More

    ರೈತರಿಗೆ ಬೆಳೆದರ್ಶಕ ಆಪ್ ಗುಮ್ಮ

    ಪರಶುರಾಮ ಕೆರಿ ಹಾವೇರಿ
    ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಲಾದ ಬೆಳೆ ಮಾಹಿತಿಯನ್ನು ಕಳೆದ ವರ್ಷದಿಂದ ಬೆಳೆದರ್ಶಕ ಆಪ್ ಮೂಲಕ ಸಂಗ್ರಹಿಸಲಾಗುತ್ತಿದೆ. ಆದರೆ, ಈ ಸಮೀಕ್ಷೆ ಸಮರ್ಪಕವಾಗಿಲ್ಲ ಎಂಬ ಆರೋಪ ರೈತರಿಂದ ಕೇಳಿಬಂದಿತ್ತು. ಇದೀಗ ಕೃಷಿ ಇಲಾಖೆ ತನ್ನ ತಪ್ಪು ಸರಿಪಡಿಸಿಕೊಳ್ಳಲು ರೈತರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.</p><p>ಜಿಲ್ಲೆಯ ಬಹುತೇಕ ರೈತರಿಗೆ ನೇಗಿಲು ಊಳುವುದು, ಬೆಳೆ ತೆಗೆಯುವುದಷ್ಟೇ ಗೊತ್ತು. ಅವರೀಗ ಕೃಷಿ ಇಲಾಖೆಯ ತಪ್ಪು ಸರಿಪಡಿಸಲು ಬೆಳೆದರ್ಶಕ ಆಪ್​ನಲ್ಲಿ ಸಂಗ್ರಹಿಸುವ ಮಾಹಿತಿ ಸರಿಯಿದೆಯೇ ಎಂಬುದನ್ನು ಪರಿಶೀಲಿಸಿ ಆಕ್ಷೇಪಣೆಗಳನ್ನು ಜ. 30ರೊಳಗೆ ಸಲ್ಲಿಸುವಂತೆ ಸೂಚನೆ ನೀಡಿದೆ. ಆದರೆ, ಬಹುಪಾಲು ರೈತರ ಬಳಿ ಅಂಡ್ರಾಯ್್ಡ ಮೊಬೈಲ್ ಇಲ್ಲ. ಇದ್ದರೂ ಅದರಲ್ಲಿ ಬೆಳೆದರ್ಶಕ ಆಪ್​ನ್ನು ಡೌನ್​ಲೋಡ್ ಮಾಡಿಕೊಂಡು ಆಕ್ಷೇಪಣೆ ಸಲ್ಲಿಸುವುದು ರೈತರಿಗೆ ಕಷ್ಟದ ಕೆಲಸ. ಉತ್ತಿ, ಬಿತ್ತಿ ಬೆಳೆ ಬೆಳೆಯಲು ತಿಳಿಸಿದರೆ ಅದನ್ನು ಸುಲಭವಾಗಿ ಮಾಡುತ್ತೇವೆ. ಸರ್ಕಾರ ಕೃಷಿ ಇಲಾಖೆಯನ್ನು ರೈತರ ಅನುಕೂಲಕ್ಕಾಗಿ ತೆರೆದಿದ್ದರೆ, ಅವರೇ ಅದನ್ನು ಸರಿಪಡಿಸಬೇಕು. ಅದು ಬಿಟ್ಟು ಅದರಲ್ಲಿನ ತಪ್ಪುಗಳನ್ನು ಸರಿಪಡಿಸಿ ಎಂದು ರೈತರಿಗೆ ತಿಳಿಸುವುದು ಯಾವ ನಿಯಮ ? ಇದು ನಮಗೆ ಅವಶ್ಯವಾಗಿರಲಿಲ್ಲ ಎಂದು ರೈತರು ಆರೋಪಿಸಿದ್ದಾರೆ.
