ರಾಜ್ಯಮಟ್ಟದ ಬಿ.ಜಿ.ಎಸ್ ಕಬ್ಬಡಿ ಹಬ್ಬಕ್ಕೆ ಚಾಲನೆ

blank

ಕುಶಾಲನಗರ: ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯಿಂದ ಮೂರು ದಿನಗಳು ಹಮ್ಮಿಕೊಂಡಿರುವ ಹೊನಲು ಬೆಳಕಿನ ರಾಜ್ಯಮಟ್ಟದ ಬಿ.ಜಿ.ಎಸ್ ಕಬ್ಬಡಿ ಹಬ್ಬಕ್ಕೆ ಮಂಗಳವಾರ ರಾತ್ರಿ ಚಾಲನೆ ನೀಡಲಾಯಿತು.

blank

 

ಇಲ್ಲಿನ ಸರ್ಕಾರಿ ಮಾದರಿ ಶಾಲಾ ಮೈದಾನದಲ್ಲಿ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ಏರ್ಪಡಿಸಿರುವ ಪಂದ್ಯಾಟಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.

ಕಬಡ್ಡಿ ಹಬ್ಬದ ಅಂಗವಾಗಿ ಪಟ್ಟಣದ ಬೈಚನಹಳ್ಳಿ ಮಾರಮ್ಮ ದೇವಾಲಯದಿಂದ ಜಿ.ಎಮ್.ಪಿ. ಶಾಲಾ ಮೈದಾನದವರೆಗೆ ಕ್ರೀಡಾಪಟುಗಳು, ಸಮುದಾಯ ಬಾಂಧವರು ಮೆರವಣಿಗೆ ನಡೆಸಿದರು. ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ವಹಿಸಿದ್ದರು.

ಈ ಸಂದರ್ಭ ಮಡಿಕೇರಿ ಕ್ಷೇತ್ರ ಶಾಸಕರಾದ ಡಾ.ಮಂತರ್ ಗೌಡ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಮಾಜಿ ಶಾಸಕ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಒಕ್ಕಲಿಗ ಸಂಘದ ರಾಜ್ಯ ನಿರ್ದೇಶಕ ಬಾಗೂರು ನಂಜೇಗೌಡ, ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಶಿವರುದ್ರಯ್ಯ, ಜಿ.ಪಂ. ಮಾಜಿ ಅಧ್ಯಕ್ಷೆ ಚಂದ್ರಕಲಾ, ಜಿ.ಪಂ.ಮಾಜಿ ಸದಸ್ಯ ವಿ.ಪಿ.ಶಶಿಧರ್, ಪ್ರಮುಖರಾದ ಬಿ.ಬಿ.ಭಾರತೀಶ್, ಒಕ್ಕಲಿಗರ ಯುವ ವೇದಿಕೆಯ ಪದಾಧಿಕಾರಿಗಳಾದ ಜೈರಾಜ್, ಚಂದ್ರಶೇಖರ್ ಹೇರೂರು, ಜಗದೀಶ್, ಕಿರಣ್ ಮತ್ತಿತರರು ಇದ್ದರು.

Share This Article
blank

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

ಮಳೆಗಾಲದಲ್ಲಿ ಕಲುಷಿತ ಆಹಾರ, ನೀರಿನ ಮೂಲಕ ವೈರಸ್! ಎಚ್ಚರ ತಪ್ಪಿದರೆ ಅನಾರೋಗ್ಯ…monsoon

monsoon : ಮಳೆಗಾಲ  ಹವಾಮಾನದಲ್ಲಿನ ಬದಲಾವಣೆಗಳು  ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.  ಸೇವಿಸುವ ಆಹಾರ ಮತ್ತು…

blank