ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ

ಧಾರವಾಡ: ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಮತ್ತೊಮ್ಮೆ ಬಯೋಮೆಟ್ರಿಕ್ ನೀಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಖಂಡಿಸಿ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪಡಿತರ ಚೀಟಿ ಹೊಂದಿದ ಸದಸ್ಯರು ಈಗಾಗಲೇ ಬಯೋಮೆಟ್ರಿಕ್ ನೀಡಿ, ಆಧಾರ್ ಜೋಡಣೆ ಸಹ ಮಾಡಿದ್ದಾರೆ. ಆದರೆ, ಇದೀಗ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಿಂದ ಬಡವರು ತಮ್ಮ ಕೂಲಿ ಕೆಲಸ ಬಿಟ್ಟು ಪಡಿತರ ಅಂಗಡಿಗಳಿಗೆ ಓಡಾಡುವ ಸ್ಥಿತಿ ಎದುರಾಗುತ್ತದೆ. ಬಡ ಜನರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಬಡ ಜನರಿಗೆ ಸದ್ಯ ನೀಡುತ್ತಿರುವ ಪಡಿತರ ಮುಂದುವರಿಸಬೇಕು. ಪ್ರತಿ ಸದಸ್ಯರ ಬಯೋಮೆಟ್ರಿಕ್ ಪಡೆಯಬೇಕು ಎಂದು ಹೊರಡಿಸಿದ ಆದೇಶ ರದ್ದು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ರವಾನಿಸಿದರು.

ಹು-ಧಾ ಪಶ್ಷಿಮ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮೋಹನ ರಾಮದುರ್ಗ, ಬಿಜೆಪಿ ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಶ ಬೇದರೆ, ಬಲರಾಮ ಕುಸುಗಲ್, ಆನಂದ ಯಾವಗಲ್ಲ, ಭೀಮು ಸವಣೂರ, ರಾಕೇಶ ನಾಝುರೆ, ಶಂಕರ ಕೂಟ್ರಿ, ಜಯರಾಜ ಇಂಚನಾಳ, ವಿನೋದ ಕುಸುಗಲ್ಲ, ಮಂಜುನಾಥ ಯರಗಟ್ಟಿ, ಚನ್ನಪ್ಪ ಕಂದಾರೆ ಇತರರು ಇದ್ದರು.

Leave a Reply

Your email address will not be published. Required fields are marked *