ಸಿನಿಮಾ

ರುದ್ರಪ್ಪ ಲಮಾಣಿ ಅವರನ್ನು ಮಂತ್ರಿ ಮಾಡಿ

ಚಿತ್ರದುರ್ಗ: ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರನ್ನು ಮಂತ್ರಿ ಮಾಡುವಂತೆ ಅಖಿಲ ಭಾರತ ಬಂಜಾರ ಸಂಘದ ಪ್ರಮುಖರು ಕಾಂಗ್ರೆಸ್ ಪಕ್ಷ ವನ್ನು ಒತ್ತಾಯಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡ ಜಿ.ಕೆ.ರಮೇಶ್‌ನಾಯ್ಕ ಅವರು,ಸಮಾಜ ದ ಏಕೈಕ ಕಾಂಗ್ರೆಸ್ ಶಾಸಕ ಲಮಾಣಿ ಅವರನ್ನು ಸಚಿವರನ್ನಾಗಿ ಮಾಡಿ ಸಮಾಜ ಕಲ್ಯಾಣ ಖಾತೆ ಕೊಡ ಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಇತರ ಪ್ರಮುಖರು,ಸಾಮಾಜಿಕ ನ್ಯಾಯದಡಿ ಲಮಾಣಿ ಅವರನ್ನು ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ವ ರಿಷ್ಠರನ್ನು ಭೇಟಿಯಾಗುವುದಾಗಿ ತಿಳಿಸಿದರು. ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಸಮುದಾಯ ಹೋರಾಟ ನಡೆಸಲಿದೆ ಎಂದರು. ಬಸ ವರಾಜನಾಯ್ಕ,ಜಿ.ಕೆ.ರಮೇಶ್‌ನಾಯ್ಕ,ಟಿ.ಸಿ.ಕೃಷ್ಣನಾಯ್ಕ,ಕುಮಾರ ನಾಯ್ಕ,ಮಂಜನಾಯ್ಕ,ವಸಂತನಾಯ್ಕ, ಕೆ.ಟಿ.ದಯಾನಾಯ್ಕ,ಆರ್. ಬಸವರಾಜನಾಯ್ಕ ಮತ್ತಿತರ ಸಂಘದ ಪ್ರಮುಖರು ಇದ್ದರು.


Latest Posts

ಲೈಫ್‌ಸ್ಟೈಲ್