More

  ರೈತರಿಗೆ ವಿಮಾ ಪರಿಹಾರ ಹಣ ಮಂಜೂರು ಮಾಡಿಸಿ

  ತಿಕೋಟಾ: ತಾಲೂಕಿನಾದ್ಯಂತ ರೈತರು ಆಯಾ ಬೆಳೆಗಳಿಗೆ ಅನುಗುಣವಾಗಿ ವಿಮಾಕಂತು ತುಂಬಿದ್ದು ಇನ್ನೂವರೆಗೂ ಕೆಲವು ರೈತರ ಖಾತೆಗಳಿಗೆ ವಿಮಾ ಹಣ ಜಮಾ ಆಗಿರುವುದಿಲ್ಲ ಎಂದು ರೈತರು ತಹಸೀಲ್ದಾರ್ ಸುರೇಶ ಮುಂಜೆ ಅವರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್.ಸಾಲಿಮಠ ಮನವಿ ಸಲ್ಲಿಸಿ ಮಾತನಾಡಿ, ಜಿಲ್ಲಾಧಿಕಾರಿ ಅವರು ಬರಗಾಲದಿಂದ ಬೆಳೆ ನಷ್ಟಗೊಂಡ ರೈತರನ್ನು ಖುದ್ದಾಗಿ ಸರ್ವೇ ಮಾಡಿಸಿ ವಿಮಾ ಮಂಜೂರಾತಿ ಮಾಡಿಸಬೇಕು. ಕೂಡಲೇ ವಿಮಾ ಪರಿಹಾರ ಹಣ ಬಾರದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.

  ಸರ್ಕಾರ ಬರಗಾಲ ಘೋಷಣೆ ಮಾಡಿದರೂ ಸ್ಥಳೀಯ ಬ್ಯಾಂಕ್, ಫೈನಾನ್ಸ್ ಹಾಗೂ ಸಹಕಾರಿ ಸೊಸೈಟಿಯವರು ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಸಾಲ ವಸೂಲಾತಿಯನ್ನು ಈ ವರ್ಷ ಸಂಪೂರ್ಣ ಕೈಬಿಡುವಂತೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.

  ಮುಖಂಡರಾದ ನಜೀರ ನಂದರಗಿ, ಹಣಮಂತ ಬ್ಯಾಡಗಿ, ಟೋಪುಗೌಡ ಪಾಟೀಲ, ಎಸ್.ಎಸ್.ಜಿದ್ದಿ, ಖಾದರಸಾಬ ವಾಲಿಕಾರ, ಗೈಬುಸಾಬ ತಿಗಣಿಬಿದರಿ, ಎಸ್.ಎಸ್.ಹೊಸಮನಿ, ಮಹಾದೇವ ಕದಂ, ಎಂ.ಡಿ.ಖುರ್ಫಿ, ಸುಭಾಷ ವಳಸಂಗ, ಜಿ.ಜಿ.ಪವಾರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts