ಸಂಬರಗಿ: ಸಾಲ ಪಡೆದ ರೈತರು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದು ಮಲಾಬಾದ ವಿವಿಧೋದ್ದೇಶಗಳ ಪಿಕೆಪಿಎಸ್ ಅಧ್ಯಕ್ಷ ಶಿವಾನಂದ ಕುಳ್ಳೊಳ್ಳಿ ಹೇಳಿದರು.
ಸಮೀಪದ ಮಲಾಬಾದ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಸಂಘವು 6.22 ಕೋಟಿ ರೂ. ಸಾಲ ವಿತರಿಸಿದೆ. ಶೇ. 95 ಸಾಲ ವಸೂಲಾತಿ ಆಗಿದೆ. 10.5 ಲಕ್ಷ ರೂ. ನಿವ್ವಳ ಲಾಭ ಪಡೆದಿದೆ.ಷೇರು ಬಂಡವಾಳ 54.55 ಲಕ್ಷ ರೂ. 2.83 ಕೋಟಿ ರೂ. ಠೇವಣಿ ಇದೆ. ಸಂಘದ ಸದಸ್ಯರ ಸಹಕಾರದಿಂದ ಸಂಘ ಪ್ರಗತಿಯಲ್ಲಿದೆ. ಸಂಘದ ರೈತರ ಆರ್ಥಿಕ ಅಬಿವೃದ್ಧಿಗೆ ಹೆಚ್ಚು ಸಾಲ ನೀಡಲು ಶ್ರಮಿಸಲಾಗುವುದು ಎಂದರು.
ಸದಸ್ಯರಿಗೆ ಖಾತಾ ಪುಸ್ತಕ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷ ಅಪ್ಪಾಸಾಬ ಸನದಿ, ನಿರ್ದೇಶಕ ಮಹಾದೇವ ಕೂಳ್ಳೊಳ್ಳಿ, ಶ್ರೀಶೈಲ ಖೋತ, ಮುರುಗಪ್ಪ ಗುಂಜಿಗಾವಿ, ಪ್ರಭಾಕರ ಪಾಟೀಲ, ಶಾಂತಾಬಾಯಿ ಹೊನಕಾಂಡೆ, ಅಶೋಕ ಚೌಗಲಾ, ಸತ್ಯಪ್ಪ ಮಾಳಿ, ಅಶೋಕ ಪಾಟೀಲ, ಮಹಾದೇವಿ ಕುಳ್ಳೊಳ್ಳಿ, ಶಾಂತಾಬಾಯಿ ಮಾನೆ, ಸಿಇಒ ಶ್ರೀಶೈಲ ಮಸಾಳೆ, ಸೋಮಲಿಂಗಯ್ಯ ಮಠಪತಿ, ಮುರಗಪ್ಪ ಮಾನೆ, ರಾಮ ಜೈನಾಪುರ, ಮುಖಂಡರಾದ ಅಷ್ಪಕ ಘಟನಹಟ್ಟಿ, ರಾಜು ಕುಳ್ಳೊಳ್ಳಿ, ಮಂಜುನಾಥ ಪಾಟೀಲ, ಮಹಾದೇವ ಪಾಟೀಲ, ಬಾಳು ಖೋತ ಇತರರಿದ್ದರು.