More

    ರಾಜ್ಯದಲ್ಲಿ ಜೆಡಿಎಸ್ ಸರ್ಕಾರಕ್ಕಾಗಿ ಅಭ್ಯರ್ಥಿ ಗೆಲ್ಲಿಸಿ

    ನೆಲಮಂಗಲ
    ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆಗೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಬೇಕು ಎಂದು ಜೆಡಿಎಸ್ ಮುಖಂಡ ಎಂ.ಜಿ.ಲೋಕೇಶ್ ತಿಳಿಸಿದರು.
    ನಗರಸಭೆ ವ್ಯಾಪ್ತಿಯ 20ನೇ ವಾರ್ಡ್‌ನ ಶ್ರೀ ವೀರಾಂಜನೇಯ ದೇಗುಲದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆಗೆ ಚಾಲನೆ ನೀಡಿ ಮಾತನಾಡಿದರು.
    ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ನೆಲಮಂಗಲ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಯಿತು. ಕೆಲ ಕಾನೂನು ತೊಡಕುಗಳಿಂದ ನಗರಸಭೆ ಆಡಳಿತ ಮಂಡಳಿ ರಚನೆಯಾಗದಿದ್ದರೂ ಕೋಟ್ಯಂತರ ರೂ. ಅನುದಾನದಲ್ಲಿ ನಗರದ ಅನೇಕ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಈಗ ನಗರೋತ್ಥಾನ ಯೋಜನೆಯಡಿ 14 ಕೋಟಿ ರೂ. ಅನುದಾನ ಅಭಿವೃದ್ಧಿ ಕಾಮಗಾರಿ ಆರಂಭವಾಗಬೇಕಿದ್ದು, ಚುನಾವಣೆ ನೀತಿ ಸಂಹಿತೆ ಕಾರಣದಿಂದ ಕಾಮಗಾರಿ ಆರಂಭವಾಗಿಲ್ಲ. ಆದರೆ ಕೆಲ ಶಾಸಕರು ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಕೆಲಸಗಳನ್ನು ಮಾಡಿಲ್ಲವೆಂಬ ಸುಳ್ಳು ಆರೋಪ ಮಾಡುತ್ತಿದ್ದು, ಜನತೆ ಕಿವಿಗೊಡಬಾರದು. ಕ್ಷೇತ್ರದ ಜನರ ಹಿತವನ್ನೇ ಪ್ರಮುಖವಾಗಿರಿಸಿಕೊಂಡಿರುವ ಡಾ.ಕೆ.ಶ್ರೀನಿವಾಸಮೂರ್ತಿ ಅವರನ್ನು ಪುನರಾಯ್ಕೆ ಮಾಡಿ ಸಹಕಾರ ನೀಡಬೇಕು ಎಂದರು.
    ನಗರಸಭೆ ಸದಸ್ಯ ಸುನೀಲ್‌ಮೂಡ್ ಮಾತನಾಡಿ, ರಾಜ್ಯದ ರೈತರು, ಮಹಿಳೆಯರು ಹಾಗೂ ವಿದ್ಯಾವಂತ ಯುವಜನತೆಯನ್ನು ಪ್ರಮುಖವಾಗಿರಿಸಿಕೊಂಡು ಜನಪರವಾದ ಯೋಜನೆ ರೂಪಿಸಲಾಗಿದೆ. ಬಿಜೆಪಿ ಆಡಳಿತ ವಿರೋದಿ ಅಲೆಯ ಜತೆಗೆ ಕಾಂಗ್ರೆಸ್‌ನ ಜನ ವಿರೋಧಿ ಧೋರಣೆಗಳು ಜೆಡಿಎಸ್ ಸ್ಥಾನ ಹೆಚ್ಚಾಗಲು ಸಹಕಾರಿಯಾಗಲಿವೆ. ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸಮೂರ್ತಿ ಅವರನ್ನು ಆಯ್ಕೆ ಮಾಡುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಸಹಕಾರ ನೀಡಬೇಕು ಎಂದರು.
    ಅಭ್ಯರ್ಥಿಯಿಂದ ಮತಯಾಚನೆ: ತ್ಯಾಮಗೊಂಡ್ಲು ಹೋಬಳಿಯ ಹಸಿರುವಳ್ಳಿ ಗ್ರಾಪಂನ ಚಿಕ್ಕನಹಳ್ಳಿ, ಬೈರನಾಯಕನಹಳ್ಳಿ, ಹಸಿರುವಳ್ಳಿ, ವಾದಕುಂಟೆ, ವರದನಾಯಕನಹಳ್ಳಿ ಸೇರಿ 9 ಗ್ರಾಮಗಳಲ್ಲಿ ಮತಯಾಚನೆ. ಬಳಿಕ ಕೊಡಿಗೇಹಳ್ಳಿ ಗ್ರಾಪಂನ ಓಬಾಳಪುರ, ಕರಿಮಾರನಹಳ್ಳಿ, ಗೋರಘಟ್ಟ, ಮಾವಿನಕುಂಟೆ, ಕೊಡಿಗೇಹಳ್ಳಿ, ಬಳ್ಳಗೆರೆ ಸೇರಿ 13 ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಮತಯಾಚನೆ ಮಾಡಿದರು. 15 ದಿನಗಳಿಂದಲೂ ಕ್ಷೇತ್ರದೆಲ್ಲೆಡೆ ಮತಯಾಚಿಸುತ್ತಿದ್ದು, ಉತ್ತಮ ಜನಸ್ಪಂದನೆ ದೊರೆಯುತ್ತಿದೆ. ಅಧಿಕಾರಾವಧಿಯಲ್ಲಿ ಮಾಡಿದ ಜನರ ಸೇವೆ, ಅಭಿವೃದ್ಧಿ ಜತೆಗೆ ಕ್ಷೇತ್ರದ ಎಲ್ಲ ವರ್ಗದ ಜನರ ಸೌಹರ್ದತೆಗೆ ಬೇಕಾದ ನೆಮ್ಮದಿ ವಾತಾವರಣ ನಿರ್ಮಿಸಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಜಿಪಂ ಮಾಜಿ ಸದಸ್ಯ ಟಿ.ಆರ್.ರಾಜು, ವೇಣುಗೋಪಾಲ್, ತಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ, ತ್ಯಾಮಗೊಂಡ್ಲು ಹೋಬಳಿ ಅಧ್ಯಕ್ಷ ಭೀಮರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಗುರುಪ್ರಕಾಶ್, ಕೊಡಿಗೇಹಳ್ಳಿ ಗ್ರಾಪಂ ಅಧ್ಯಕ್ಷೆ ಗಂಗಮ್ಮ ಚೆನ್ನೆಗೌಡ, ಮುಖಂಡರಾದ ಸುರೇಶ್‌ಕುಮಾರ್ ಮತ್ತಿತರರು ಇದ್ದರು.
    ವಿವಿಧೆಡೆ ಮತಯಾಚನೆ: ನಗರದ 9ನೇ ವಾರ್ಡ್‌ನಲ್ಲಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎನ್.ಗಣೇಶ್, ಸದಸ್ಯರಾದ ಶಿವಕುಮಾರ್, ಪುಷ್ಪಲತಾ ಮಾರೇಗೌಡ, ಶಾರದಾ ಉಮೇಶ್ ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
    ಜೆಡಿಎಸ್ ಕಸಬಾ ಅಧ್ಯಕ್ಷ ಕೆಂಪರಾಜು, ವಾಣಿ ಮಹಿಳಾ ಸಂಘದ ಮಾಜಿ ಅಧ್ಯಕ್ಷ ರುಕ್ಮಿಣಿಬಾಯಿ, ಪುರಸಭೆ ಮಾಜಿ ಸದಸ್ಯ ಗೋವಿಂದರಾಜು, ಮುಖಂಡ ದೇಗನಹಳ್ಳಿ ಸುರೇಶ್, ಸಿಧಿಖ್, ಪ್ರಕಾಶ್, ರಂಗಸ್ವಾಮಿ, ಗಣೇಶ್, ನಾಗರಾಜು, ಪುಟ್ಟರಾಜು, ಗಂಗಾಧರ್, ಶಂಕರ್, ರಾಜಣ್ಣ, ಮುರುಳಿಪ್ರಕಾಶ್, ತಮ್ಮಣ್ಣ, ಲಕ್ಷ್ಮಣ್ಣ, ಗಂಗಣ್ಣ, ವೀರಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts