ರಿಪೇರಿಯಾಗದ ಗಡಿಯಾರ ಗೋಪುರಗಳಲ್ಲಿರುವ ಗಡಿಯಾರಗಳು / ಗಡಿಯಾರ ಗೋಪುರಗಳ ಕೆಳಭಾಗದಲ್ಲಿ ಕಸದ ರಾಶಿಗಳು / ನಿರ್ಲ್ಯಕ್ಷಿಸಿರುವ ನಗರಸಭೆಯವರು

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರದ ಕ್ಲಾಕ್ ಟವರ್ ವೃತ್ತದಲ್ಲಿರುವ ಗಡಿಯಾರ ಗೋಪುರ ೮೬ ವರ್ಷಗಳ ಹಿಂದೆ ಕೋಲಾರ ನಗರದ ಪ್ರಮುಖ ದ್ವಾರ ಬಾಗಿಲು ಆಗಿತ್ತು. ಹೀಗೆ ಹಳೇ ಬಸ್ ನಿಲ್ದಾಣದಲ್ಲೂ ೬೮ ವರ್ಷದ ಹಿಂದೆ ಮತ್ತೊಂದು ಗಡಿಯಾರ ಗೋಪುರ ನಿರ್ಮಾಣವಾಗಿತ್ತು. ಆದರೆ ಈ ಎರಡು ಗೋಪುರಗಳ ಮೇಲಿರುವ ಗಡಿಯಾರಗಳು ಮೂಲೆಗುಂಪಾಗಿದ್ದು, ಕ್ಲಾಕ್ ಟವರ್ ವೃತ್ತದಲ್ಲಿರುವ ಗೋಪುರದಲ್ಲಿ ಒಂದು ಗಡಿಯಾರ ಮಾತ್ರ ಕೆಲಸ ನಿರ್ವಹಿಸುತ್ತಿದೆ.

ಕ್ಲಾಕ್ ಟವರ್ ವೃತ್ತದಲ್ಲಿ ವರ್ಷದ ಎಲ್ಲಾ ದಿನಗಳಲ್ಲೂ ಇಲ್ಲಿ ಪೊಲೀಸ್ ಭದ್ರೆತೆ ಇದ್ದೇ ಇರುತ್ತದೆ. ಒಂದು ಕೋಮಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ವಾಸವಿದ್ದು, ಈ ಹಿಂದೆ ಹಲವು ಬಾರಿ ಇಲ್ಲಿ ಗಲಾಟೆಗಳಾಗಿದ್ದು, ಸದ್ಯ ಕೋಲಾರ ನಗರದ ವಿವಾದಿತ ಪ್ರದೇಶ ಎಂದೇ ಗುರ್ತಿಸಲ್ಪಟ್ಟಿದೆ. ಆದರೆ ಕೆಲ ವರ್ಷಗಳ ಹಿಂದೆ, ಈ ಕ್ಲಾಕ್ ಟವರ್ ವೃತ್ತದಲ್ಲಿರುವ ಗಡಿಯಾರ ಗೋಪುರಕ್ಕೆ ಸುಣ್ಣ ಬಣ್ಣ ಬಳಿಯಲಾಗಿದೆ. ನಾಲ್ಕು ದಿಕ್ಕುಗಳಲ್ಲಿದ್ದ ಗಡಿಯಾರಗಳಲ್ಲಿ ೩ ಗಡಿಯಾರಗಳು ಕಾಣದಂತೆ ಅಲ್ಯೂಮಿನಿಯಂ ಶೀಟ್‌ನ್ನು ಮುಚ್ಚಿದ್ದು, ಒಂದು ಗಡಿಯಾರ ಮಾತ್ರ ಕೆಲಸ ನಿರ್ವಹಿಸುತ್ತಿದೆ.

