ರಾಷ್ಟ್ರೀಯ ಪ್ರಶಸ್ತಿಗೆ ಕೋಡಿಹಳ್ಳಿ ಗ್ರಾಪಂ ಆಯ್ಕೆ

ಕನಕಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಸಮರ್ಪಕ ಅನುಷ್ಠಾನಕ್ಕಾಗಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಗಾಪಂ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆ ಅಲಬೂರು ಹಾಗೂ ದಾವಣಗೆರೆ ಜಿಲ್ಲೆಯ ಚಿಕ್ಕನಗುಡು ಗ್ರಾಪಂ ಕೂಡ ಸೇರಿದೆ.

ಗ್ರಾಮಗಳ ಅಭಿವೃದ್ಧಿಗೆ ನರೇಗಾ ಯೋಜನೆ ನೈತಿಕ ಬೆಂಬಲ ತುಂಬಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಂದ ಯೋಜನೆ ಅನುಷ್ಠಾನದ ವರದಿ ಪಡೆಯುವ ಮೂಲಕ ಯೋಜನೆ ವಿಫಲವಾಗದಂತೆ ಕೇಂದ್ರ ನಿಗಾವಹಿಸಿದೆ.

ಕನಕಪುರ ತಾಲೂಕಿನಲ್ಲಿಯೂ ನರೇಗಾ ಯೋಜನೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಚೆಕ್​ಡ್ಯಾಂ ನಿರ್ಮಾಣ ಮಾಡಿ ಅಂತರ್ಜಲ ವೃದ್ಧಿಗೆ ಶ್ರಮಿಸಲಾಗಿದೆ.

ಕನಕಪುರ ತಾಲೂಕಿನ 43 ಗ್ರಾಪಂ ವ್ಯಾಪ್ತಿಯಲ್ಲಿ 2014-15ರಲ್ಲಿ 22, 2015-16ರಲ್ಲಿ 114, 2016-17ರಲ್ಲಿ 1,008, 2017-18ರಲ್ಲಿ 418 ಹಾಗೂ 2018-29ನೇ ಸಾಲಿನಲ್ಲಿ 74 ಸೇರಿ ಒಟ್ಟು 1,751 ಚೆಕ್ ಡ್ಯಾಂಗಳನ್ನು ನಿರ್ವಿುಸಲಾಗಿದೆ.

ಕಳೆದ 5 ವರ್ಷದಿಂದ ಮಳೆ ಕೊರತೆಯಿಂದಾಗಿ ಬರ ಆವರಿಸಿದ್ದು, ಅಂತರ್ಜಲಮಟ್ಟ ಕುಸಿದು, ನೀರು ಸಿಗದೆ ರೈತರು ವ್ಯವಸಾಯದಿಂದ ದೂರ ಉಳಿದಿದ್ದು, ಜೀವನೋಪಾಯಕ್ಕಾಗಿ ಬೆಂಗಳೂರು ಕಡೆಗೆ ಮುಖಮಾಡಿದ್ದರು. ಇದನ್ನು ಗಮನಿಸಿದ ಕೋಡಿಹಳ್ಳಿ ಗ್ರಾಪಂ ವಲಸೆ ತಡೆಯಲು ಹಾಗೂ ಮತ್ತೆ ಕೃಷಿಯತ್ತ ಸೆಳೆಯುವ ನಿಟ್ಟಿನಲ್ಲಿ, ಅಂತರ್ಜಲಮಟ್ಟ ಹೆಚ್ಚಿಸಲು ಚೆಕ್​ಡ್ಯಾಂ ನಿರ್ವಣಕ್ಕೆ ಮುಂದಾಯಿತು. ಪಂಚಾಯಿತಿ ವ್ಯಾಪ್ತಿಯ ಕೋಡಿಪುರ, ಅಳ್ಳಿಮರದೊಡ್ಡಿ, ಚಿಕ್ಕಕಬ್ಬಳ್ಳಿ, ದೊಡ್ಡಕಬ್ಬಳಿ, ಹೊಸದೊಡ್ಡಿ, ಮಲ್ಲಾಪುರ, ಮುನಿನಗರ, ದೇವತಿಗುಡಿ, ಲಕ್ಷೆ್ಮೕಗೌಡನದೊಡ್ಡಿ, ಮಾರಸಂದ್ರ ಗ್ರಾಮಗಳಲ್ಲಿ ಕಳೆದ 5ವರ್ಷಗಳಲ್ಲಿ 150ಕ್ಕೂ ಹೆಚ್ಚು ಚೆಕ್​ಡ್ಯಾಂಗಳನ್ನು ನಿರ್ವಿುಸಿತು. ಇದರಿಂದ ರೈತರು ಕೃಷಿ ಮಾಡಲು, ಜಾನುವಾರುಗಳ ಮೇವಿನ ನೆರವಾಗಲು ಹಾಗೂ ನಗರಗಳತ್ತ ಮುಖಮಾಡಿದ್ದ ಯುವಕರನ್ನು ತಡೆಯಲು ಕೋಡಿಹಳ್ಳಿ ಪಂಚಾಯಿತಿ ಯಶಸ್ವಿಯಾಗಿದೆ.

ಕೇಂದ್ರ ತಂಡ ಭೇಟಿ: ಕಳೆದ ಮಂಗಳವಾರ (ಜು.16) ಕೋಡಿಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೇಂದ್ರ ತಂಡ ನರೇಗಾ ಯೋಜನೆಯನ್ನು ಗ್ರಾಪಂನಲ್ಲಿ ಉತ್ತಮವಾಗಿ ಅನುಷ್ಠಾನ ಮಾಡಲಾಗಿದೆ. ಚೆಕ್​ಡ್ಯಾಂ ನಿರ್ವಿುಸಿ ಮಳೆ ನೀರು ಸಂಗ್ರಹಿಸಿ ಕೃಷಿ ಹಾಗೂ ಕುಡಿಯುವ ನೀರಿಗೆ ಬಳಕೆ ಮಾಡಲಾಗಿದೆ. 5 ವರ್ಷಗಳ ಹಿಂದೆ 700ರಿಂದ 800 ಅಡಿಗೆ ಕುಸಿದಿದ್ದ ಅಂತರ್ಜಲಮಟ್ಟ ಇದೀಗ 300 ಅಡಿಗೆ ಏರಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಇದರ ಆಧಾರದಲ್ಲಿ ಕೋಡಿಹಳ್ಳಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಮ್ಮ ಗಾಪಂ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಗೊಂಡಿರುವುದು ಜವಾಬ್ದಾರಿ ಹೆಚ್ಚಿಸಿದೆ. ನರೇಗಾ ಬಳಸಿಕೊಂಡು ಮತ್ತು ಸಾಧನೆ ಮಾಡಲಾಗುವುದು. ಮತ್ತಷ್ಟು ಸಾಧನೆಗೆ ಶ್ರಮಿಸುತ್ತೇವೆ ಹಾಗೆಯೇ ಕಳೆದ 5ವರ್ಷದಿಂದ ಅಂತರ್ಜಲ ಮಟ್ಟವೂ ವೃದ್ಧಿಯಾಗಿದೆ ಎಂದು ಭೂಗರ್ಭ ಶಾಸ್ತŠಜ್ಞರು ವರದಿ ನೀಡಿದ್ದಾರೆ.

| ಕೃಷ್ಣಮೂರ್ತಿ

ಪಿಡಿಒ, ಕೋಡಿಹಳ್ಳಿ ಗ್ರಾಪಂ

ಪಂಚಾಯಿತಿಗೆ ಈ ಪ್ರಶಸ್ತಿ ಲಭಿಸಲು ಸಂಸದರು ಹಾಗೂ ಜಿಲ್ಲೆಯ ಸಚಿವರು ಕಾರಣರಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಇದ್ದ ನೀರಿನ ಕೊರತೆ ಈಗ ಸುಧಾರಿಸಿದೆ.

| ನಂದೀಶ್ ಅಧ್ಯಕ್ಷ ಕೋಡಿಹಳ್ಳಿ ಗ್ರಾಮ ಪಂಚಾಯಿತಿ

Leave a Reply

Your email address will not be published. Required fields are marked *