    ಆಕ್ಷೇಪಣೆ ಸಲ್ಲಿಸದಿದ್ದರೆ…. ಒಂದೊಮ್ಮೆ ರೈತರು ಜ. 30ರೊಳಗೆ ಆಪ್​ನಲ್ಲಿ ಆಕ್ಷೇಪಣೆ ಸಲ್ಲಿಸದಿದ್ದರೆ ದೊಡ್ಡ ಶಾಕ್ ಕಾದಿದೆ. ಈಗಾಗಲೇ ಬೆಳೆ ವಿಮೆ ತುಂಬಿರುವ ರೈತರಿಗೆ ಆಪ್​ನಲ್ಲಿ ನಮೂದಾಗಿರುವ ಬೆಳೆ ಬೇರೆಯಾಗಿದ್ದರೆ ಅವರಿಗೆ ವಿಮೆ ಪರಿಹಾರದ ಹಣ ಬರುವುದೇ ಇಲ್ಲ. ಈಗಾಗಲೇ 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ತುಂಬಿದ 5,267 ರೈತರಿಗೆ 10.65 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರ ಬಿಡುಗಡೆದೆ. ಆದರೆ, ವಿಮೆ ಕಂಪನಿಯವರು ಆಪ್​ನಲ್ಲಿ ನಮೂದಾಗಿರುವ ಬೆಳೆ ಬೇರೆ ರೈತರು ವಿಮೆ ತುಂಬಿದ ಬೆಳೆ ಕಾರಣಕ್ಕೆ ತಡೆ ಹಿಡಿದಿದ್ದಾರೆ. ಮುಂದೆ ಬೆಳೆ ವಿಮೆಯನ್ನು ಇದೇ ಆಪ್ ಮಾಹಿತಿ ಆಧರಿಸಿ ನೀಡುವ ಉದ್ದೇಶವಿರುವುದರಿಂದ ರೈತರು ಅನಿವಾರ್ಯವಾಗಿ ಆಕ್ಷೇಪಣೆ ಸಲ್ಲಿಸಬೇಕಿದೆ. ಆದರೆ, ಈ ಮಾರ್ಗ ರೈತರಿಗೆ ಅನುಕೂಲವಾಗಿಲ್ಲ ಎನ್ನುತ್ತಾರೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ.
    ಮಧ್ಯವರ್ತಿಗಳ ಮೊರೆ… ಬೆಳೆದರ್ಶಕ ಆಪ್​ನಲ್ಲಿ ಆಕ್ಷೇಪಣೆ ಸಲ್ಲಿಸಲೆಂದೇ ಕೆಲ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದು, ರೈತರಿಂದ ಆಪ್​ನಲ್ಲಿ ಆಕ್ಷೇಪಣೆ ಸಲ್ಲಿಸಲು 50 ರೂ.ಗಳನ್ನು ಪಡೆಯುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆಯಾದರೂ ಅಲ್ಲಿನ ಸಿಬ್ಬಂದಿ ಈ ಕಾರ್ಯವನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಮೊಬೈಲ್​ನಲ್ಲಿಯೇ ಮಾಡಿಬಿಡಿ ಎಂದು ನೇರವಾಗಿ ಹೇಳುತ್ತಿದ್ದಾರೆ ಎಂದು ರೈತರು ಆರೋಪಿಸುತ್ತಾರೆ.
