ರಾಜಕೀಯ ಸಂಘಟಿತರಾದರೆ ಅವಕಾಶ

ಕೋಲಾರ: ಮರಾಠ ಸಮುದಾಯ ಶೈಕ್ಷಣಿಕವಾಗಿ ಮುಂದುವರಿಯುವ ಜತೆಗೆ ರಾಜಕೀಯವಾಗಿ ಸಂಘಟಿತಗೊಂಡು ಹಕ್ಕುಗಳನ್ನು ಪಡೆಯಬೇಕೆಂದು ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ಹೇಳಿದರು.

ಜಿಲ್ಲಾಡಳಿತ, ಜಿಪಂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಮರಾಠ ಸಮುದಾಯದವರು ಕಡಿಮೆಯಿದ್ದರೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಸಂಘಟಿತರಾಗಿ ರಾಜಕೀಯವಾಗಿ ಬೆಳೆದಲ್ಲಿ ಉತ್ತಮ ಅವಕಾಶ ಪಡೆಯಬಹುದು ಎಂದರು.

ವ್ಯಾಪಾರದ ಉದ್ದೇಶಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಇಲ್ಲಿನ ಕೆಟ್ಟ ರಾಜರನ್ನು ಆಮಿಷಗಳಿಂದ ವಶಕ್ಕೆ ಪಡೆದು ನಂತರ ಇಡೀ ದೇಶವನ್ನೇ ಆಕ್ರಮಿಸಿ ಸಂಪತ್ತು ಲೂಟಿ ಮಾಡಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದ ಮಹಾರಾಜರ ಸಾಲಿನಲ್ಲಿ ಛತ್ರಪತಿ ಶಿವಾಜಿಯೂ ಒಬ್ಬರು. ರಾಜಮಹರಾಜರ ಆಳ್ವಿಕೆ ಕೊನೆಗೊಂಡು ಭಾರತ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ರಾಜ ಮಹರಾಜರ ಆಳ್ವಿಕೆ ಇದ್ದಿದ್ದಲ್ಲಿ ಬಹುಶಃ ಪಾಕ್​ನ ದುಷ್ಕೃತ್ಯದ ವಿರುದ್ಧ ಖಡಕ್ ತೀರ್ಮಾನ ಹೊರಬೀಳುತ್ತಿತ್ತು ಎಂದರು.

ಛತ್ರಪತಿ ಶಿವಾಜಿ ಕುರಿತು ವಿಶೇಷ ಉಪನ್ಯಾಸ ನೀಡಿದ ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್, ಚಾಣಾಕ್ಯ, ಧೈರ್ಯ-ಸಾಹಸಿಯಾಗಿದ್ದ ಶಿವಾಜಿ ಉತ್ತಮ ನ್ಯಾಯಾಧೀಶರಾಗಿದ್ದರು ಎಂಬುದನ್ನು ಇತಿಹಾಸದಿಂದ ತಿಳಿಯಬಹುದು. ತಾಯಿ ಭವಾನಿಯ ಪರಮಭಕ್ತ, ಹಿರಿಯ ಸ್ವಾತಂತ್ರ್ಯ ನೇತಾರನೂ. ಆನೆ, ಒಂಟೆ, ಅಶ್ವದಳ ಒಳಗೊಂಣಡು 200 ಹಡಗುಗಳನ್ನು ಒಳಗೊಂಡ ನೌಕಾದಳದ ಬಲಿಷ್ಠ ಸೈನ್ಯವನ್ನು ಶಿವಾಜಿ ಹೊಂದಿದ್ದರು. ಮರಾಠರ ಶಕ್ತಿಯನ್ನು ಇಡೀ ರಾಷ್ಟ್ರಕ್ಕೆ ತೋರ್ಪಡಿಸಿದ್ದರು ಎಂದು ವಿವರಿಸಿದರು.

ಮಹಿಳಾ ಹೋರಾಟಗಾರ್ತಿ ಅಂಧ್ರಹಳ್ಳಿ ಶಾಂತಮ್ಮ ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಮರಾಠ ಸಮುದಾಯದ ಮುಖಂಡರಾದ ]ೕನಿವಾಸ್​ರಾವ್, ಚಂದ್ರಶೇಖರ್ ರಾವ್,ವೆಂಕೋಬರಾವ್, ರಾಜಾರಾವ್, ಮುನಿಯಪ್ಪ, ಚಂದ್ರರಾವ್ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನಗರದಲ್ಲಿ ಪಲ್ಲಕ್ಕಿಗಳ ಮೆರವಣಿಗೆ ನಡೆಯಿತು.

ಹೊಸರೂಪದ ಆಡಳಿತ ನೀಡಿದ್ದರು: 1674ರಲ್ಲಿ ಕಿರೀಟ ಧಾರಣೆ ಮಾಡಿದ ಛತ್ರಪತಿ ಶಿವಾಜಿ ಅಷ್ಟ್ರಪ್ರಧಾನ ಮಂತ್ರಿಗಳ ಉಸ್ತುವಾರಿಯಲ್ಲಿ 18 ಇಲಾಖೆಗಳನ್ನು ನಡೆಸುವ ಮೂಲಕ ಹೊಸರೂಪದ ಆಡಳಿತದ ಪರಿಕಲ್ಪನೆಯನ್ನು ದೇಶಕ್ಕೆ ನೀಡಿದ್ದರು. ಹಿಂದು ಧರ್ಮ ರಕ್ಷಣೆಗೆ ಕಂಕಣ ಕಟ್ಟಿದ್ದ ಶಿವಾಜಿ ಮಹಿಳೆಯರನ್ನು ಇತರೆ ಧರ್ವಿುಯರನ್ನು ಗೌರವದಿಂದ ಕಾಣುವ ಜಾತ್ಯತೀತ ಮನೋಭಾವ ಅವರದ್ದಾಗಿತ್ತು. ರಾಷ್ಟ್ರಾಭಿಮಾನದ ತಳಪಾಯ ಹಾಕಿಕೊಟ್ಟ ಶಿವಾಜಿಯವರ ಆದರ್ಶ ಅಳವಡಿಸಿಕೊಂಡರೆ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ನಾಗಾನಂದ ಕೆಂಪರಾಜ್ ತಿಳಿಸಿದರು.