ರಾಜ್ಯದ ಮೈತ್ರಿ ಸರ್ಕಾರ ಸುಭದ್ರ

ಚಿಕ್ಕಮಗಳೂರು: ಬಿಜೆಪಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬೀಳಿಸಲು ಯತ್ನಿಸಿ ಹಲವಾರು ಬಾರಿ ಕೈ ಸುಟ್ಟುಕೊಂಡು ಪ್ರತಿನಿತ್ಯ ತೊಳಲಾಟದಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.

ಸೋಮವಾರ ಸುದ್ದಿಗಾರರ ಜತೆೆ ಮಾತನಾಡಿ, ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗಿನಿಂದ ಸರ್ಕಾರ ಬೀಳುತ್ತೆ ಎಂದು ಬಿಜೆಪಿ ಹಗಲುಗನಸು ಕಾಣುತ್ತಿದೆ. ಹಿಂದೆ ದೀಪಾವಳಿ, ಈಗ ಸಂಕ್ರಾಂತಿ ಬಳಿಕ ಸರ್ಕಾರ ಉರುಳುತ್ತೆ ಎನ್ನುತ್ತಿದ್ದಾರೆ. ಇಂತಹ ಹಬ್ಬಗಳು ಎಷ್ಟೋ ಬಂದು ಹೋಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಬೀಳಿಸಲು ಜನತೆಯಿಂದ ಮಾತ್ರ ಸಾಧ್ಯ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಗೆಲ್ಲುವ ಹಗಲು ಗನಸು ಕಾಣುತ್ತಿದ್ದಾರೆ. ಫೆ 8ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು. ಬಜೆಟ್​ನಲ್ಲಿ ಜಿಲ್ಲೆಗೆ ಯಾವ ಯೋಜನೆಗಳನ್ನು ತರಬಹುದು ಎನ್ನುವುದರ ಚಿಂತನೆ ನಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಜತೆ ರ್ಚಚಿಸಲಾಗಿದೆ ಎಂದು ತಿಳಿಸಿದರು.

ಸಿಎಂ ಸಮ್ಮುಖದಲ್ಲಿ ಸಭೆ: ಕರಗಡ ಕುಡಿಯುವ ನೀರಿನ ಯೋಜನೆ ವಿಳಂಬವಾಗಲು ತಾಂತ್ರಿಕ ವೈಫಲ್ಯವೇ ಕಾರಣ ಎಂದು ಅಧಿಕಾರಿಗಳು ಈಗ ಹೇಳುತ್ತಿದ್ದಾರೆ. ಅಧಿಕಾರಿಗಳು ಅವೈಜ್ಞಾನಿಕವಾಗಿ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಅವರನ್ನು ವಿಚಾರಣೆ ನಡೆಸಬೇಕು ಎಂದು ಹಾಲಿ ಶಾಸಕರು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಇಷ್ಟು ವರ್ಷದ ನಂತರ ಹೇಳಿರುವುದು ಅಕ್ಷಮ್ಯ. ಶಾಶ್ವತ ಯೋಜನೆಗೆ ಈಗಾಗಲೇ ಸಿಎಂ ಸಮ್ಮುಖದಲ್ಲಿ ಅಧಿಕಾರಿಗಳ ಜತೆ ಸುದೀರ್ಘವಾಗಿ ರ್ಚಚಿಸಲಾಗಿದೆ. ಸದ್ಯದಲ್ಲೇ ಯೋಜನೆಯ ರೂಪುರೇಷೆ ಸಿದ್ದವಾಗಲಿದೆ ಎಸ್.ಎಲ್.ಭೋಜೇಗೌಡ ತಿಳಿಸಿದರು.

ಮೌಲ್ಯಮಾಪನ ಕೇಂದ್ರ ಸ್ಥಳಾಂತರಿಸಿ: ಚಿಕ್ಕಮಗಳೂರು: ಪಿಯು ಕಾಲೇಜಿನ ರಾಜ್ಯಶಾಸ್ತ್ರ ವಿಷಯದ ಮೌಲ್ಯಮಾಪನ ಕೇಂದ್ರವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುವಂತೆ ಕೋರಿ ಉಪನ್ಯಾಸಕರು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ ಉಪನ್ಯಾಸಕರಿಗೆ ಮಂಗಳೂರಿನ ಮೌಲ್ಯಮಾಪನ ಕೇಂದ್ರಕ್ಕೆ ಹೋಗಲು ತೊಂದರೆಯಾಗುತ್ತಿದೆ. ಆದ್ದರಿಂದ ಶಿವಮೊಗ್ಗಕ್ಕೆ ಮೌಲ್ಯಮಾಪನ ಕೇಂದ್ರ ಸ್ಥಳಾಂತರಿಸಬೇಕು ಎಂದು ಉಪನ್ಯಾಸಕರು ಒತ್ತಾಯಿಸಿದರು.

ಮೌಲ್ಯಮಾಪನ ಕೇಂದ್ರವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಕುರಿತಂತೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು. ಅತಿಥಿ ಶಿಕ್ಷಕರು, ವೇತನ ಪರಿಷ್ಕರಣೆ, ಎನ್​ಪಿಎಸ್ ಬಗ್ಗೆ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಉನ್ನತಮಟ್ಟದ ಸಮಿತಿ ಸಭೆ ನಡೆದಿದೆ. ವರ್ಷದ ಈ ತಿಂಗಳ 25 ರಂದು ನಡೆಯುವ ಸಭೆಯಲ್ಲಿ ಪರಿಹಾರ ಸಿಗಲಿದೆ ಎಂದು ಎಸ್.ಎಲ್.ಭೋಜೇಗೌಡ ಭರವಸೆ ನೀಡಿದರು.</

Leave a Reply

Your email address will not be published. Required fields are marked *