ರಸೀದಿ ಮೂಲಕ ಕೂಡಲೆ ಪಡಿತರ ವಿತರಿಸಿ

ಗೋಕರ್ಣ: ಸರ್ವರ್ ಕೈಕೊಟ್ಟಿದ್ದರಿಂದ ಈ ಭಾಗದ ಅನೇಕ ಪಡಿತರ ಅಂಗಡಿಗಳಲ್ಲಿ ಸೋಮವಾರ ಪಡಿತರ ವಿತರಣೆ ಸಂಪೂರ್ಣವಾಗಿ ಸ್ಥಗಿತಗೊಂಡ ಘಟನೆ ನಡೆದಿದೆ. ಬೆಳಗ್ಗೆ 7ರಿಂದ ರೇಷನ್​ಗಾಗಿ ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಅಂಗಡಿಯಲ್ಲಿ ಸಾಲಿನಲ್ಲಿ ಕಾಯುತ್ತಿದ್ದ ನೂರಾರು ಗ್ರಾಹಕರು ಮಧ್ಯಾಹ್ನದವರೆಗೂ ಕಾದು ಪಡಿತರ ಸಿಗದೇ ಬರಿಗೈಲಿ ವಾಪಸ್ ಹೋಗಿದ್ದಾರೆ.

ಇನ್ನೂ ಆರಂಭವಿಲ್ಲ: ಜ. 10ರಿಂದ ಪಡಿತರ ನೀಡಲು ಅಂಗಡಿಗಳು ಪ್ರಾರಂಭಿಸಿದ್ದರೂ ಸರ್ವರ್ ತೀರಾ ಸಾವಕಾಶವಾಗಿದ್ದ ಕಾರಣ ದಿನಕ್ಕೆ ಮೂರರಿಂದ ನಾಲ್ಕು ಗ್ರಾಹಕರು ರೇಷನ್ ಪಡೆಯಲು ಶಕ್ಯವಾಗಿದೆ. ತಿಂಗಳಾಂತ್ಯಕ್ಕೆ ಮೂರು ದಿನ ಮಾತ್ರ ಬಾಕಿ ಉಳಿದಿದೆ. ಆದರೆ ಇನ್ನೂ ಶೇ. 80ರಷ್ಟು ಚೀಟಿದಾರರು ಪಡಿತರ ಪಡೆಯುವುದು ಬಾಕಿ ಇದೆ. ಹೀಗಾಗಿ ಈ ತಿಂಗಳ ಪಡಿತರ ಕೈತಪ್ಪಿ ಹೋಗುವ ಆತಂಕ ಕಾಡಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಾರದಿಂದ ತಿಳಿಸುತ್ತ ಬರಲಾಗಿದೆ. ಆದರೆ, ಸಮಸ್ಯೆ ಬೆಂಗಳೂರಿನಿಂದ ನಿವಾರಿಸಲ್ಪಡಬೇಕಾಗಿದೆ. ಹೀಗಾಗಿ ತಾಲೂಕು ಆಡಳಿತವೂ ಕೈಚಲ್ಲಿ ಕೂರುವಂತಾಗಿದೆ ಎಂದು ಇಲ್ಲಿನ ವಿಎಸ್​ಎಸ್ ಸಂಘದ ಕಾರ್ಯದರ್ಶಿ ಪ್ರದೀಪ ಆಚಾರ್ಯ ತಿಳಿಸಿದ್ದಾರೆ.

ತಹಸೀಲ್ದಾರ್ ಆದೇಶ: ಈ ಬಗ್ಗೆ ಮಾತನಾಡಿರುವ ಕುಮಟಾ ತಹಸೀಲ್ದಾರ್ ಮೇಘರಾಜ ನಾಯ್ಕ, ಸರ್ವರ್ ಸಮಸ್ಯೆ ಬಗ್ಗೆ ಗೋಕರ್ಣ ಭಾಗ ಸೇರಿ ತಾಲೂಕಿನ ವಿವಿಧ ಸೊಸೈಟಿ ಕಾರ್ಯದರ್ಶಿಗಳ ಸಭೆಯನ್ನು ಸೋಮವಾರ ನಡೆಸಲಾಯಿತು. ಸರ್ವರ್ ಸಮಸ್ಯೆ ಇರುವ ಎಲ್ಲೆಡೆ ಹಿಂದಿನ ಪದ್ಧತಿಯಂತೆ ಬೆರಳಚ್ಚು ಇಲ್ಲದೆ ಮೇನ್ಯುವಲ್ ಆಗಿ ತಕ್ಷಣದಿಂದ ಪಡಿತರ ಒದಗಿಸಲು ಆದೇಶಿಸಲಾಗಿದೆ ಎಂದು ಪತ್ರಿಕೆಗೆ ತಿಳಿಸಿದರು.

ಕುಮಟಾ ತಾಲೂಕಿನಲ್ಲಿ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಇರುವ ನ್ಯಾಯಬೆಲೆ ಅಂಗಡಿಗಳು ರಸೀದಿ ಮೂಲಕ ಜನರಿಗೆ ಕೂಡಲೆ ಪಡಿತರ ವಿತರಣೆ ಮುಂದುವರಿಸಬೇಕು ಎಂದು ನ್ಯಾಯಬೆಲೆ ಅಂಗಡಿ ಸಂಘಟನೆಯವರಿಗೆ ತಹಸೀಲ್ದಾರ್ ಮೇಘರಾಜ ನಾಯ್ಕ ಸೂಚನೆ ನೀಡಿದ್ದಾರೆ.

ಸೋಮವಾರ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಸರ್ವರ್ ಸಮಸ್ಯೆ ಹೇಳಿಕೊಂಡ ತಾಲೂಕಿನ ನ್ಯಾಯಬೆಲೆ ಅಂಗಡಿಕಾರ ಸಂಘಟನೆ ಅವರಿಗೆ ತಹಸೀಲ್ದಾರ್ ಮಾನವೀಯ ಸೇವೆಯ ಪಾಠ ಮಾಡಿದರು.

ಸರ್ವರ್ ಸಮಸ್ಯೆ ಇಲ್ಲಿ ಮಾತ್ರವಲ್ಲ, ರಾಜ್ಯದ ಇತರ ಕೆಲ ಜಿಲ್ಲೆಗಳಲ್ಲೂ ಆಗೀಗ ಕಂಡು ಬರುತ್ತದೆ. ಕಂಪ್ಯೂಟರ್ ವ್ಯವಸ್ಥೆ ಕೆಲಸ ಮಾಡದಿದ್ದಾಗ ಮೊದಲಿನಂತೆ ರಸೀದಿ ಬರೆದು ಪಡಿತರದಾರರಿಗೆ ಆಹಾರ ವಿತರಿಸಬಹುದಾಗಿದೆ. ಸ್ವಲ್ಪ ಕಷ್ಟವಾದರೂ ಮಾನವೀಯತೆಯಿಂದ ಬಡ ಕುಟುಂಬಗಳ ಅನಿವಾರ್ಯತೆಗೆ ಆದ್ಯತೆ ಕೊಟ್ಟು ನ್ಯಾಯಬೆಲೆ ಅಂಗಡಿಗಳು ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಈ ತಿಂಗಳ ಪಡಿತರ ವಿತರಣೆ ನಿಲ್ಲಿಸಬಾರದು ಎಂದರು.

ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ ನ್ಯಾಯಬೆಲೆ ಅಂಗಡಿಕಾರರು, ನೆಟ್​ವರ್ಕ್ ಸಹಯೋಗವಿಲ್ಲದೇ, ಬೆರಳಚ್ಚು ಪಡೆಯದೇ ಪಡಿತರ ವಿತರಿಸುವುದು ಬಹಳ ಸಮಸ್ಯೆಯಾಗುತ್ತದೆ. ಪೂರೈಕೆಯಾದ ನಿಗದಿತ ಪಡಿತರ ಸಾಲದೇ ಹೋಗಬಹುದು. ಇಂಥ ಹಲವು ಸಮಸ್ಯೆಗಳಿವೆ. ರಸೀದಿ ಪಡೆದು ಪಡಿತರ ನೀಡಿದರೂ ಪುನಃ ಕಂಪ್ಯೂಟರ್ ಮೂಲಕ ಮಾಹಿತಿ ಅಪ್​ಲೋಡ್ ಮಾಡಲೇಬೇಕಾಗುತ್ತದೆ. ಸರ್ವರ್ ಇಲ್ಲದೇ ಪಡಿತರ ವಿತರಣೆ ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

Share This Article

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…

ತಂಪು ತಂಪಾದ​​ ಎಳನೀರನ್ನು ವಿಪರೀತವಾಗಿ ಕುಡಿಯಬೇಡಿ! ಮಾರಣಾಂತಿಕ ರೋಗಕ್ಕೆ ತುತ್ತಾಗೋದು ಖಚಿತ..Coconut Water Side Effects

ಬೆಂಗಳೂರು:  ಅತಿಯಾದರೆ ಅಮೃತವೂ ವಿಷ ಎಂಬಂತೆ, ಎಳನೀರನ್ನು ಮಿತಿಗಿಂತ ( Coconut Water Side Effects…

ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆಯುವುದು ಕಷ್ಟವೆ!; ಸಿಂಪಲ್​ ಈ ಟ್ರಿಕ್ಸ್​​ ಬಳಸಿ | Life Style

ಆಲೂಗಡ್ಡೆ ತಿನಿಸುಗಳು ಬೇಡ ಎಂದು ಯಾರು ಹೇಳುವುದಿಲ್ಲ. ನಮ್ಮ ಅಡುಗೆಮನೆಯಲ್ಲಿ ಪ್ರಮುಖ ಆಹಾರ ಎಂದರೆ ತಪ್ಪಲ್ಲ.…