ಇದೇ ರೀತಿ ಹಳೇ ಬಸ್‌ಸ್ಟಾಂಡ್ ನಿಲ್ದಾಣದಲ್ಲಿ ಇರುವ ಗೋಪುರದಲ್ಲಿಯೂ ಗಡಿಯಾರಗಳು ಕೆಟ್ಟು ನಿಂತಿವೆ. ಹಳೇ ಬಸ್‌ನಿಲ್ದಾಣದ ತಂಗುದಾಣದ ಮಧ್ಯಭಾಗದಲ್ಲಿ ಗೋಪುರವಿದೆ. ಸುತ್ತಲೂ ವ್ಯಾಪಾರಸ್ಥರು ತಂಗುದಾಣವನ್ನು ಸೇರಿಸಿಕೊಂಡು ಪೆಟ್ಟಿಗೆ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಮೇಲ್ಭಾಗ ಕಾಣುವ ಗೋಪುರಕ್ಕೆ ಬಣ್ಣ ಬಳಿಯಲಾಗಿದೆ. ಕೆಟ್ಟು ನಿಂತಿರುವ ಗಡಿಯಾರಗಳು ಹಾಗಿಯೇ ಕಾಣುತ್ತಿವೆ. ಕೆಳಭಾಗದಲ್ಲಿ ಕಸದ ತೊಟ್ಟಿ ನಿರ್ಮಾಣವಾಗಿದೆ. ಅಂಗಡಿಗಳಲ್ಲಿ ಬೀಳುವ ತ್ಯಾಜ್ಯವನ್ನು ಗಡಿಯಾರ ಗೋಪುರ ಪಕ್ಕದಲ್ಲಿ ಎಸೆಯುತ್ತಿದ್ದಾರೆ.

ಈ ಗೋಪುರಗಳಿಗೆ ಕಳೆದ ೦೩ ವರ್ಷಗಳ ಹಿಂದೆ ಮಾಜಿ ಸಂಸದ ಮುನಿಸ್ವಾಮಿ ಕ್ಲಾಕ್‌ಟವರ್‌ನಲ್ಲಿರುವ ಗೋಪುರದ ಮೇಲೆ ಸ್ವಾತಂತ್ರö್ಯ ದಿನಾಚರಣೆ ದಿನದಂದು ರಾಷ್ಟç ಧ್ವಜ ಹಾರಿಸಲು ಒಂದು ಕೋಮಿನವರು ಕಟ್ಟಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿ ಸುಣ್ಣ ಬಣ್ಣ ಬಳಸಿ ಬಿಗಿ ಬಂದೋಬಸ್ತ್ ನಡುವೆ ರಾಷ್ಟçಧ್ವಜವನ್ನು ಹಾರಿಸಲಾಯಿತು. ಆದರೆ ಗಡಿಯಾರಗಳನ್ನು ರಿಪೇರಿ ಮಾಡಲಿಲ್ಲ. ಈಗಲೂ ಗಡಿಯಾರಗಳು ದುರಸ್ಥಿಗೊಂಡಿಲ್ಲ.

ಬಾಕ್ಸ್
ಕೋಲಾರ ನಗರದ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿರುವ ಕ್ಲಾಕ್ ಟವರ್ ವೃತ್ತದಲ್ಲಿರುವ ಹಾಗು ಹಳೆ ಬಸ್ ನಿಲ್ದಾಣದಲ್ಲಿರುವ ಗಡಿಯಾರ ಗೋಪುರಗಳು ಮಹಾರಾಜರ ಕಾಲದಲ್ಲಿ ಉದ್ಘಾಟನೆಗೊಂಡಿರುವುದು ಐತಿಹಾಸಿಕವುಳ್ಳ ಗೋಪುರ ಗಡಿಯಾರಗಳನ್ನು ಚಾಲನೆ ಮಾಡಬೇಕಾಗಿದೆ. ಸುತ್ತಲೂ ಸ್ವಚ್ಛಗೊಳಿಸಬೇಕಾಗಿದೆ. ಕ್ಲಾಕ್ ಟವರ್ ವೃತ್ತದಲ್ಲಿರುವ ಗಡಿಯಾರ ಗೋಪುರ ರಸ್ತೆಯ ಮಧ್ಯಭಾಗದಲ್ಲಿರುವುದರಿಂದ ಇದು ಸ್ವಚ್ಛವಾಗಿ ಕಾಣುತ್ತದೆ. ಮೇಲಿನ ಗಡಿಯಾರಗಳನ್ನು ರಿಪೇರಿ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಪಡಿಸಿದ್ದಾರೆ.

