ಮುಂಡಗೋಡ: ತಾಲೂಕಿನಲ್ಲಿ ಯಾವುದೇ ರೇಷನ್ ಅಂಗಡಿಗಳನ್ನು ಬಂದ್ ಮಾಡಿಲ್ಲ ರೋಗಾಣು ಹರಡುವ ಕಾರಣದಿಂದ ಹೆಬ್ಬೆಟ್ಟು ಗುರುತಿಸುವಿಕೆಯನ್ನು ತೆಗೆದುಕೊಳ್ಳುತ್ತಿಲ್ಲ ಬದಲಾಗಿ ಎಲ್ಲ ರೇಷನ್ ಅಂಗಡಿಗಳಲ್ಲಿ ಗ್ರಾಹಕರಿಗೆ ಟೋಕನ್ ನೀಡುವ ಪದ್ಧತಿ ಮಾಡಲಾಗಿದೆ ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.
ಎಲ್ಲರಿಗೂ ರೇಷನ್ ವಿತರಣೆ ಮಾಡಲಾಗುವುದು. ಕುಟುಂಬದ ಮುಖ್ಯಸ್ಥನ ಆಧಾರ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿ ಆಧಾರದ ಮೇಲೆ ರೇಷನ್ ವಿತರಣೆ ಮಾಡಲಾಗುತ್ತದೆ. ಆಕಸ್ಮಾತ್ತಾಗಿ ಆಧಾರ ಕಾರ್ಡ್ನಲ್ಲಿ ಮೊಬೈಲ್ ಸಂಖ್ಯೆ ಇಲ್ಲದೇ ಹೋದಲ್ಲಿ ಅಥವಾ ಆ ಮೊಬೈಲ್ ಸಂಖ್ಯೆ ಬಳಕೆಯಲ್ಲಿ ಇಲ್ಲದಿದ್ದಲ್ಲಿ ಆ ಕುಟುಂಬದ ಬೇರೆ ಸದಸ್ಯರ ಮೊಬೈಲ್ ಅನ್ನು ತೆಗೆದುಕೊಂಡು ಹೋಗಬೇಕು. ಆ ಮೊಬೈಲ್ ಸಂಖ್ಯೆಯನ್ನು ದಾಖಲು ಮಾಡಲಾಗುತ್ತದೆ. ಆಗ ಆ ನಂಬರ್ಗೆ ಒಟಿಪಿ ಬರುತ್ತದೆ.
ಯಾರೂ ಭಯ ಪಡಬೇಕಾಗಿಲ್ಲ. ಐದೈದು ಜನರಿಗೆ ಸೇರಿ ಟೋಕನ್ ನೀಡಲಾಗುತ್ತದೆ. ಆ ಟೋಕನ್ನಲ್ಲಿ ದಿನಾಂಕ ಮತ್ತು ಸಮಯವನ್ನು ನಮೂದಿಸಲಾಗಿರುತ್ತದೆ. ಆ ದಿವಸ ಮತ್ತು ಆ ವೇಳೆಗೆ ಆಯಾ ಗ್ರಾಹಕರು ರೇಷನ್ ತೆಗೆದುಕೊಂಡು ಹೋಗಬಹುದು. ಶ್ರೀಧರ ಮುಂದಲಮನಿ ತಹಸೀಲ್ದಾರ್