ರಾಜ್ಯ ಸರ್ಕಾರ ಈಶ್ವರ ಸಣಕಲ್ಲ ಪ್ರತಿಷ್ಠಾನ ಆರಂಭಿಸಲಿ

Kasapa, District President, Shivananda Shellikeri, Book Review, Silver Celebration, Rabkavi_Banahatti, (1)

ರಬಕವಿ/ಬನಹಟ್ಟಿ: ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ಎಂದು ಹೇಳಿದ ನಾಡಿನ ಖ್ಯಾತ ಕವಿ ಈಶ್ವರ ಸಣಕಲ್ಲ ಅವರ ಅಪ್ರಕಟಿತ ಕವನಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಕೊಟ್ಟರೆ ಅಕಾಡೆಮಿ, ವಿಶ್ವವಿದ್ಯಾನಿಲಯ ಸಹಕಾರದೊಂದಿಗೆ ಪುಸ್ತಕಗಳನ್ನು ಪ್ರಕಟಿಸಲು ಪರಿಷತ್ ಪ್ರಯತ್ನಿಸಲಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಆಗ್ರಹಿಸಿದರು.

ರಾಂಪುರ ನೀಲಕಂಠೇಶ್ವರ ಮಠದ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ತಾಲೂಕು ಘಟಕ, ವಲಯ ಘಟಕಗಳಾದ ತೇರದಾಳ- ಮಹಾಲಿಂಗಪುರ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-25, ಬೆಳ್ಳಿ ಸಂಭ್ರಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಈಶ್ವರ ಸಣಕಲ್ಲ ಅವರ ಹೆಸರಿನಲ್ಲಿ ಸಾಹಿತ್ಯ ಪ್ರತಿಷ್ಠಾನವನ್ನು ಆರಂಭಿಸಬೇಕು. ಅಲಕ್ಷಿತ ಕಲಾವಿದರು, ಸಾಹಿತಿಗಳು, ಯುವ ಬರಹಗಾರರನ್ನು ಗುರುತಿಸಿ ವೇದಿಕೆ ಕಲ್ಪಿಸಲು ಕಸಾಪ ಬದ್ಧವಾಗಿದೆ ಎಂದರು.

ರಬಕವಿ ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಸವಪ್ರಭು ಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬನಹಟ್ಟಿಯ ಕಥೆಗಾರ ಆನಂದ ಕುಂಚನೂರ ಅವರು ವಸುಧೇಂದ್ರ ಅವರ ಕೃತಿ ತೇಜೋ ತುಂಗಭದ್ರಾ ಅವಲೋಕಿಸಿದರು.

ಮುಧೋಳದ ಹಿರಿಯ ಜಾನಪದ ಸಾಹಿತಿ, ಶಬ್ದ ಗಾರುಡಿಗ ಡಾ.ಸಿದ್ದು ದಿವಾಣ, ನಿವೃತ್ತ ಉಪನ್ಯಾಸಕ ಎಂ.ಎಸ್. ಬದಾಮಿ ಮಾತನಾಡಿದರು.
ಶಿಕ್ಷಕ- ಗಾಯಕ ಮಹಾಲಿಂಗ ಚಿಮ್ಮಡ ವಚನ ಪ್ರಾರ್ಥನೆಗೈದರು. ಕಸಾಪ ತಾಲೂಕು ಅಧ್ಯಕ್ಷ ಮ.ಕೃ.ಮೇಗಾಡಿ ಸ್ವಾಗತಿಸಿದರು.

ತೇರದಾಳ ವಲಯ ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶ್ರೀಶೈಲ ಬುರ್ಲಿ ವಂದಿಸಿದರು.
ಚಂದ್ರಪ್ರಭಾ ಬಾಗಲಕೋಟ, ಡಾ.ಡಿ.ಎ. ಬಾಗಲಕೋಟ, ಗುರುರಾಜ ಖಾಸನೀಸ, ಎಂ.ಎಸ್. ಬದಾಮಿ, ಶಿವಾನಂದ ಬಾಗಲಕೋಟಮಠ ಸಂವಾದ ನಡೆಸಿದರು. ಜ್ಯೋತಿಷಿ ಶಂಕ್ರೆಪ್ಪಣ್ಣ ಅಮ್ಮಲಜೇರಿ ಗೀತೆ ಹಾಡಿದರು.

