ರಾಗಿ ಖರೀದಿಯಲ್ಲಿ ಅವ್ಯವಹಾರ- ಜಗಳೂರಿಗೆ ಕುಖ್ಯಾತಿ- ಶಾಸಕ ದೇವೇಂದ್ರಪ್ಪ ಬೇಸರ

blank

ದಾವಣಗೆರೆ: ಜಗಳೂರು ರಾಗಿ ಖರೀದಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ವಿಚಾರ ಶನಿವಾರ ಹಮ್ಮಿಕೊಂಡಿದ್ದ ದಾವಣಗೆರೆ ಜಿಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿಚರ್ಚೆಗೆ ಗ್ರಾಸವಾಯಿತು.

ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ವಿಷಯ ಪ್ರಸ್ತಾಪಿಸಿ ಇಡೀ ರಾಜ್ಯವೇ ಜಗಳೂರಿನತ್ತ ನೋಡುವಂತೆ ದೊಡ್ಡ ಹಗರಣ ನಡೆದಿದೆ. ಬೋಗಸ್ ರೈತರೂ ಅರ್ಜಿ ಸಲ್ಲಿಸಿದ್ದಾರೆ. ಮೈಸೂರು ಇತರೆಡೆಯ ಅನರ್ಹರೂ ಸೇರಿರುವ ಮಾಹಿತಿ ಇದೆ. ಭ್ರಷ್ಟಾಚಾರದಲ್ಲೂ ನಮ್ಮ ತಾಲೂಕು ಕುಖ್ಯಾತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಮನವಿಯಂತೆ ಸಿಎಂ ಬಳಿ ಚರ್ಚಿಸಿದಾಗ, ರಾಗಿ ನೀಡಿದ್ದ 1100 ಜನ ಅರ್ಹ ರೈತರಿಗೆ 8 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದಾರೆ. ಇನ್ನುಳಿದ 459 ಜನರ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಹಗರಣದ ಹಿನ್ನೆಲೆಯಲ್ಲಿ ಆಹಾರ ಸಚಿವರು ಜಗಳೂರಿಗೆ ಮುಂದಿನ ದಿನದಲ್ಲಿ ರಾಗಿ ಖರೀದಿ ಕೇಂದ್ರ ನೀಡದಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಯಾರೋ ಮಾಡಿದ ತಪ್ಪಿಗೆ ರೈತರಿಗೆ ಅನ್ಯಾಯವಾಗಬಾರದು ಎಂದು ಹೇಳಿದರು.
ಆಹಾರ ನಾಗರಿಕ ಪೂರೈಕೆ ಇಲಾಖೆ ಡಿಡಿ ಎಲ್.ರವಿ ಮಾತನಾಡಿ ಫ್ರೂಟ್ ಐಡಿಯನ್ನು ದುರ್ಬಳಕೆ ಮಾಡಿದ್ದ ಉಗ್ರಾಣ ವ್ಯವಸ್ಥಾಪಕ ಶಂಕರ್ ಮೃತಪಟ್ಟಿದ್ದಾರೆ. ತನಿಖೆ ನಡೆಸಿ ವರದಿ ನೀಡಿದ್ದರ ಅನ್ವಯ ಸರ್ಕಾರ 1100 ಜನರಿಗೆ ಪರಿಹಾರ ಹಣ ನೀಡಿದೆ. ಉಳಿದವರಿಗೆ ನೋಟಿಸ್ ನೀಡಿ ದಾಖಲೆಗಳನ್ನು ಪಡೆಯಲಾಗುವುದು. ಅನರ್ಹರು ಪಡೆದ ಹಣವನ್ನು ವಸೂಲಿ ಮಾಡಲಾಗುವುದು ಎಂದು ಉತ್ತರಿಸಿದರು.
22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಿರಿಗೆರೆ ಶ್ರೀಗಳ ಕನಸಿನ ಕೂಸು. ಈಗಾಗಲೆ ತುಪ್ಪದಹಳ್ಳಿ ಕೆರೆಗೆ ನೀರು ಭರ್ತಿಯಾಗಬೇಕಿತ್ತು. 11 ಕೆರೆಗಳಿಗೆ ನೀರು ತುಂಬಿಸುವ ಮಾತು ಈಡೇರಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
7 ಕಿಮೀವರೆಗೆ ಪೈಪ್‌ಲೈನ್ ಕಾಮಗಾರಿ ಪೂರ್ಣವಾದಲ್ಲಿ ಎಲ್ಲ ಕೆರೆಗಳಿಗೆ ಇನ್ನೊಂದು ತಿಂಗಳಲ್ಲಿ ನೀರು ಬರಲಿದೆ ಎಂದು ಅಧಿಕಾರಿ ಉತ್ತರಿಸಿದಾಗ ಮಳೆಗಾಲ ನಂತರದಲ್ಲಿ ಕಾಮಗಾರಿ ಮುಗಿಸುತ್ತೀರಾ. ನಮ್ಮ ಬಾಯಲ್ಲಿ ರೈಲು ಬಿಡಿಸುವ ಕೆಲಸ ಮಾಡಬೇಡಿ ಎಂದು ಶಾಸಕರು ಕಿಡಿ ಕಾರಿದರು.
ಜಗಳೂರಿನ ರೈತರು ಅಡಕೆ ಬೆಳೆಯಲು ಆಸಕ್ತಿ ವಹಿಸಿದ್ದಾರೆ. ಅವರೂ ಶ್ರೀಮಂತರಾಗುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರು ಹೇಳಿದರು. ಅಂತರ ಬೆಳೆಯಾಗಿ ನುಗ್ಗೆ ಇನ್ನಿತರೆ ಬೆಳೆಗಳನ್ನು ಬೆಳೆದಲ್ಲಿ ಇದಕ್ಕೆ ಅವಕಾಶ ಸಿಗಲಿದೆ ಎಂದು ತೋಟಗಾರಿಕೆ ಇಲಾಖೆ ಡಿಡಿ ರಾಘವೇಂದ್ರ ಪ್ರಸಾದ್ ಹೇಳಿದರು.

Share This Article

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…

ಹಾಗಲಕಾಯಿಯಲ್ಲಿನ ಕಹಿ ತೆಗೆಯುವುದೇಗೆ ಎಂದು ಆಲೋಚಿಸುತ್ತಿದ್ದೀರಾ; ನಿಮಗಾಗಿ ಈ ಸಿಂಪಲ್​ ಟ್ರಿಕ್ಸ್​ ​ | Health Tips

ಚಳಿಗಾಲದಲ್ಲಿ ಮಂಜಿನಿಂದಾಗಿ ಸೂರ್ಯನ ಬೆಳಕು ಕಡಿಮೆ ಇರುತ್ತದೆ. ಇದರಿಂದ ಜನರು ಹಾಗಲಕಾಯಿಯ ರುಚಿ ನೋಡುವುದಿಲ್ಲ. ಏಕೆಂದರೆ…