ರಾಷ್ಟ್ರದ ಮೌಲ್ಯ ಎತ್ತಿಹಿಡಿದ ಭಂಡಾರಿ

ಬೆಂಗಳೂರು: ‘ರಾಷ್ಟ್ರ, ಧರ್ಮಕ್ಕಾಗಿ ಬದುಕಬೇಕು’ ಎಂಬ ಜೀವನಮೌಲ್ಯದ ಜ್ಯೋತಿಯನ್ನು ಸಾವಿರಾರು ಜನರ ಮನೆ- ಮನದಲ್ಲಿ ಹೊತ್ತಿಸಿದ ಪ್ರೇರಕ ಶಕ್ತಿ ಚಂದ್ರಶೇಖರ ಭಂಡಾರಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಶ್ಲಾಘಿಸಿದ್ದಾರೆ.

ರಾಷ್ಟ್ರೆೊತ್ಥಾನ ಪರಿಷತ್ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಂಟಿಯಾಗಿ ಚಾಮರಾಜಪೇಟೆ ರಾಷ್ಟ್ರೆೊತ್ಥಾನ ಪರಿಷತ್ ನಲ್ಲಿ ಶನಿವಾರ ಆಯೋ ಜಿಸಿದ್ದ ಆರ್​ಎಸ್​ಎಸ್ ಪ್ರಚಾರಕ, ಲೇಖಕ ಚಂದ್ರಶೇಖರ ಭಂಡಾರಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಯಾವುದೇ ಅಡುಗೆ ಮಾಡುವ ಸಂದರ್ಭದಲ್ಲಿ ಉಪು್ಪ ಹೆಚ್ಚೂ ಕಡಿಮೆಯಾದರೆ ಅಡುಗೆ ರುಚಿಯಾಗುವುದಿಲ್ಲ್ಲ ಅದೇ ರೀತಿ ಬೆರಳೆಣಿಕೆ ಸಂತರು ಉಪ್ಪಿದ್ದಂತೆ. ಇಂಥವರಲ್ಲಿ ಚಂದ್ರಶೇಖರ ಭಂಡಾರಿಯವರೂ ‘ಸಾಲ್ಟ್ ಆಫ್ ದಿ ಅರ್ತ್’. ಪುಸ್ತಕಗಳ ಮೂಲಕ ಪ್ರಖರವಾದ ಬೆಳಕು ನೀಡಿ, ಬದುಕಿನಲ್ಲಿ ಚಂದ್ರನಂತೆ ತಂಪಾದ ಬೆಳಕು ನೀಡಿದವರು. ಚಂದ್ರಶೇಖರ ಭಂಡಾರಿ ಅವರು ಪ್ರಚಾರಕರಾಗಿ ಮಾಡಿದ ಕೆಲಸಗಳು ಹೆಚ್ಚು ಕಾಲ ಉಳಿಯಲಿವೆೆ ಎಂದರು.

ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ಈಗ ಹಲವಾರು ಕೃತಿಗಳು ಬಿಡುಗಡೆ ಯಾಗುತ್ತಿದ್ದರೂ ಮನಸ್ಸು ಮುಟ್ಟುವ ಸಾಹಿತ್ಯದ ಕೊರತೆಯಿದೆ. ಹೀಗಾಗಿ ರಾಷ್ಟ್ರ ನಿರ್ವಣದ ಅಸ್ಮಿತೆ ಎತ್ತಿಹಿಡಿಯುವ ಮತ್ತಷ್ಟು ಕೃತಿಗಳನ್ನು ಚಂದ್ರಶೇಖರ ಭಂಡಾರಿಯವರಿಂದ ಸಮಾಜ ನಿರೀಕ್ಷಿಸುತ್ತಿದೆ. ಸಾಹಿತ್ಯದ ಬೆಸುಗೆ ಮುಖಾಂತರ ಕಾರ್ಯಕರ್ತರಲ್ಲಿ ಅರಿವು ಮೂಡಿಸುವ ಸಾಹಿತ್ಯ ಪಡೆದಿದ್ದೇವೆ. ಇವರ ಬದ್ಧತೆ, ಜವಾಬ್ದಾರಿ ನಮಗೆ ಆದರ್ಶ ಎಂದರು.

ರಾಷ್ಟ್ರೆೊತ್ಥಾನ ಪರಿಷತ್​ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಅಖಿಲ ಭಾರತ ಸಾಹಿತ್ಯ ಪರಿಷತ್​ನ ಕರ್ನಾಟಕ ಕಾರ್ಯದರ್ಶಿ ರಘುನಂದನ್ ಭಟ್ ಮತ್ತಿತರರಿದ್ದರು.

