ರೈತರು, ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿ

blank

ಶಿಕಾರಿಪುರ: ಕರೊನಾ ವೈರಸ್ ಸಂಕಷ್ಟದ ಸಮಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್​ಫೋರ್ಸ್​ನಿಂದ ಹಿಡಿದು ತಾಲೂಕು ಮಟ್ಟದವರೆಗೆ ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿದ್ದು ಮುಂದಿನ ದಿನಗಳಲ್ಲಿ ಕೂಡ ಅತ್ಯಂತ ಸಮರ್ಥವಾಗಿ ನಿಭಾಯಿಸುವ ಅಗತ್ಯವಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗá-ರá-ವಾರ ಸಂಜೆ ಏರ್ಪಡಿದ್ದ ಅಧಿಕಾರಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕರೊನಾ ಹೆಮ್ಮಾರಿಯ ಹೊಡೆತದಿಂದ ಸಾಕಷ್ಟು ತೊಂದರೆಗಳಾದ್ದರಿಂದ ಎಲ್ಲ ಇಲಾಖೆಯ ಅಧಿಕಾರಿಗಳು ರೈತರು ಮತ್ತು ಸಾರ್ಜನಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಬೇಕು. ಕಡತಗಳ ಶೀಘ್ರ ವಿಲೇವಾರಿಗೆ ಮೊದಲ ಆದ್ಯತೆ ನೀಡಬೇಕು. ಕಾಲಮಿತಿಯೊಳಗೆ ಕೆಲಸ ಮಾಡಿ ಕೊಡಬೇಕು ಎಂದು ಸೂಚಿಸಿದರು.

ಸಿಎಂ ಕ್ಷೇತ್ರವಾದ್ದರಿಂದ ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಜವಾಬ್ದಾರಿ ಹೆಚ್ಚಿರುತ್ತದೆ. ಯಾವುದೇ ಅರ್ಜಿಗಳು ಬರಲಿ ಅದನ್ನು ಬೇಗ ಮಾಡಿಕೊಡಬೇಕು. ಸರ್ಕಾರದ ಮಾಹಿತಿ ಜನರಿಗೆ ತಲುಪುವಂತೆ ಮಾಡುವುದಲ್ಲದೇ ಜನದನಿಯಾಗಿ ಕೆಲಸ ಮಾಡುವ ಅಗತ್ಯವಿದೆ ಎಂದರು.

ತಾಲೂಕಿನಲ್ಲಿ ವಸತಿಹೀನರನ್ನು ಮತ್ತು ನಿವೇಶನ ರಹಿತರನ್ನು ಗá-ರá-ತಿಸá-ವುದು ನಮ್ಮ ಮೊದಲ ಕರ್ತವ್ಯವಾಗಿದೆ. ಜಲಸಂರಕ್ಷಣೆಯ ಕಾರ್ಯಕ್ರಮಗಳನ್ನು ಹೆಚ್ಚು ಮಾಡಬೇಕು. ತಾಲೂಕಿನಲ್ಲಿ ಸಾಕಷ್ಟು ಗೋಮಾಳ ಒತ್ತುವರಿ ಆಗಿರá-ವುದರಿಂದ ಅದನ್ನು ನಿವೇಶನವನ್ನಾಗಿ ಪರಿವರ್ತಿಸಿ ಬಡವರಿಗೆ ನೀಡಿ. ನರೇಗಾ ಯೋಜನೆಯಡಿಯಲ್ಲಿ ಜನರ ಕೈಗೆ ಕೆಲಸ ನೀಡಬೇಕು. ಈಗ ಅದರ ಅಗತ್ಯ ಬಹಳ ಇದೆ. ಆ ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಇದೊಂದು ಅಭಿಯಾನದಂತೆ ಆಗಬೇಕು ಎಂದು ಹೇಳಿದರು.

ಘನತ್ಯಾಜ್ಯ ಘಟಕಗಳ ಮೂಲಕ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಮಳೆಗಾಲವಾದ್ದರಿಂದ ರಸ್ತೆಗಳು, ಚರಂಡಿಗಳ ಕಡೆಗೆ ಗಮನಹರಿಸುವ ಕೆಲಸವಾಗಬೇಕು. ಸರ್ಕಾರದ ಯೋಜನೆಗಳು ನಿಮ್ಮ ಮೂಲಕವೇ ಕಾರ್ಯರೂಪಕ್ಕೆ ಬರುವುದರಿಂದ ತ್ವರಿತಗತಿಯಲ್ಲಿ ಮಾಡುವುದು ಒಳ್ಳೆಯದು. ಪ್ರಕೃತಿ ವಿಕೋಪದಿಂದ ಮಳೆಯ ಬಗ್ಗೆ ನಿಖರತೆ ಇರುವುದಿಲ್ಲ. ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ತಾಪಂ ಅಧ್ಯಕ್ಷ ಉಡುಗಣಿ ಪ್ರಕಾಶ್, ಡಿಸಿ ಕೆ.ಬಿ.ಶಿವಕುಮಾರ್, ಉಪವಿಭಾಗ ಅಧಿಕಾರಿ ಡಾ. ಎಲ್.ನಾಗರಾಜ್, ತಹಸಿಲ್ದಾರ್ ಮತ್ತು ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಶಿಕಾರಿಪುರ ತಾಲೂಕಿನಲ್ಲಿ ಅರಣ್ಯಹಕ್ಕಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ತ್ವರಿತವಾಗಿ ನಡೆಯಬೇಕು. ರೈತರಿಗೆ ಹಿಡುವಳಿ ಸರ್ಟಿಫಿಕೇಟ್ ನೀಡುವಾಗ ಅಧಿಕಾರಿಗಳು ಬಹಳ ಜಾಗೃತರಾಗಿರಬೇಕು. ಅಗತ್ಯವಾಗಿ ಪರಿಶೀಲಿಸಿ ನೀಡá-ವುದು ಉತ್ತಮ.

| ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ

Share This Article

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango

mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…

ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ..  Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.  ಚಿನ್ನದ ಅಂಗಡಿಗಳು ವ್ಯಾಪಾರದಿಂದ…

ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್​​ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice

  Sugarcane Juice: ಕಬ್ಬಿನ ಜ್ಯೂಸ್​​ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…