ಕೋಟ್
ಕೋಲಾರ ನಗರ ನಿವಾಸಿ ಹಾಜಿ ಮೊಹಮ್ಮದ್ ಮುಸ್ತಾಪ ಸಾಹೆಬ್ ಎಂಬುವರು ೧೯೩೮ ರಲ್ಲಿ ನಿರ್ಮಾಣ ಮಾಡಿದ್ದ ಈ ಗಡಿಯಾರದ ಗೋಪುರವನ್ನು ಕಂಠೀರವ ನರಸಿಂಹರಾಜ್ ಒಡೆಯರ್ ಬಹುದ್ದೂರು ಉದ್ಗಾಟನೆ ಮಾಡಿದ್ದರು, ಅಂದು ಇದೇ ಕ್ಲಾಕ್ ಟವರ್ ವೃತ್ತ ಕೋಲಾರದ ಮುಖ್ಯ ದ್ವಾರ ಆಗಿದ್ದ ಕಾರಣ, ಸಾರ್ವಜನಿಕರಿಗೆ ಎತ್ತರದಲ್ಲಿ ಕಾಣುವ ಹಾಗೆ, ಸಮಯ ತಿಳಿಯುವ ಉದ್ದೇಶದಿಂದ, ಗೋಪುರ ಗಡಿಯಾರ ನಿರ್ಮಾಣ ಮಾಡಲಾಗಿತ್ತು, ಆದರೆ ಇಲ್ಲಿನ ಗಡಿಯಾರ ಕೆಟ್ಟು ನಿಂತರೂ , ಜಿಲ್ಲಾಡಳಿತ ಮತ್ತು ನಗರಸಭೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಹೀಗಾಗಿ ಕ್ಲಾಕ್ ಟವರ್ ಎಂಬ ಪದದ ಅರ್ಥವೇ ಇಲ್ಲದಂತಾಗಿದ್ದು, ಕೂಡಲೇ ಕೆಟ್ಟು ನಿಂತಿರುವ ಮೂರು ಗಡಿಯಾರಗಳನ್ನು ದುರಸ್ಥಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

-ಸಾಧಿಕ್ ಅಹಮದ್, ಸ್ಥಳೀಯ.

 

ಕೋಟ್
೧೯೫೬ ರಲ್ಲಿ ಕೋಲಾರದ ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ನಿರ್ಮಾಣಗೊಂಡಿದ್ದ ಗಡಿಯಾರ ಗೋಪುರವನ್ನು, ಕೋಲಾರ ನಗರದ ನಿರ್ಮಾತೃ ದಿವಂಗತ ಟಿ ಚನ್ನಯ್ಯ ಅವರು ಉದ್ಗಾಟಿಸಿದ್ದರು, ಆದರೆ ಈ ಗೋಪುರದ ೪ ಗಡಿಯಾರ ಕೆಟ್ಟು ನಿಂತರು ಇದುವರೆಗೂ ದುರಸ್ತಿಯಾಗಿಲ್ಲ. ೨೦ ವರ್ಷಗಳ ಹಿಂದೆ ಇದೇ ಜಾಗ ಬಸ್‌ನಿಲ್ದಾಣವಾಗಿತ್ತು. ಗೋಪುರದ ಕೆಳಗಡೆ ತಂಗುದಾಣ ಇದ್ದ ಕಾರಣ ಪ್ರಯಾಣಿಕರು ಕುಳಿತುಕೊಳ್ಳುತ್ತಿದ್ದರು. ಪ್ರತಿ ಗಂಟೆಗೊAದು ಬಾರಿ ಕೋಲಾರಕ್ಕೆ ಕೇಳಿಸುವಷ್ಟ ಶಬ್ದದ ಗಂಟೆ ಗಡಿಯಾರ ಗೋಪುರದಿಂದ ಕೇಳಿ ಬರುತ್ತಿತ್ತು. ವಿಪರ್ಯಾಸ ಎಂದರೆ ಇದು ನಗರಸಭೆ ಪಕ್ಕದಲ್ಲೆ ಇರುವ ಗಡಿಯಾರ ಗೋಪುರವಾದರು, ನಗರಸಭೆಯವರು ತಲೆಕೆಡಿಸಿಕೊಂಡಿಲ್ಲ, ಇದೀಗ ಹಳೇ ಬಸ್ ನಿಲ್ದಾಣವೂ ಕಸದ ತೊಟ್ಟಿಯಂತಾಗಿದೆ. ಗೋಪುರದ ಕೆಳಗಡೆಯೇ ತಂಗುದಾಣ ಸ್ವಚ್ಛಗೊಳಿಸಿ ಗಡಿಯಾರಗಳನ್ನು ರಿಪೇರಿ ಮಾಡಿಸಬೇಕು.

