More

    ರಾಜಕೀಯ ನಿವೃತ್ತಿ ಪಡೆಯುವಷ್ಟು ಆರೋಗ್ಯವೂ ಕೆಟ್ಟಿಲ್ಲ, ವೈರಾಗ್ಯ ಮೂಡುವಷ್ಟು ವಯಸ್ಸೂ ಆಗಿಲ್ಲ ಎಂದರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

    ಹಾಸನ: ನನಗೆ ರಾಜಕೀಯ ನಿವೃತ್ತಿ ಪಡೆಯುವಷ್ಟು ಆರೋಗ್ಯವೂ ಕೆಟ್ಟಿಲ್ಲ, ವೈರಾಗ್ಯ ಮೂಡುವಷ್ಟು ವಯಸ್ಸೂ ಆಗಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ಜೆಡಿಎಸ್ ಸಂಘಟಿಸುವ, ಮುನ್ನಡೆಸುವ ಆರೋಗ್ಯ ನನಗಿದೆ. ನನ್ನ ಅಗತ್ಯ ಬಿದ್ದಾಗ ನಾನು ಹೊರಗೆ ಬರುತ್ತೇನೆ. ಸೋತಿದ್ದಕ್ಕಾಗಿ ಮನೆಯಲ್ಲಿ ಕೂರುವುದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಯಡಿಯೂರಪ್ಪ ಅವರು ಕಷ್ಟಪಟ್ಟು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ನನ್ನ ಬಳಿ ಕೆಲವರು ಬಂದು ಯಾಕೆ ಸುಮ್ಮನೆ ಕೂತಿದ್ದೀರಾ ಅಂತ ಪ್ರಶ್ನೆ ಮಾಡುತ್ತಾರೆ. ಹತ್ತು ಹದಿನೈದು ಮಂದಿ ಬಿಜೆಪಿಯಿಂದ ಹೊರಬರೋದಕ್ಕೆ ರೆಡಿ ಇದ್ದಾರೆ ಎಂದು ಹೇಳಿದ್ದರು. ಆದರೆ, ಜವಾಬ್ದಾರಿಯುತ ಸರ್ಕಾರವನ್ನು ತೆಗೆಯುವಷ್ಟು ನೀಚತನಕ್ಕೆ ನಾನು ಮುಂದಾಗಲ್ಲ ಎಂದರು.

    ಒಳ್ಳೆಯ ಕೆಲಸ ಮಾಡಿ ನಿಮ್ಮ ಹೆಸರು ಉಳಿಸಿಕೊಳ್ಳಿ, ಸತ್ತ ಮೇಲಾದರೂ ನಿಮ್ಮ ಹೆಸರು ಉಳಿಯಬೇಕು ಅಂತಾ ಕೆಲಸ ಮಾಡಿ ಎಂದು ಯಡಿಯೂರಪ್ಪ ಅವರಿಗೆ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts