸ್, ಬೀಳಗಿ ಶುಗರ್ಸ ಮತ್ತು ಜಮಖಂಡಿ ಶುಗರ್ಸ
    ವರು ಹೆಚ್ಚುವರಿ ೬೨ ರೂ.ಗಳ ಬಗ್ಗೆ ಘೋಷಣೆ ಮಾಡಿಲ್ಲ. ಆದ್ದರಿಂದ ಪಾವತಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಲಾಗುತ್ತದೆ ಎಂದು ಸಭೆಗೆ ತಿಳಿಸಿದರು. ಉಳಿದ ೧೦ ಸಕ್ಕರೆ ಕಾರ್ಖಾನೆ ಮಾಲೀಕರು ಡಿಸೆಂಬರ ಅಂತ್ಯಕ್ಕೆ ಇಲ್ಲವೇ ಹಂಗಾಮು ಮುಗಿಯುವ ಒಳಗಾಗಿ ಹೆಚ್ಚುವರಿ ಹಣ ಪಾತಿಸುವುದಾಗಿ ಕಾರ್ಖಾನೆಗಳ ಪ್ರತಿನಿಧಿಗಳು ಸಭೆಗೆ ತಿಳಿಸಿದರು.
    ಕಟಾವು ಹಾಗೂ ಸಾಗಾಣಿಕೆ ಮಾಡುವವರಿಗೆ ನೀಡುವ ಹಣವನ್ನು ಮಾತ್ರ ತಮ್ಮ ಹಣದಲ್ಲಿ ಕಡಿತಗೊಳಿಸಬೇಕು. ಇಳುವರಿ ಮತ್ತು ತೂಕದಲ್ಲಿ ಮೋಸ ಮಾಡುತ್ತಿದ್ದು, ಕಳೆದ ೧೦ ವರ್ಷಗಲಲ್ಲಿ ಸರಾಸರಿ ರಿಕವರಿ ೧೪ ರಿಂದ ೧೫ ಇರಬೇಕಿತ್ತು. ಆದರೆ ಕೇವಲ ೧೦ ರಿಂದ ೧೧ ಮಾತ್ರ ತೋರಿಸುತ್ತಿದ್ದಾರೆಂದು ರೈತರು ಸಭೆಗೆ ತಿಳಿಸಿದರು. ಅಲ್ಲದೇ ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು, ಸಕ್ಕರೆ ಆಯುಕ್ತರುಗಳೊಂದಿಗೆ ಸಭೆ ಕರೆಯುವಂತೆ ಜಿಲ್ಲಾಽಕಾರಿಗಳಿಗೆ ಒತ್ತಾಯಿಸಿದರು.
    ಬಾಕಿ ಪಾವತಿಗೆ ಕಾರ್ಖಾನೆಗಳಿಂದ ಆಗಮಿಸಿದ ಪ್ರತಿನಿಧಿಗಳು ಹಾರಿಕೆ ಉತ್ತರ ನೀಡುತ್ತಿರುವದನ್ನು ಬೇಸರ ವ್ಯಕ್ತಪಡಿಸಿದ ಅವರು, ಮುಂದಿನ ಸಭೆಯಲ್ಲಿ ಕಳಿದ ಪ್ರಶ್ನೆಗೆ ಉತ್ತರ ನೀಡುವಂತಿರಬೇಕು. ಇಲ್ಲವಾದಲ್ಲಿ ಅಂತವರು ಸಭೆಗೆ ಬರುವುದು ಅವಶ್ಯಕತೆ ಇಲ್ಲ. ಸಾಗಾಣಿಕೆ ವೆಚ್ಚದಲ್ಲಿ ಸರ್ಕಾರ ನಿಗಧಿಪಡಿಸಿದ ನಿಯಮಾನುಸಾರ ಕಡಿತಗೊಳಿಸಬೇಕು. ಮೋಸ ಮಾಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಡಿಜಿಟಲ್ ತೂಕದ ಯಂತ್ರವನ್ನು ಕಾರ್ಖಾನೆಗಳು ಕಡ್ಡಾಯವಾಗಿ ಅಳವಡಿಸಲು ಸೂಚಿಸಿದರು.
    ಸಭೆಯಲ್ಲಿ ಜಿ.ಪಂ ಸಿಇಒ ಶಶಿಧರ ಕುರೇರ, ಉಪವಿಭಾಗಾಽಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ಮುಖ್ಯ ಲೆಕ್ಕಾಧಿಕಾರಿ ಕೆ.ಎಂ.ಚೌದರಿ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಗಳ ಪ್ರತಿನಿಽಗಳು, ರೈತರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.

    : ಕಳೆದ ೨೦೧೮-೧೯, ೨೦೨೧-೨೨ನೇ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಹಾಗೂ ರೈತರೊಂದಿಗೆ ಒಪ್ಪಂದ ಮಾಡಿಕೊಂಡ ಹೆಚ್ಚುವರಿ ಬಿಲ್ಲಿನ ಮೊತ್ತ ಪಾವತಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts