ರಸ್ತೆ ಅಪಘಾತದಲ್ಲಿ ಪುರಸಭೆ ಆರೋಗ್ಯಾಧಿಕಾರಿ ಸಾವು

ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕ ಸುನೀಲ್ ಗಾವಡೆ ಅವರ ಕಾರು ಬುಧವಾರ ಚಿತ್ರದುರ್ಗದಲ್ಲಿ ಅಪಘಾತಕ್ಕೀಡಾಗಿದ್ದು, ಸುನೀಲ್ ಗಾವಡೆ ಅವರ ಪತ್ನಿ ಶಾರದಾ ಗಾವಡೆ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಲಾರಿ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಸುನೀಲ್ ಗಾವಡೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚುನಾವಣೆಯ ಕರ್ತವ್ಯ ಮುಗಿಸಿ ಚಿತ್ರದುರ್ಗ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿಂದ ತಿರುಪತಿಯತ್ತ ಪ್ರಯಾಣ ಬೆಳೆಸಿದ್ದರು. ಸುನೀಲ್ ಗಾವಡೆ ಅವರ ಪುತ್ರ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಗನನ್ನು ಕರೆದುಕೊಂಡು ತಿರುಪತಿಗೆ ಹೊರಟಿದ್ದರು. ಎನ್ನಲಾಗಿದೆ. ಮೃತ ಶಾರದಾ ಅವರು ಮೂಲತಃ ಹೊನ್ನಾವರ ತಾಲೂಕಿನ ಮಾಳ್ಕೋಡಿನವರಾಗಿದ್ದು, ಹಳಿಯಾಳ ಪುರಸಭೆಯ ಆರೋಗ್ಯಾಧಿಕಾರಿಯಾಗಿದ್ದರು. ಸುನೀಲ ಗಾವಡೆ ದಾಂಡೇಲಿ ಮೂಲದವರು.

Leave a Reply

Your email address will not be published. Required fields are marked *