ರಾಜಧಾನಿಯ ರಸ್ತೆಗಳು ಜಲಾವೃತ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದು ಸೃಷ್ಟಿಯಾಗಿರುವ ವಾರ್ಧಾ ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ಸೋಮವಾರದಿಂದ ಮಳೆಯಾಗುತ್ತಿದೆ. ಇದರಿಂದಾಗಿ ನಗರದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. 31 ಮರಗಳು ಬಿದ್ದಿವೆ.

ಸೋಮವಾರ ಮಧ್ಯಾಹ್ನದಿಂದ ನಿರಂತವಾಗಿ ತುಂತುರು ಮಳೆಯಾಗುತ್ತಿದ್ದು, ಜನರು ಪರದಾಡಿದರು. ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೆ ತುಂತುರು ಮಳೆಯಾಗಿದ್ದು, ನಂತರ ಮಳೆ ನಿಂತಿತ್ತು. ಆದರೂ, ಮೋಡ ಕವಿದ ವಾತಾವರಣ ಮುಂದುವರಿದಿದ್ದರಿಂದ, ಚಳಿ ಹೆಚ್ಚಾಗಿ ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದರು.

ಸಂಚಾರ ವ್ಯತ್ಯಯವಿರಲಿಲ್ಲ: ಮಂಗಳವಾರ ಈದ್ ಮಿಲಾದ್ ಪ್ರಯುಕ್ತ ಸರ್ಕಾರಿ ರಜೆ ಘೊಷಣೆಯಾಗಿತ್ತು. ಪರಿಣಾಮ ಮಳೆಯಾಗುತ್ತಿದ್ದರೂ ನಗರದ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಸಂಚಾರದಟ್ಟಣೆ ಉಂಟಾಗಲಿಲ್ಲ. ಆದರೆ, ಮೆಜೆಸ್ಟಿಕ್, ಮಲ್ಲೇಶ್ವರ, ಮೇಖ್ರಿ ವೃತ್ತ ಇನ್ನಿತರ ಕಡೆಗಳಲ್ಲಿ ಸಂಜೆ ವೇಳೆಗೆ ಸಂಚಾರ ದಟ್ಟಣೆ ಉಂಟಾಗಿತ್ತು.

ರಸ್ತೆಗಳಲ್ಲಿ ನಿಂತ ನೀರು: ಸಣ್ಣ ಮಳೆಯಾದರೂ ಮಳೆನೀರು ಸರಾಗವಾಗಿ ಹರಿಯದ ಕಾರಣ ಅನೇಕ ರಸ್ತೆಗಳಲ್ಲಿ ನೀರು ನಿಂತು ವಾಹನಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು. ಅರಮನೆ ರಸ್ತೆ ಕೆಳ ಸೇತುವೆ, ಕಬ್ಬನ್ ರಸ್ತೆ, ಅನಿಲ್ ಕುಂಬ್ಳೆ ವೃತ್ತ ಸೇರಿ ಇನ್ನಿತರ ರಸ್ತೆಗಳಲ್ಲಿ ನೀರು ನಿಂತಿತ್ತು.

Leave a Reply

Your email address will not be published. Required fields are marked *