ರಜನಿಗಿಂತಲೂ ಅಕ್ಷಯ್ಗೆ ಹೆಚ್ಚಿನ ಜನಪ್ರಿಯತೆ!

ಬಹುನಿರೀಕ್ಷಿತ ‘2.0’ ಚಿತ್ರದಲ್ಲಿ ರಜನಿಕಾಂತ್ ಅವರೇ ಆಕರ್ಷಣೆಯ ಕೇಂದ್ರಬಿಂದು. ಹಾಗಂತ ಅನೇಕರು ಎಂದುಕೊಂಡಿದ್ದಾರಷ್ಟೇ. ಅಸಲಿ ವಿಷಯವೇನೆಂದರೆ, ಈ ಚಿತ್ರದ ಫಸ್ಟ್ಲುಕ್ ರಿಲೀಸ್ ಆದ ನಂತರ ಅಕ್ಷಯ್ಕುಮಾರ್ ಎಲ್ಲರ ಫೇವರಿಟ್ ಆಗಿದ್ದಾರೆ! ರಜನಿಗಿಂತಲೂ ಹೆಚ್ಚಾಗಿ ಅವರು ಮಿಂಚುತ್ತಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುವ ಮಟ್ಟಕ್ಕೆ ಅಕ್ಷಯ್ಕುಮಾರ್ ಲುಕ್ ಜನಪ್ರಿಯತೆ ಪಡೆಯುತ್ತಿದೆ. ಆ ಮೂಲಕ ರಜನಿಗಿಂತಲೂ ಅಕ್ಷಯ್ಗೆ ಆನ್ಲೈನ್

ಅಭಿಮಾನಿಗಳ ಸಂಖ್ಯೆ ಜಾಸ್ತಿ ಎಂಬಂತಾಗಿದೆ. ಶಂಕರ್ ನಿರ್ದೇಶನದ ‘2.0’ ಚಿತ್ರದಲ್ಲಿ ರಜನಿ ಹೀರೋ ಆದರೆ, ಅಕ್ಷಯ್ ವಿಲನ್. ಏಕಕಾಲಕ್ಕೆ ತಮಿಳು ಮತ್ತು ಹಿಂದಿಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಆದರೆ ರಜನಿ ನಟನೆಯ ಚಿತ್ರಗಳಿಗೆ ಉತ್ತರ ಭಾರತದಲ್ಲಿ ದೊಡ್ಡ ಮಾರ್ಕೆಟ್ ಇಲ್ಲ. ಹಾಗಾಗಿ, ಅಕ್ಷಯ್ ಅವರನ್ನೇ ಪ್ರಚಾರದ ಕೇಂದ್ರವಾಗಿಸಿ ಹಿಂದಿಯಲ್ಲಿ ಚಿತ್ರ ಬಿಡುಗಡೆ ಮಾಡಲು ‘2.0’ ತಂಡ ನಿರ್ಧರಿಸಿದೆಯಂತೆ. ಈ ಚಿತ್ರದಲ್ಲಿ ಇಬ್ಬರು ನಾಯಕರು (ಅಕ್ಷಯ್, ರಜನಿ) ಎನ್ನುವಂತೆ ವಿಶ್ವಾದ್ಯಂತ ಪ್ರಚಾರ ಮಾಡಲು ಮುಂದಾಗಿದೆ. ತನ್ನ ಸ್ಟೈಲ್ ಮೂಲಕವೇ ತಮಿಳುನಾಡಿನಿಂದ ಹಿಡಿದು ದೂರದ ಜಪಾನ್ವರೆಗೂ ಹವಾ ಸೃಷ್ಟಿಸಿರೋ ರಜನಿಗೆ, ಉತ್ತರ ಭಾರತದಲ್ಲೇ ಅಭಿಮಾನಿಗಳು ಕಡಿಮೆ! ಹಾಗಾಗಿ, ಅಲ್ಲಿ ಅಕ್ಷಯ್ರನ್ನು ಗೆಲುವಿನ ಸೂತ್ರವಾಗಿಸಿಕೊಳ್ಳುತ್ತಿದೆ ‘2.0’ ಬಳಗ.

ಕಿಲಾಡಿಯ ನೆರವಿನ ಹಸ್ತ

ನಟನೆಯಿಂದ ಮಾತ್ರವಲ್ಲದೆ ಸಮಾಜಮುಖಿ ಕೆಲಸಗಳಿಂದಲೂ ಅಕ್ಷಯ್ ಜನರಿಗೆ ಹತ್ತಿರವಾಗಿದ್ದಾರೆ. ಇತ್ತೀಚೆಗೆ ಅಸ್ಸಾಂ ಬಳಿ ಉಲ್ಪಾ ಉಗ್ರರ ದಾಳಿಗೆ ಭಾರತದ ಮೂವರು ಸೈನಿಕರು ಬಲಿಯಾಗಿದ್ದರು. ಆ ಪೈಕಿ ಹುತಾತ್ಮ ಎನ್.ಕೆ. ನರಪಾತ್ ಸಿಂಗ್ ಕುಟುಂಬಕ್ಕೆ ಸಂತಾಪ ಸೂಚಿಸುವುದರ ಜತೆಗೆ 9 ಲಕ್ಷ ರೂ. ನೆರವು ನೀಡಿದ್ದಾರೆ. ಆ ಮೂಲಕ ಮತ್ತೊಮ್ಮೆ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.

– ಏಜೆನ್ಸೀಸ್

Leave a Reply

Your email address will not be published. Required fields are marked *