More

  ರಾಹುಲ್‌ಗಾಂಧಿ, ಸಿದ್ದರಾಮಯ್ಯಗೆ ನೋಬೆಲ್ ನೀಡಬೇಕು

  ಚಿತ್ರದುರ್ಗ: ಸುಳ್ಳು ಹೇಳುವ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಅವರಿಗೆ ನೋಬೆಲ್ ಪ್ರಶಸ್ತಿ ನೀಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

  ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮಮಂದಿರ ಲೋಕಾರ್ಪಣೆಗೆ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಕಾಗಿನೆಲೆ ಶ್ರೀ, ಭೋವಿ ಗುರುಪೀಠದ ಶ್ರೀ ಸೇರಿ ದೇಶದ ಹಲವು ಸಮುದಾಯಗಳ ಸಾವಿರಾರು ಸಾಧು-ಸಂತರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದ್ದರೂ ಪರಿಶಿಷ್ಟರನ್ನು ಆಹ್ವಾನಿಸಿಲ್ಲ ಎಂಬ ರಾಹುಲ್ಗಾಂಧಿ ಟೀಕೆ ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.

  ಹಿಂದುಸ್ತಾನ-ಪಾಕಿಸ್ತಾನ ಇಬ್ಬಾಗವಾಗಲು ಕಾಂಗ್ರೆಸ್ ನಾಯಕರು ಕಾರಣ. ಜಿನ್ನಾ ಸಂಸ್ಕೃತಿ ಮುಂದುವರೆಸಿದ್ದಾರೆ. ಇದಕ್ಕೆ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರವಾಗಬೇಕೆಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆ ಉತ್ತಮ ನಿದರ್ಶನ. ನಾನೆಲ್ಲೂ ಹೊಡಿ, ಬಡಿ, ಕಡಿ ಅಂತ ಹೇಳಿಲ್ಲ. ಭಾರತ ಮಾತೆಯನ್ನು ತುಂಡರಿಸುವ ಮಾತನ್ನಾಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಬೇಕೆಂದು ಕೇಂದ್ರಕ್ಕೆ ಒತ್ತಾಯಿಸಿದ್ದೇನೆ ಎಂದರು.

  ವಸತಿ ಶಾಲೆಗಳಲ್ಲಿ ಜ್ಞಾನ ದೇಗುಲವಿದು ಧೈರ್ಯದಿಂದ ಪ್ರಶ್ನಿಸು ಎಂಬ ಬರಹ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ
  ಪ್ರಶ್ನಿಸಲು ಬದಲಿಸಿದ್ದಾರಾ? ಸ್ವತಃ ಸಿಎಂ ಭ್ರಷ್ಟಾಚಾರವಿದೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಕೋರ್ಟ್ ಆದೇಶಕ್ಕೆ 10 ಸಾವಿರ ರೂ. ದಂಡ ಕಟ್ಟಿದ ಯಾರಾದರೂ ಮುಖ್ಯಮಂತ್ರಿ ಇದ್ದರೆ ಸಿದ್ದರಾಮಯ್ಯ ಎಂದು ಟೀಕಿಸಿದರು.

  ರಾಮ, ರಾಮಾಯಣ ಕಾಲ್ಪನಿಕವೆಂದು ಕೋರ್ಟ್ ಮೆಟ್ಟಿಲೇರಿದ್ದು, ಕಾಂಗ್ರೆಸ್ಸಿಗರು. ರಾಮಮಂದಿರ ಬಿಜೆಪಿಯ ಚುನಾವಣಾ ಅಸ್ತ್ರವೆಂದು ಹಲವು ಬಾರಿ ದೂರಿದ್ದಾರೆ. ಈಗ ಮಂದಿರ ನಿರ್ಮಾಣದ ಬಳಿಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭ್ರಷ್ಟಾಚಾರವಾಗಿದೆ ಎನ್ನುತ್ತಾರೆ. ಮಂದಿರದ ಕುರಿತು ಮಾತನಾಡುವ ನೈತಿಕತೆ ಇಲ್ಲದ ಅವರ ಹೇಳಿಕೆ ಅಜ್ಞಾನದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts