ಸಿನಿಮಾ

ರನ್ನ ಕಾರ್ಖಾನೆ ಸೂಪರ್ ಸೀಡ್ ಮಾಡಿ

ಬಾಗಲಕೋಟೆ: ಮುಧೋಳ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿದೆ. ೨೦ ವರ್ಷದಲ್ಲಿ ೩೦೦ ಕೋಟಿ ರೂ.ಗಿಂತಲೂ ಸಾಲದ ಹೊರೆ ಇದೆ. ಇದೀಗ ಕಾರ್ಖಾನೆ ಅಧ್ಯಕ್ಷ ಸ್ಥಾನಕ್ಕೆ ರಾಮಣ್ಣ ತಳೇವಾಡ ಸೇರಿದಂತೆ ೧೧ ಜನರು ನಿರ್ದೇಶಕರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದನ್ನು ಪುರಸ್ಕೃರಿಸಬೇಕು. ಇಲ್ಲವೇ ಸರ್ಕಾರವೇ ಕಾರ್ಖಾನೆಯನ್ನು ಸೂಪರ್‌ಸೀಡ್ ಮಾಡಿ ರೈತರ, ಕಾರ್ಮಿಕರ ಹಿತ ಕಾಪಾಡಬೇಕು ಎಂದು ರೈತ ಮುಖಂಡ ಯಲ್ಲಪ್ಪ ಹೆಗಡೆ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಜೀವನಾಡಿಯಾಗಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ೩೦೦ ಕೋಟಿ ನಷ್ಟವಾಗಿದ್ದು, ಈ ಮೊದಲ ಅಧ್ಯಕ್ಷ, ಮಾಜಿ ಸಚಿವ ಗೋವಿಂದ ಕಾರಜೋಳ ಕೇವಲ ಎರಡೂವರೆ ವರ್ಷದಲ್ಲಿ ೧೭ ಕೋಟಿ ನಷ್ಟ ಮಾಡಿದ್ದಾರೆ. ತದನಂತರ ಆರ್.ಎಸ್.ತಳೇವಾಡ ಇಲ್ಲಿಯವರೆಗೆ ೩೦೦ ಕೋಟಿ ದಿವಾಳಿ ಮಾಡಿ ಬಿಡಿಸಿಸಿ ಬ್ಯಾಂಕಿನಲ್ಲಿ ೧೦೦ ಕೋಟಿ ಮತ್ತು ೧೨ ಕೋಟಿಯನ್ನು ಗೋಡೌನ್ ನಿರ್ಮಾಣಮಾಡುತ್ತೇವೆ ಎಂದು ಗೋಡೌನ್ ಕಟ್ಟದೆ ಆ ದುಡ್ಡನ್ನು ಸ್ವಂತಕ್ಕೆ ಬಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಆಪೆಕ್ಸ್ ಬ್ಯಾಂಕಿನಲ್ಲಿ ೮೦ ಕೋಟಿಯನ್ನು ಸಾಲ ಮಾಡಿ ಅವ್ಯವಹಾರ ಮಾಡಿದ್ದು, ೨೦೨೨-೨೩ ರ ಹಂಗಾಮಿನಲ್ಲಿ ಕಾರ್ಖಾನೆ ನಡೆಸಲು ಕಾಲ್ ಡಿಪಾಸಿಟ್ ಅಂತಾ ೨೧ ಕೋಟಿಯನ್ನು ಸಹಕಾರ ಸಂಘದಿಂದ ಕಾರ್ಖಾನೆಗೆ ತಂದು ೧೮ ಕೋಟಿಯನ್ನು ಕಟಾವು ಗ್ಯಾಂಗಿಗೆ ಪಾವತಿ ಮಾಡಿದ್ದಾರೆ. ಕೇವಲ ೪ ಕೋಟಿಯ ಕಟಾವು ಗ್ಯಾಂಗ ಬಂದಿರುತ್ತದೆ. ಆದರೆ ಉಳಿದ ೧೪ ಕೋಟಿ ಕಾರ್ಖಾನೆಗೆ ದುಡಿಯದೆ ಅಧ್ಯಕ್ಷರ ಹಾಗೂ ಆಡಳಿತ ಮಂಡಳಿಯವರು ಕೂಡಿ ಗೋಲ್‌ಮಾಲ್ ಮಾಡಿದ್ದು, ಆದರೆ ಕಾಲ್ ಡಿಪಾಸಿಟ್ ಆದ ಹಣವು ೨೧ ಕೋಟಿಗೆ ಶೇ.೧೮ ಬಡ್ಡಿಯನ್ನು ಕಟ್ಟಿ ೨೫ ಕೋಟಿ ರೂ.ಗಳನ್ನು ಸಹಕಾರ ಸಂಘಕ್ಕೆ ಪಾವತಿಸಿದ್ದಾರೆ ಎಂದು ತಿಳಿಸಿದರು.

ಭ್ರಷ್ಟಾಚಾರ ನಡೆದರೂ ಈ ಮೊದಲು ಇದ್ದ ಸರ್ಕಾರ ಮತ್ತು ಸಚಿವರು ಯಾವುದೇ ಕ್ರಮ ಕೈಗೊಳ್ಳದೆ ರೈತರು ಕಟ್ಟಿದ ಕಾರ್ಖಾನೆಯನ್ನು ದಿವಾಳಿ ಮಾಡಲು ಸಹಕಾರ ನೀಡಿದ್ದಾರೆ. ಆದರೆ ಈಗ ಬಂದ ಸರ್ಕಾರ ಸೂಕ್ತ ತನಿಖೆ ಮಾಡಿ ಒಳ್ಳೆಯ ಆಡಳಿತ ಅಧಿಕಾರಿಯನ್ನು ನೇಮಿಸಿ ರೈತರ, ಕಾರ್ಮಿಕರ ಬಾಳಿಗೆ ಬೆಳಕಾಗಿರುವ ಕಾರ್ಖಾನೆ ಉಳಿಸಿ, ಬೆಳೆಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಗೋವಿಂದಪ್ಪ ಮೆಟಗುಡ್ಡ, ನಾಗಪ್ಪ ಹೂಗಾರ, ಮುತ್ತಪ್ಪ ಕೋಟಿ, ಬಸಪ್ಪ ಸಂಗನ್ನವರ ಉಪಸ್ಥಿತರಿದ್ದರು.

Latest Posts

ಲೈಫ್‌ಸ್ಟೈಲ್