More

  ರಾಜ್ಯಾದ್ಯಂತ ಆರ್‌ಪಿಐ ಸಂಘಟನಾ ಸಮಾವೇಶ

  ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಗಳನ್ನು ವಿರೋಧಿಸುತ್ತ ಬಂದಿರುವ ಕಾಂಗ್ರೆಸ್‌ನ ಹುನ್ನಾರದಿಂದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ದೇಶದಲ್ಲಿ ಆಳುವ ಪಕ್ಷವಾಗಿ ಹೊರಹೊಮ್ಮಲಿಲ್ಲ. ಆರ್‌ಪಿಐ ಮುಖಂಡರನ್ನು ದಿಕ್ಕು ತಪ್ಪಿಸುವುದರಲ್ಲೇ ಕಾಂಗ್ರೆಸ್ ಕಾಲ ಕಳೆಯಿತು ಎಂದು ಆರ್‌ಪಿಐ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಆರೋಪಿಸಿದರು.

  ನಗರದ ಕಾಲೇಜು ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಭಾನುವಾರ ಆಯೋಜಿಸಿದ್ದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ‘ರಾಜ್ಯ ಕಾರ್ಯಕಾರಿಣಿ ಮತ್ತು ಬೆಳಗಾವಿ ಜಿಲ್ಲಾ ಸಮ್ಮೇಳನ’ದಲ್ಲಿ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಆರ್‌ಪಿಐ ರಾಷ್ಟ್ರೀಯ ಅಧ್ಯಕ್ಷ ರಾಮದಾಸ್ ಅಠವಳೆ ಅವರ ಶ್ರಮದಿಂದ ಪಕ್ಷ ಪ್ರಚಲಿತಕ್ಕೆ ಮರಳುತ್ತಿದೆ. ಮುಂಬರುವ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಖಾತೆ ತೆರೆಯಲಿದೆ. ಈ ಭರವಸೆಯೊಂದಿಗೆ ರಾಜ್ಯಾದ್ಯಂತ ಪ್ರಚಾರ ಅಭಿಯಾನ ಆರಂಭಿಸಲಾಗಿದೆ. ಜತೆಗೆ ಸಂಘಟನಾ ಸಮಾವೇಶಗಳನ್ನೂ ಆಯೋಜಿಸಲಾಗುತ್ತಿದೆ ಎಂದರು.

  ಬೆಳಗಾವಿ ಕರ್ನಾಟಕದ ಅತಿ ದೊಡ್ಡ ಜಿಲ್ಲೆ. ಜಿಲ್ಲೆಯಲ್ಲಿ ಅನೇಕ ರಾಜಕೀಯ ಪಕ್ಷಗಳು ಅಧಿವೇಶನ ನಡೆಸಿವೆ. ಕಾಂಗ್ರೆಸ್‌ನ ಮೊದಲ ಅಧಿವೇಶನ ಇಲ್ಲೇ ನಡೆದಿದೆ. ಗಾಂಧೀಜಿಯವರು ಇಲ್ಲಿ ಅನೇಕ ತೀರ್ಮಾನ ಕೈಗೊಂಡಿದ್ದಾರೆ. ಆರ್‌ಪಿಐ ಬಲಗೊಳಿಸಿ ಮುಂದಿನ ಚುನಾವಣೆಗೆ ಸಜ್ಜುಗೊಳಿಸಲು ಬೆಳಗಾವಿಯಲ್ಲಿ ಸಮ್ಮೇಳನ ಹಾಗೂ ಕಾರ್ಯಕಾರಣಿ ಹಮ್ಮಿಕೊಂಡಿದ್ದೇವೆ. ಈ ಭಾಗದಲ್ಲಿ ದೊಡ್ಡ ರಾಜಕೀಯ ಅಲೆ ಸೃಷ್ಟಿಸುವುದಕ್ಕೆ ಬೆಳಗಾವಿ ಮೂಲಕ ಕೈ ಹಾಕಿದ್ದೇವೆ ಎಂದರು.

  ಆಲ್ ಇಂಡಿಯಾ ದಲಿತ ಯೂಥ್ ಆರ್ಗ್‌ನೈಜೆಶನ್ ರಾಷ್ಟ್ರೀಯ ಅಧ್ಯಕ್ಷ ಮಲ್ಲೇಶ ಚೌಗುಲೆ, ಆರ್‌ಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರವಣ ಕಾಂಬಳೆ, ರಾಜ್ಯ ಉಪಾಧ್ಯಕ್ಷರಾದ ಲಕ್ಕಪ್ಪ ತಳವಾರ, ಕಲ್ವಮಂಜಲಿ ಶಿವಣ್ಣ ಸಿ., ರಾಜ್ಯ ಜಂಟಿ ಕಾರ್ಯದರ್ಶಿ ನರಸಾಪುರ ಎಸ್. ನಾರಾಯಣ ಸ್ವಾಮಿ, ಹುಬ್ಬಳ್ಳಿ ವಿಭಾಗೀಯ ಅಧ್ಯಕ್ಷ ಶಂಕರ ಅಜಮನಿ, ರಾಜ್ಯ ಮುಖಂಡ ಬಸವರಾಜ ಢಾಕೆ, ಸಂಘಟನಾ ಮುಖಂಡ ವೇಮಗಲ್ ವಿಜಯಕುಮಾರ, ಹಿರಿಯ ದಲಿತ ಮುಖಂಡ ಸುರೇಶ ತಳವಾರ, ಚಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ದುರ್ಗೆಶ ಮೇತ್ರಿ, ದಲಿತ ಚಳವಳಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಂ. ನಾಗೇಶ, ಅಶೋಕ ದೊಡ್ಡಮನಿ, ಸಖದೇವ ಬ್ಯಾಡಗಿ, ಆರ್‌ಪಿಐ ಸತೀಶ, ಜಿ.ಸಿ.ವೆಂಕಟರಮಣಪ್ಪ, ಮಹಾದೇವ ದಿಗ್ಗಿ, ಶಿವಮಾದು ಚಾಕೊ ಹಾಗೂ ಜಿಲ್ಲಾ ಮುಖಂಡರು ವೇದಿಕೆಯಲ್ಲಿದ್ದರು.

  See also  ಪರಿಶೀಲಿಸಿಯೇ ನೂತನ ಬಡಾವಣೆಗಳಿಗೆ ಅನುಮತಿ ನೀಡಿ ; ಉಸ್ತುವಾರಿ ಸಚಿವ ಜಾರಕಿಹೊಳಿ ಸೂಚನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts