ಹೊಸಪೇಟೆ: ಈ ಸಾಲಿನ ಹಿಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಉಂಟಾದ ಬೆಳೆಹಾನಿ ಪರಿಹಾರವನ್ನು ಪಾವತಿಸುವ ಕುರಿತಂತೆ ಬೆಳೆ ಹಾನಿ ಜಂಟಿ ಸಮೀಕ್ಷೆ ಕೈಗೊಂಡು ಹಾನಿಯಾದ ರೈತರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.
ಜಿಲ್ಲೆಯ ಹಿಂಗಾರು ಹಂಗಾಮಿನ ಬೆಳೆ ಹಾನಿಯ ಕುರಿತು ಜಂಟಿ ಸಮೀಕ್ಷೆ ಮಾಡಿದ ಬೆಳೆ ಹಾನಿಯ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ತಯಾರಿಸಿ ರೈತ ಸಂಪರ್ಕ ಕೇಂದ್ರ, ತಹಸೀಲ್ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಹಾಗೂvijayanagara.nic.gov.in ವೆಬ್‌ಸೈಟ್‌ನಲ್ಲಿ ರೈತರ ವಿವರಗಳನ್ನು ಪ್ರಕಟಿಸಲಾಗಿದೆ. ರೈತರು ಪಟ್ಟಿಯನ್ನು ಅವಲೋಕಿಸಿ ಬೆಳೆ ಹಾನಿ ವಿಸ್ತೀರ್ಣ, ಬೆಳಹಾನಿ ವಿವರ, ಬೆಳೆ ಹಾನಿ ನಷ್ಟ ಇತ್ಯಾದಿಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ನ.13 ರೊಳಗಾಗಿ ಆಯಾ ತಾಲೂಕಿನ ತಹಸೀಲ್, ಕೃಷಿ, ತೋಟಗಾರಿಕಾ ಕಚೇರಿಗೆ ವಿವರಗಳೊಂದಿಗೆ ಸಲ್ಲಿಸಲು ತಿಳಿಸಲಾಗಿದೆ.