ರೆಡ್ಡಿ ಕಪ್ಪುಹಣ ಬಿಳಿ ಮಾಡಿದ ನಾಯ್್ಕ

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ಕೆಎಎಸ್ ಅಧಿಕಾರಿ ಭೀಮಾನಾಯ್್ಕ ಕಪ್ಪು ಹಣ ಬಿಳಿ ಮಾಡಿರುವುದು ಸಿಐಡಿ ತನಿಖೆಯಲ್ಲಿ ಮೇಲ್ನೋಟಕ್ಕೆ ಗೊತ್ತಾಗಿದೆ.

ರೆಡ್ಡಿ, ಶ್ರೀರಾಮುಲುಗೆ ಭೀಮಾನಾಯ್್ಕ ಮೊದಲಿಂದಲೇ ಪರಿಚಿತರು. ಹೀಗಾಗಿ ರೆಡ್ಡಿ ಮಗಳ ಮದುವೆಗಾಗಿ ಗುತ್ತಿಗೆದಾರರು, ಫೈನಾನ್ಷಿಯರ್ ಮೂಲಕ ನೋಟುಗಳನ್ನು ಬದಲಾವಣೆ ಮಾಡಿ ಕೊಟ್ಟಿರುವುದು ಸಿಐಡಿ ವಿಚಾರಣೆ ವೇಳೆ ಗೊತ್ತಾಗಿದೆ. ಆದರೆ, 100 ಕೋಟಿ ರೂ. ಭಾರಿ ಮೊತ್ತದ ಹಣ ಬದಲಾವಣೆ ಮಾಡಿರುವ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ಸದ್ಯಕ್ಕೆ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಸರ್ಕಾರಿ ವಾಹನಗಳಲ್ಲೇ ಹಣವನ್ನು ಸಾಗಾಣೆ ಮಾಡುತ್ತಿದ್ದ ಕಾರಣಕ್ಕೆ ರಮೇಶ್​ಗೆ ಭೀಮಾನಾಯ್್ಕ ಅಕ್ರಮ ಆಸ್ತಿ ಮತ್ತು ಹಣದ ದಂಧೆ ತಿಳಿದಿತ್ತು. ಹಣ ಸಾಗಾಟದ ವೇಳೆ ರಮೇಶ್ 8 ಲಕ್ಷ ರೂ. ನಗದನ್ನು ಲಪಟಾಯಿಸಿದ್ದ. ಈ ವಿಚಾರ ಗೊತ್ತಾಗಿ ರಮೇಶ್​ನನ್ನು ಪ್ರಶ್ನಿಸಿದ ಕೆಎಎಸ್ ಅಧಿಕಾರಿ ಹಣವನ್ನು ವಾಪಸ್ ತರುವಂತೆ ಸೂಚಿಸಿದ್ದರು. ಈ ನಡುವೆ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ನಕಲಿ ದಾಖಲೆ ಸಲ್ಲಿಸಿ ಭೀಮಾನಾಯ್್ಕ 2 ನಕಲಿ ಸಿಮ್ ಕಾರ್ಡ್ ಖರೀದಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಿಮ್ಂದ ಯಾರ್ಯಾರಿಗೆ ಕರೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ರೆಡ್ಡಿ, ರಾಮುಲು ವಿಚಾರಣೆ

ಕಾರು ಚಾಲಕ ರಮೇಶ್ ಆತ್ಮಹತ್ಯೆಗೂ ಮುನ್ನಾ ಡೆತ್​ನೋಟ್​ನಲ್ಲಿ ಉಲ್ಲೇಖಿಸಿರುವ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲುಗೆ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಿದ್ದಾರೆ. ಉಳಿದಂತೆ ಡೆತ್​ನೋಟ್​ನಲ್ಲಿ ಬರೆದಿರುವ ರಮೇಶ್ ಸ್ನೇಹಿತರು ಹಾಗೂ ನ್ಯಾಯಾಧೀಶರಿಂದ ಹೇಳಿಕೆ ಪಡೆಯುವ ಸಾಧ್ಯತೆ ಇದೆ.

ರೆಡ್ಡಿ ಅರ್ಜಿ ವಿಚಾರಣೆಗೆ ಅಸ್ತು

ಬೆಂಗಳೂರು: ಬೇಲೆಕೇರಿ ಬಂದರಿನಲ್ಲಿ ಅಕ್ರಮ ಅದಿರು ಸಂಗ್ರಹ ಮತ್ತು ರಫ್ತು ಆರೋಪದ ಸಂಬಂಧ ಸಿಬಿಐ ದಾಖಲಿಸಿರುವ ನಾಲ್ಕು ಪ್ರತ್ಯೇಕ ದೋಷಾರೋಪ ಪಟ್ಟಿಗಳನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಗಳನ್ನು ಹೈಕೋರ್ಟ್ ಮಂಗಳವಾರ ವಿಚಾರಣೆಗೆ ಅಂಗೀಕರಿಸಿದೆ.

 

Leave a Reply

Your email address will not be published. Required fields are marked *