-ಕೃಷ್ಣ, ಹಳೇ ಬಸ್‌ನಿಲ್ದಾಣದ ವ್ಯಾಪಾರಸ್ಥ

ಕೋಟ್
ಹಳೇ ಬಸ್‌ನಿಲ್ದಾಣದಲ್ಲಿರುವ ಗಡಿಯಾರ ಗೋಪುರದ ಕೆಳಗಡೆ ಇರುವ ಕಸದ ರಾಶಿಯನ್ನು ತೆರವುಗೊಳಿಸಲಾಗುವುದು. ಹಾಗೂ ಗಡಿಯಾರ ರಿಪೇರಿ ಮಾಡುವ ತಜ್ಞರನ್ನು ಹುಡುಕಲಾಗುತ್ತಿದೆ. ತಜ್ಞರು ಸಿಕ್ಕಿದ ತಕ್ಷಣ ಎರಡೂ ಗೋಪುರಗಳ ಗಡಿಯಾರಗಳನ್ನು ರಿಪೇರಿ ಮಾಡಿಸಲಾಗುವುದು.

-ಲಕ್ಷಿö್ಮÃದೇವಮ್ಮ, ನಗರಸಭಾ ಅಧ್ಯಕ್ಷರು.

ಚಿತ್ರ ೧೯ ಕೆ.ಎಲ್.ಆರ್. ೦೧ : ಹಳೇ ಬಸ್‌ನಿಲ್ದಾಣ ವೃತ್ತದಲ್ಲಿರುವ ಗೋಪುರದಲ್ಲಿ ಗಡಿಯಾರಗಳು ಕೆಟ್ಟು ನಿಂತಿರುವುದು.
ಚಿತ್ರ ೧೯ ಕೆ.ಎಲ್.ಆರ್. ೦೧ಎ : ಹಳೇ ಬಸ್‌ನಿಲ್ದಾಣ ವೃತ್ತದಲ್ಲಿರುವ ಗಡಿಯಾರ ಗೋಪುರದ ಕೆಳಗಡೆ ಕಸದ ರಾಶಿ ಬಿದ್ದಿರುವುದು.
ಚಿತ್ರ ೧೯ ಕೆ.ಎಲ್.ಆರ್. ೦೧ಬಿ : ಹಳೇ ಬಸ್‌ನಿಲ್ದಾಣ ವೃತ್ತದಲ್ಲಿರುವ ಗಡಿಯಾರ ಗೋಪುರದ ಕೆಳಗಡೆ ಇರುವ ತಂಗುದಾಣವನ್ನು ಸಾರ್ವಜನಿಕರು ಆಕ್ರಮಿಸಿಕೊಂಡಿರುವುದು.
ಚಿತ್ರ ೧೯ ಕೆ.ಎಲ್.ಆರ್. ೦೧ಸಿ : ಸಾಧಿಕ್ ಅಹಮದ್, ಸ್ಥಳೀಯ ರವರ ಭಾವಚಿತ್ರ
ಚಿತ್ರ ೧೯ ಕೆ.ಎಲ್.ಆರ್. ೦೧ಡಿ : ಕೃಷ್ಣ, ಹಳೇ ಬಸ್‌ನಿಲ್ದಾಣದ ವ್ಯಾಪಾರಸ್ಥರ ಭಾವಚಿತ್ರ
ಚಿತ್ರ ೧೯ ಕೆ.ಎಲ್.ಆರ್. ೦೧ಇ : ಲಕ್ಷಿö್ಮÃದೇವಮ್ಮ, ನಗರಸಭಾ ಅಧ್ಯಕ್ಷರು ರವರ ಭಾವಚಿತ್ರ

Share This Article

ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು  ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…

ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips

ಕುತ್ತಿಗೆ ಮತ್ತು ಭುಜದ ಸುತ್ತಲಿನ ಪ್ರದೇಶದಲ್ಲಿನ ನೋವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಸರ್ವಿಕಲ್…