ಕೊಪ್ಪಳ:ತಾಲೂಕಿನ ಇಂದರಿಗಿಯಲ್ಲಿ ಹೊಲದಲ್ಲಿ ಜಾನುವಾರು ನೋಡಿಕೊಂಡು ಬರಲು ತೆರಳಿದ್ದ 45 ವರ್ಷದ ರೈತ ಕರಿ ಹನುಮಪ್ಪ ಕುರಿ ಎಂಬಾತನ ಮೇಲೆ ಕರಡಿ ದಾಳಿ ಮಾಡಿದೆ.
ಬುಧವಾರ ತಡರಾತ್ರಿ ಘಟನೆ ನಡೆದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಮೀನಿನ ಕೊಟ್ಟಿಗೆಯಲ್ಲಿ ಜಾನುವಾರು ನೋಡಿಕೊಂಡು ಬರಲು ತೆರಳಿದಾಗ ಕರಡಿ ಮೇಲೆರಗಿದೆ. ತಲೆ ಹಾಗೂ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ವಿಷಯ ತಿಳಿದು ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ಭಾಗದಲ್ಲಿ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕರಡಿಧಾಮ ರಚಿಸುವಂತೆ ಬಹುದಿನದಿಂದ ಬೇಡಿಕೆ ಇದೆ. ಶಾಸಕ ಜನಾರ್ದನ ರೆಡ್ಡಿಗೂ ಬೇಡಿಕೆ ಈಡೇರಿಕೆಗೆ ಮನವಿ ಮಾಡಲಾಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ ಘೋಷಿಸಿದಲ್ಲಿ ರೈತರು ಹಾಗೂ ಕಾಡು ಪ್ರಾಣಿಗಳ ರಕ್ಷಣೆಗೆ ಅನುಕೂಲವಾಗಲಿದೆ ಎಂದರು.