    ಕೃಷಿ ಇಲಾಖೆ ಸಿಬ್ಬಂದಿ ಬೆಳೆದರ್ಶಕ ಆಪ್​ನಲ್ಲಿ ಜಮೀನಿಗೆ ಹೋಗಿ ಮಾಹಿತಿ ಅಪ್​ಲೋಡ್ ಮಾಡಬೇಕು. ಆದರೆ ಆಪ್​ನಲ್ಲಿ 100 ಮೀ ವ್ಯಾಪ್ತಿಯಲ್ಲಿ ಸರ್ವೆ ನಂಬರ್ ತೋರಿಸುತ್ತದೆ. ಇದರಿಂದ ಸಮೀಕ್ಷೆಗೆ ಬಂದ ಕೃಷಿ ಇಲಾಖೆಯ ಗುತ್ತಿಗೆ ಸಿಬ್ಬಂದಿ ಯಾವುದೋ ಸರ್ವೆ ನಂಬರ್​ಗೆ ಯಾರದೋ ಬೆಳೆಯ ಫೋಟೋ ಅಪ್​ಲೋಡ್ ಮಾಡಿದ್ದಾರೆ. ಅಲ್ಲದೆ, ಜುಲೈನಲ್ಲಿ ಸಮೀಕ್ಷೆ ನಡೆದಿರುವುದರಿಂದ ಮಳೆಯಿಂದಾಗಿ ಜಮೀನಿನಲ್ಲಿ ಸಂಚರಿಸಲಾಗದೇ ಆಪ್​ನಲ್ಲಿ ಸರ್ವೆ ನಂಬರ್ ಬಂದ ಕೂಡಲೆ ಬೇರೆ ರೈತರ ಬೆಳೆಯ ಫೋಟೋವನ್ನೇ ನಮೂದಿಸಿದ್ದಾರೆ. ಈ ಗೊಂದಲಗಳು ಬಹಳಷ್ಟಾಗಿದ್ದು, ಕೃಷಿ ಇಲಾಖೆಗೂ ತಿಳಿಸಿದ್ದೇವೆ. ಆದರೂ ಅವರು ರೈತರಿಗೆ ಆಕ್ಷೇಪಣೆ ಸಲ್ಲಿಸಲು ತಿಳಿಸಿದ್ದಾರೆ. ಜ. 28ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ವಿಷಯದ ಕುರಿತು ಜಿಲ್ಲಾಡಳಿತಕ್ಕೆ ತಿಳಿಸುತ್ತೇವೆ.
    ಮಲ್ಲಿಕಾರ್ಜುನ ಬಳ್ಳಾರಿ, ರೈತ ಸಂಘ ಹಾಗೂ ಹಸಿರುಸೇನೆ ಪ್ರಧಾನ ಕಾರ್ಯದರ್ಶಿ

    ಬೆಳೆದರ್ಶಕ ಮೊಬೈಲ್​ಆಪ್​ನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದೆ. ಇದರಲ್ಲಿ ರೈತರು ತಾವು ಬೆಳೆದ ಬೆಳೆ ಬೇರೆ ನಮೂದಾಗಿದ್ದರೆ ಆಕ್ಷೇಪಣೆ ಸಲ್ಲಿಸಲು ಜ. 30ರವರೆಗೆ ಅವಕಾಶ ಕಲ್ಪಿಸಲಾಗಿದೆ. ಬೆಳೆದರ್ಶಕ ಮೊಬೈಲ್ ಆಪ್ ಮೂಲಕ ಅಥವಾ ಬೆಳೆಸಮೀಕ್ಷೆ ತಂತ್ರಾಂಶದ ಮೂಲಕ ರೈತರ ಬೆಳೆ ಮಾಹಿತಿ, ವಿಸ್ತೀರ್ಣದ ಮಾಹಿತಿ ಕುರಿತು ಆಕ್ಷೇಪಣೆ ಸಲ್ಲಿಸಬಹುದು. ಇದಲ್ಲದೇ ರೈತರು ಲಿಖಿತವಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಅಲ್ಲದೆ, ಬೆಳೆ ಸಮೀಕ್ಷೆ ಮಾಹಿತಿ ಪ್ರಕಾರ ಬೆಳೆ ಸರಿಯಿದ್ದು, ಬೆಳೆಯ ವಿಸ್ತೀರ್ಣ ಕಡಿಮೆ ನಮೂದಾಗಿದ್ದರೂ ರೈತರು ಆಕ್ಷೇಪಣೆ ವ್ಯಕ್ತಪಡಿಸಬಹುದು.
     ಬಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts