17.8 C
Bengaluru
Wednesday, January 22, 2020

ರಾಷ್ಟ್ರೀಯತೆ ನಮ್ಮ ಆದ್ಯತೆಯಾಗಲಿ

Latest News

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣಿ

ರಟ್ಟಿಹಳ್ಳಿ: ಸಮಾಜದಲ್ಲಿ ಎಲ್ಲರನ್ನೂ ಪ್ರೀತಿ ಮತ್ತು ಗೌರವದಿಂದ ಕಂಡರೆ ಎಲ್ಲರ ಮನಸ್ಸು ಗೆಲ್ಲಬಹುದು. ಯಾವುದೇ ವ್ಯಕ್ತಿ ಅಥವಾ ಸಮಾಜದ ವಿರುದ್ಧ ದ್ವೇಷ ಸಾಧಿಸಬಾರದು....

12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 27ರಿಂದ

ಹಾವೇರಿ: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ. 27 ಹಾಗೂ 28ರಂದು...

ಅಕ್ಕಿಆಲೂರ: ವೇದದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಗಾಧ ಶಕ್ತಿ ಇದೆ. ತನ್ನನ್ನು ಪ್ರೀತಿಸುವ ಮತ್ತು ಆತ್ಮವಿಶ್ವಾಸ ಹೊಂದಿರುವ ಮನಸ್ಥಿತಿ ಅಗತ್ಯವಾಗಿದೆ. ರಾಷ್ಟ್ರೀಯತೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಉಪ ಪೊಲೀಸ್ ಆಯುಕ್ತ ರವಿ ಚನ್ನಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಣಣದಲ್ಲಿ ದುಂಡಿ ಬಸವೇಶ್ವರ ಜನಪದ ಕಲಾಸಂಘದಿಂದ ಆಯೋಜಿಸಿರುವ 29ನೇ ಕನ್ನಡ ನುಡಿ ಸಂಭ್ರಮದ 2ನೇ ದಿನ ಶುಕ್ರವಾರ ಸಾಂಸ್ಕೃತಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸ್ವಾಮಿ ವಿವೇಕಾನಂದ, ಭಗತ ಸಿಂಗ್ ಇರುತ್ತಾರೆ. ಆದರೆ, ನಮ್ಮನ್ನೇ ನಾವು ಕೀಳರಿಮೆಯಿಂದ ಕಂಡು ನಮ್ಮ ಶಕ್ತಿ ನಮಗೆ ತಿಳಿಯದಂತಾಗಿದೆ. ಬೇರೆಯವರೊಂದಿಗೆ ಹೋಲಿಕೆ ಮಾಡುವುದನ್ನು ಬಿಡಬೇಕು. ನೀವು ಯಾವುದೇ ಸಾಮಾನ್ಯ ಕೆಲಸದಲ್ಲಿದ್ದರೂ, ಅದನ್ನು ಶ್ರದ್ಧಾಪೂರ್ವಕವಾಗಿ ಕೈಗೊಳ್ಳಬೇಕು. ಸೋಲನ್ನು ಚಿಂತಿಸುವ ಬದಲು, ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಬೇಡಿ. ಅಕ್ಷರ ವಿದ್ಯೆ ಮುಖ್ಯವಲ್ಲ, ಎಲ್ಲವನ್ನೂ ಸಾಧಿಸಬಲ್ಲೆ ಎಂಬ ಛಾತಿ ನಮಗಿರಬೇಕು. ನನ್ನ ಬದುಕಿಗೆ ನಾನೇ ಹಿರೋ ಎಂಬ ಮಾತು ಪ್ರತಿಕ್ಷಣ ನೆನಪಿದ್ದರೆ ಸಾಕು, ಸಾಧಿಸಬಲ್ಲ ಸಾಮರ್ಥ್ಯ ಹುಟ್ಟುತ್ತದೆ ಎಂದು ಸಲಹೆ ನೀಡಿದರು.

ರಾಷ್ಟ್ರೀಯವಾದಿ ಚಿಂತಕ ಕಾರ್ಕಳದ ಆದರ್ಶ ಗೋಖಲೆ ಮಾತನಾಡಿ, ಸಮಾಜದ ಹಿತ ಬಯಸುವುದೇ ನಿಜವಾದ ಸಾಹಿತ್ಯ. ವ್ಯಕ್ತಿ ಬೆಳೆಸಿ, ಸಮಾಜ ಶ್ರೀಮಂತಿಕೆಗೊಳಿಸಿದ ಕೀರ್ತಿ ಕನ್ನಡ ಸಾಹಿತ್ಯಕ್ಕೆ ಸಲ್ಲುತ್ತದೆ. ತಾಯಿ ನೀಡುವ ಸಂಸ್ಕಾರಗಳು ಮಕ್ಕಳ ಜೀವನ ರೂಪಿಸುತ್ತದೆ. ವೇದ, ಭಗವದ್ಗೀತೆ, ರಾಮಾಯಣ, ಮಹಾಭಾರತ ಸಂಸ್ಕೃತದ ಪರಿಪಾಠಗಳು ನಮ್ಮಲ್ಲಿ ಆರಂಭವಾಗಬೇಕು ಎಂದರು.

ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಕನ್ನಡಕ್ಕೆ ಸಾವಿಲ್ಲ, ಕನ್ನಡ ಎಂದಿಗೂ ಪ್ರವಹಿಸುವ ಗಂಗೆ ಇದ್ದಂತೆ. ಕನ್ನಡ ಸಮ್ಮೇಳನಕ್ಕಿಂತ ಅಚ್ಚುಕಟ್ಟಾಗಿ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮ ಮಾಡುತ್ತಿರುವ ದುಂಡಿ ಬಸವೇಶ್ವರ ಜನಪದ ಕಲಾಸಂಘ, ಕುಮಾರ ಶಿವಯೋಗಿಗಳ ನಂತರ ಹಾನಗಲ್ಲ ರಾಜ್ಯದಲ್ಲಿ ಪ್ರಜ್ವಲಿಸುವಂತೆ ಮಾಡಿದೆ ಎಂದರು.

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವಿಶ್ವನಾಥ ಹಿರೇಮಠ, ಜನಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ. ಮೋಹನಕುಮಾರ ಮಾತನಾಡಿದರು. ಬೆಂಗಳೂರಿನ ಡಿಎಸ್ ಮ್ಯಾಕ್ಸ್ ನಿರ್ದೇಶಕ ಎಸ್.ಪಿ. ದಯಾನಂದ ಉದ್ಘಾಟಿಸಿದರು. ವಿಧಾನ ಪರಿಷತ ಸದಸ್ಯ ಶ್ರೀನಿವಾಸ ಮಾನೆ, ತಹಸೀಲ್ದಾರ್ ನಾಗರಾಜ ಅಡಿಗ, ಎಂ.ಎಚ್. ಬ್ಯಾಡಗಿ, ಶಿವು ನಂದಿಗೇರಿ ಉಪಸ್ಥಿತರಿದ್ದರು.

ಬೆಳಗಿನ ಜಾವವೂ ಜನಜಂಗುಳಿ: ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಆಗಮಿಸುವ ಹಿನ್ನಲೆಯಲ್ಲಿ ನುಡಿ ಸಂಭ್ರಮದ ನಡೆಯುವ ಮುತ್ತಿನಕಂತಿ ಮಠದ ಆವರಣದಲ್ಲಿ ಸಾಗರೋಪಾದಿಯಲ್ಲಿ ಜನತೆ ಹರಿದು ಬಂದಿತ್ತು. ಶನಿವಾರ ಬೆಳಗಿನ ಜಾವ 3ಗಂಟೆ ಯಾದರೂ ಪಟ್ಟಣದ ಎಲ್ಲ ಬಡಾವಣೆಗಳು ಜನಜಂಗುಳಿಯಿಂದ ಕೂಡಿತ್ತು. 1 ಗಂಟೆ 20 ನಿಮಿಷ ಕಾಲ ರವಿ ಚನ್ನಣ್ಣನವರ ಮಾತನ್ನು ಸಾರ್ವಜನಿಕರು ಶಾಂತ ಚಿತ್ತರಾಗಿ ಆಲಿಸಿದರು. ಆದರ್ಶ ಗೋಖಲೆ ಮಾತನಾಡುವಾಗ ಚಪ್ಪಾಳೆಗಳ ಸದ್ದು ಮುಗಿಲು ಮುಟ್ಟಿತ್ತು.

ನಾನು ಹೋಟೆಲ್​ನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದಾಗ, ಕೆಲವರು ನನ್ನನ್ನು ನೋಡಿ ಹಿಯಾಳಿಸುತ್ತಿದ್ದರು. ಎಲ್ಲರಿಗೂ ಹೇಳಿದ್ದೆ, ನಾನು ಮುಂದೆ ರಾಷ್ಟ್ರಪತಿಗಳಿಗೆ ಸರ್ವರ್ ಆಗುವಂತ ಹುದ್ದೆ ಪಡೆಯುವೆ ಎಂದು. ನಾನು ಹಾವೇರಿಯಲ್ಲಿ ಪೋಸ್ಟರ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸಿದ್ದೇನೆ. ಯಾವ ರಾಷ್ಟ್ರಕ್ಕೂ ಸರಿಸಮನಾಗಿ ಭಾರತ ಹೋಲಿಸಬೇಡಿ, ಈ ಪುಣ್ಯಭೂಮಿ ಮೇಲೆ ಭಗವಂತನ ಕೃಪೆ ಇದೆ. ನಮ್ಮ ದೇಶ ಬೆಳೆಯಬೇಕಾದರೆ ನಾವು ಸ್ವದೇಶಿ ತತ್ತ್ವ ಅನುಸರಿಸಬೇಕು.
| ರವಿ ಚನ್ನಣ್ಣನವರ, ಐಪಿಎಸ್ ಅಧಿಕಾರಿ

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...