ಬಾಗಲಕೋಟೆ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರನ್ನ ಪ್ರತಿಷ್ಠಾನ ಸಹಯೋಗದಲ್ಲಿ ಫೆ.೨೨, ೨೩, ೨೪ ರಂದು ರನ್ನ ವೈಭವ -೨೦೨೫ ಮುಧೋಳ ಹಾಗೂ ರನ್ನ ಬೆಳಗಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಅಂತಿಮ ಸ್ವರೂಪ ನೀಡಲಾಗುತ್ತಿದೆ ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ. ಹೇಳಿದರು.
ನಗರದ ಜಿಲ್ಲಾಽಕಾರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕಾಗಿ ಅಽಕಾರಿಗಳು, ಸಿಬ್ಬಂದಿಗಳು ಒಳಗೊಂಡ ೨೨ ಸಮತಿಗಳನ್ನು ರಚಿಸಲಾಗಿದೆ. ಕ್ರೀಡೆ, ವಿಚಾರ ಸಂಕಿರಣ, ಸ್ಮರಣ ಸಂಚಿಕೆ, ಕಾವ್ಯ ಸಂಕಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾಜ್ಯಾದ್ಯಂತ ಮೂರು ರಥಗಳು ಸಂಚರಿಸಿ ಪ್ರಚಾರ ಕೈಗೊಂಡಿವೆ. -ಫೆ.೧೯ ರಂದು ವಿಧಾನಸೌಧ ಮುಂಭಾಗ ರಾಜ್ಯಮಟ್ಟದ ರನ್ನ ರಥಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. -ಫೆ.೨೨ ಕ್ಕೆ ಮುಧೋಳಕ್ಕೆ ಬಂದು ತಲುಪಲಿದೆ ಎಂದರು.
ಸ್ಪರ್ಧೆಗಳು, ವಿಚಾರ ಸಂಕಿರಣ, ರಸ ಪ್ರಶ್ನೆ, ಪ್ರಬಂಧ, ರನ್ನ ಜೀವನ ಸಾಧನೆ ಕುರಿತು ನಡೆಯಲಿದೆ. ನಾಡಿನ ಸಂಗೀತ, ಸಾಹಿತ್ಯ, ಕಲಾ ಕ್ಷೇತ್ರದಿಂದ ಹಿರಿಯ, ಕಿರಿಯ ಕಲಾವಿದರು ಭಾಗವಹಿಸಲಿದ್ದಾರೆ. ಅರ್ಜುನ್ ಜನ್ಯ, ಗುರು ಕಿರಣ ಸೇರಿದಂತೆ ಜಿಲ್ಲೆಯ ಕಲಾವಿದರಿಗೂ ಸಿಂಹ ಪಾಲು ನೀಡಲಾಗಿದೆ. ರಾಜ್ಯ ಸರ್ಕಾರದಿಂದ ೫೦ ಲಕ್ಷ ರೂ. ಬಂದಿದೆ. ಇನ್ನು ೪ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರವಾಸೋದ್ಯಮದಿಂದ ೨೦ ಲಕ್ಷ ರೂ. ಕೇಂದ್ರ ಸರ್ಕಾರದಿಂದ ೪೦ ಲಕ್ಷ ರೂ. ನೆರವು ಕೋರಿದ್ದೇವೆ. ಜಿಲ್ಲೆಯಲ್ಲಿ ಸಾರ್ವಜನಿಕ ಸಂಘ, ಸಂಸ್ಥೆ, ಅಽಕಾರಿಗಳಿಂದ ೧೭ ವರೆಗೆ ೧.೪೦ ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಮುಧೋಳದಲ್ಲಿ ರನ್ನ ವೃತ್ತ ಅಭಿವೃದ್ಧಿಗೆ ಹಾಗೂ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸಲು ಒಂದು ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿ ಸಚಿವ ಆರ್.ಬಿ.ತಿಮ್ಮಾಪುರ ಆರಂಭಿಸಿದ್ದಾರೆ. ಚಿತ್ರಗಾಯಕರು, ಕಲಾವಿದರು, ಚಿತ್ರಕಲಾವಿದರು ಆಗಮಿಸಲಿದ್ದಾರೆ ಒಟ್ಟಾರೆ ಮುಧೋಳಕ್ಕೆ ಸಾಂಸ್ಕೃತಿಕ ಮೆರಗು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ಯಾಳಕರ, ಎಸ್ಪಿ ಅಮರನಾಥ ರೆಡ್ಡಿ, ಸಿಇಒ ಶಶಿಧರ ಕುರೇರ ಇದ್ದರು.