ಮಗಾಗಿ ಏನನ್ನೂ ಬಯಸದೆ ಸಮಾಜಕ್ಕಾಗಿ ಸರ್ವಸ್ವವನ್ನೂ ಮುಡಿಪಾಗಿಟ್ಟ ಚಂದ್ರಶೇಖರಭಂಡಾರಿ ಅವರ ಸಾಮಾಜಿಕ ಕಾರ್ಯ ಶ್ರೇಷ್ಠವಾದುದು. ಕೇವಲ ಅಕ್ಷರಗಳನ್ನು ಅನುವಾದ ಮಾಡದೆ ಬದುಕಿನ ಮೂಲಕ ಕೃತಿಗಳನ್ನು ಅನುವಾದ ಮಾಡಿದವರು. ಪರಿಶ್ರಮ ಮತ್ತು ಅಚ್ಚುಕಟ್ಟುತನ ಭಂಡಾರಿ ಅವರ ಹೆಗ್ಗುರುತು. ಮಂಗಳೂರಿನಲ್ಲಿ ಪ್ರಾರಂಭಿಕ ದಿನಗಳಲ್ಲಿ ಸಂಘದ ಬೆಳವಣಿಗೆಗೆ ಶ್ರಮಿಸಿದರು.

| ದತ್ತಾತ್ರೇಯ ಹೊಸಬಾಳೆ, ಆರ್​ಎಸ್​ಎಸ್ ಸಹ ಸರಕಾರ್ಯವಾಹ

ಸಂಘವಿದ್ದರಷ್ಟೇ ನಾವು

ಪ್ರಸ್ತುತ ರಾಷ್ಟ್ರ ನಿರ್ವಣಕ್ಕೆ ಅಗತ್ಯವಾದ ಅನೇಕ ವಿಷಯಗಳು ಸಾಹಿತ್ಯದ ಮುಖಾಂತರ ಆಗಬೇಕು ಎಂದು ಆರ್​ಎಸ್​ಎಸ್ ಪ್ರಚಾರಕ, ಲೇಖಕ ಚಂದ್ರಶೇಖರ ಭಂಡಾರಿ ಅಭಿಪ್ರಾಯಪಟ್ಟರು. ಸಾಹಿತ್ಯ ರಾಷ್ಟ್ರೀಯ ಅಸ್ಮಿತೆ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ರಾಷ್ಟ್ರೀಯ ದೃಷ್ಟಿ ಮೂಡಿಸುವ ಹಲವು ಕಾವ್ಯಗಳನ್ನು ಸಂಘ ನೀಡಿದೆ. ಆದರೆ ಸಂಘದ ವಿಚಾರವಾಗಿ ಯಾವುದೇ ನಾಟಕ ಅಥವಾ ಕಾದಂಬರಿ ಬಂದಿಲ್ಲ. ರಾಷ್ಟ್ರದ ಪುನರ್​ನಿರ್ವಣಕ್ಕೆ ಸಂಘ ಸ್ಥಾಪನೆಯಾಯಿತು. ಸಂಘದಿಂದ ನಮಗೆಲ್ಲ ದೊರೆತ ವಿಚಾರ, ಚಿಂತನಾ ದೃಷ್ಟಿ ಸಮಾಜ ಸೇವೆ ಮಾಡಿಸಿತು. ಹೀಗಾಗಿ ವಿಚಾರಕ್ಕೆ ಪ್ರಾಧಾನ್ಯತೆ ಸಿಗಬೇಕೇ ಹೊರತು ವ್ಯಕ್ತಿಗಲ್ಲ ಎಂದರು. ಸಂಘದ ಪ್ರಚಾರಕರಾಗಿರುವವರು ಮಡಿ ಹೆಂಗಸಿನಂತೆ. ಯಾವುದೇ ಕಾರಣಕ್ಕೂ ಮುಂದೆ ಬರಬಾರದು. ಮೆಚ್ಚುಗೆಯ ಮಾತು ಕೇಳಿದರೆ ಮನಸ್ಸು ರಮಿಸುತ್ತದೆ. ಇದರಿಂದಲೇ ಅಪಾಯ ಹೆಚ್ಚು. ಭ್ರಮೆ ಆವರಿಸಿ, ಇನ್ನೂ ದೊಡ್ಡಮಟ್ಟದ ಪ್ರಶಸ್ತಿ ಬರಬೇಕಿತ್ತಲ್ಲವೇ ಎಂಬ ಆಸೆ ಹುಟ್ಟಿಸುತ್ತದೆ. ಸಂಘವನ್ನು ಹೊತ್ತುಕೊಂಡಿರುವ ಕತ್ತೆ ನಾವು. ಅಹಂಕಾರ ಬಂದರೆ ಕತ್ತೆಯನ್ನು ಕಡೆಗಣಿಸುತ್ತಾರೆ. ಸಂಘದಿಂದಲೇ ನಮಗೆ ಸ್ಥಾನ ಮಾನ ದೊರೆತಿದೆ. ಸಂಘವಿದ್ದರಷ್ಟೇ ನಾವು ಎಂದು ಹೇಳಿದರು.