ರಾಮ ಮಂದಿರ ಕೈ ಬಿಟ್ಟ ಬಿಜೆಪಿ

ಧಾರವಾಡ:ರೈತರು, ಯುವಕರು, ಬಡವರು ಹಾಗೂ ಎಲ್ಲ ಸಮಾಜದ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವ ವಿನಯ ಕುಲಕರ್ಣಿ ಅನುಭವ ಮಂಟಪದ ಪರಿಕಲ್ಪನೆಯಂತೆ ಕೆಲಸ ಮಾಡುತ್ತಾರೆ. ಅವರನ್ನು ಗೆಲ್ಲಿಸಬೇಕು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಅವರು ಮತದಾರರಲ್ಲಿ ವಿನಂತಿಸಿದರು .

ಅಣ್ಣಿಗೇರಿಯ ಆದಿಕವಿ ಪಂಪ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಪ್ರಚಾರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿಯವರು ರಾಮ ಮಂದಿರ ವಿಷಯ ಬಿಟ್ಟು ಈಗ ಸೈನಿಕರ ವಿಷಯ ಮುಂದಿಟ್ಟಿದ್ದಾರೆ. ಸೈನ್ಯ ದೇಶದ್ದೇ ಹೊರತು ಯಾವ ಪಕ್ಷದ್ದೂ ಅಲ್ಲ ಎಂದರು. ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಸಿದ್ದರಾಮಯ್ಯ ಅವರದು ಹಲವು ಭಾಗ್ಯಗಳ ಸರ್ಕಾರ. ಈಗಿನ ಸಮ್ಮಿಶ್ರ ಸರ್ಕಾರ ಸಹ ರಾಷ್ಟ್ರೀಕೃತ, ಸಹಕಾರ ಸಾಲ ಮನ್ನಾ ಮಾಡಿದೆ. ಕೊಟ್ಟ ಮಾತು ಉಳಿಸಿಕೊಳ್ಳದ ಬಿಜೆಪಿ ಸರ್ಕಾರವನ್ನು ಜನ ತಿರಸ್ಕರಿಸಲಿದ್ದಾರೆ. ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಗೆಲುವು ಖಚಿತ ಎಂದರು. ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಮಾತನಾಡಿ, ಲೋಕಸಭೆಯಲಿ ಮಹದಾಯಿ ಬಗ್ಗೆ ಮಾತನಾಡುವ ಸಂಸದ ಬೇಕು. ಅದಕ್ಕಾಗಿ ವಿನಯ ಕುಲಕರ್ಣಿಯವರನ್ನು ಗೆಲ್ಲಿಸಿ ಎಂದರು. ಮುಖಂಡಾದ ವೀರಣ್ಣ ಮತ್ತಿಕಟ್ಟಿ, ಅನಿಲಕುಮಾರ ಪಾಟೀಲ, ವಿಜಯ ಕುಲಕರ್ಣಿ, ಕೆ.ಎನ್. ಗಡ್ಡಿ, ಆರ್.ಬಿ. ಶಿರಿಯಣ್ಣವರ, ಬಾಪುಗೌಡ ಪಾಟೀಲ, ಶಿವಾನಂದ ಕರಿಗಾರ, ವಿನೋದ ಅಸೂಟಿ, ಸ್ಥಳೀಯ ಮುಖಂಡರಾದ ಮಂಜುನಾಥ ಮಾಯಣ್ಣವರ, ಶಿವಶಂಕರ ಕಲ್ಲೂರ, ಬುಡ್ಡೇಶರೀಫ ನದೀಮುಲ್ಲಾ, ಚಂಬಣ್ಣ ಹಾಳದೋಟರ, ಪ್ರಕಾಶ ಅಂಗಡಿ, ವೀರನಾರಾಯಣ ಬೆಂತೂರ, ಇತರರಿದ್ದರು.

ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಕಾಂಗ್ರೆಸ್ ಗೆಲ್ಲುವುದು ಖಾತ್ರಿ.

| ಪ್ರೊ. ಐ.ಜಿ. ಸನದಿ ಮಾಜಿ ಸಂಸದ

Leave a Reply

Your email address will not be published. Required fields are marked *