ಹಿರಿಯ ಸಾಹಿತಿಗಳಾದ ಜಿ.ಎಸ್. ವಡಗಾಂವಿ, ಶಿವಾನಂದ ದಾಶಾಳ, ಶಿವಜಾತ ಉಮದಿ, ಮಲ್ಲಿಕಾರ್ಜುನ ಹುಲಗಬಾಳಿ, ಮಲಕಪ್ಪ ಜವಳಗಿ, ಗುರುನಾಥ ಸುತಾರ, ಕನ್ನಡಪರ ಹೋರಾಟಗಾರ ಚಿದಾನಂದ ಸೊಲ್ಲಾಪುರ, ಮಲ್ಲಪ್ಪ ಗಣಿ, ಕಸಾಪ ಗೌರವ ಕಾರ್ಯದರ್ಶಿ ಮಹೇಶ ಮನ್ನಯ್ಯನವರಮಠ, ದಾನಪ್ಪ ಆಸಂಗಿ, ಎನ್.ಎನ್. ಕವಟಗಿ, ಶಿವಾನಂದ ಕೊಳಕಿ, ಈರಣ್ಣ ಬಾಣಕಾರ, ಮಹಾಲಿಂಗ ತೆಳಗಿನಮನಿ, ಮಹಾಲಿಂಗ ಘಂಟಿ, ಇಲಾಹಿ ಜಮಖಂಡಿ, ಕೆ.ಎಸ್. ರಂಗಸ್ವಾಮಿ ಇತರರಿದ್ದರು. ಕಾರ್ಯಕ್ರಮದ ನಂತರ ಪಾಲ್ಗೊಂಡ ಎಲ್ಲರಿಗೂ ಜೋಳ, ಗೊಂಜಾಳ, ಸಜ್ಜೆ, ಕಡಕ್ ರೊಟ್ಟಿ, ಚಪಾತಿ, ಶಿರಾ, ಮಾದೇಲಿ, ಹೆಸರಕಾಳು ಪಲ್ಲೆ, ಜುನುಕ, ಅನ್ನ, ಸಾರು ವಿಶಿಷ್ಟವಾದ ಸಂಕ್ರಮಣ ಭೋಜನದ ವ್ಯವಸ್ಥೆಯನ್ನು ಬಸವಪ್ರಭು ಹಟ್ಟಿ ಗುರುಗಳು ಮಾಡಿದ್ದರು.


Share This Article

ಬೇಯಿಸಿದ ಆಲೂಗಡ್ಡೆಯನ್ನು ಹೆಚ್ಚು ಕಾಲ ಬಳಸಲು ಫ್ರಿಡ್ಜ್‌ನಲ್ಲಿ ಇಡಬಹುದೇ; ತಜ್ಞರು ಹೇಳುವುದೇನು? | Health Tips

ಬೇಯಿಸಿದ ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಅನೇಕ ಜನರಿಗೆ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಅವುಗಳನ್ನು ಸಂಗ್ರಹಿಸಲು ಇದು…

ಈ ಕೆಟ್ಟ ಅಭ್ಯಾಸಗಳಿಂದ ಮಹಿಳೆಯರು ಗರ್ಭಧರಿಸಲು ಸಾಧ್ಯವಾಗುವುದಿಲ್ಲ; ತಿಳಿದುಕೊಳ್ಳಲೇಬೇಕಾದ ಮಾಹಿತಿ |Health Tips

ಥೈರಾಯ್ಡ್, ಪಿಸಿಓಎಸ್ ಮತ್ತು ಇತರ ಹಾರ್ಮೋನುಗಳ ಬದಲಾವಣೆಗಳಂತಹ ಹಲವು ಕಾರಣಗಳಿಂದ ಮಹಿಳೆಯರ ಬಂಜೆತನ ಉಂಟಾಗಬಹುದು. ಇದು…

ಇಲ್ಲಿ ಮಹಿಳೆಯರು ಬಿಕಿನಿ ಧರಿಸುವಂತಿಲ್ಲ; ಉಲ್ಲಂಘನೆ ಮಾಡಿದ್ರೆ ಆಗುತ್ತೆ ಕಠಿಣ ಶಿಕ್ಷೆ; ಎಲ್ಲಿ ಗೊತ್ತೆ? | Bikinis

Bikinis : ಸಾಮಾನ್ಯವಾಗಿ ಬೀಚ್​ಗಳಲ್ಲಿ ಯುವತಿಯರು ಸೇರಿದಂತೆ ಮಹಿಳೆಯರು ಬಿಕಿನಿ ಧರಿಸಿ ಓಡಾಡುತ್ತಾರೆ. ಅಲ್ಲದೆ, ನಮ್ಮದೆ…