More

  ರಕ್ಷಣೆ ನೀಡಿ, ಇಲ್ಲ ದಯಾಮರಣ ಕರುಣಿಸಿ:ಡಿಸಿ ಶಿವಯೋಗಿಪುರ ದಂಪತಿಯಿಂದ ಮನವಿ

  ಹಾಸನ: ನನಗೆ ಮತ್ತು ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಹಾಗೂ ಮನೆ ನಿರ್ಮಾಣ ಮಾಡಲು ಸಹಕಾರ ನೀಡಬೇಕು. ಇಲ್ಲವಾದರೆ ನಮ್ಮ ಕುಟುಂಬ ಸದಸ್ಯರಿಗೆ ದಯಾಮರಣ ನೀಡಬೇಕು ಎಂದು ಬೇಲೂರು ತಾಲೂಕಿನ ಶಿವಯೋಗಿಪುರ ನಿವಾಸಿಗಳಾದ ಯಶೋಧಾ ಹಾಗೂ ಚಂದ್ರಯ್ಯ ಅವರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
  ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಯೋಗಿಪುರದ ಚಂದ್ರಯ್ಯ, ಶಿವಯೋಗಿಪುರ ಗ್ರಾಮದಲ್ಲಿ ಖಾತೆ ನಂಬರ್ 120ರಲ್ಲಿ ನನ್ನ ಸ್ವಂತ ಮನೆಯಿದ್ದು, ನಾನು ಸುಮಾರು 25 ವರ್ಷಗಳಿಂದ ಅಲ್ಲಿ ವಾಸವಾಗಿದ್ದೇನೆ. 2022ರಲ್ಲಿ ಮಳೆ ಹಾನಿಯಿಂದ ಮನೆ ಬಿದ್ದು ಹೋಯಿತು. ಇದಕ್ಕೆ ನಾನು ಸರ್ಕಾರದಿಂದ 95,000 ರೂ. ಪಡೆದುಕೊಂಡಿದ್ದೇನೆ. ಆದರೆ ಮನೆ ಪುನರ್‌ನಿರ್ಮಾಣಕ್ಕೆ ನಮ್ಮ ಗ್ರಾಮದಲ್ಲಿರುವ ಕೆಲವರು ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಎಲ್ಲಾ ಇಲಾಖೆಗಳಿಗೂ ದೂರು ನೀಡಿದ್ದರೂ ಇದುವರೆಗೂ ಯಾವ ಪ್ರಯೋಜನವಾಗಿಲ್ಲ. ಮಳೆಗಾಲ ಪ್ರಾರಂಭವಾಗುತ್ತಿದ್ದು ನಮಗೆ ವಾಸ ಮಾಡಲು ಮನೆ ಇಲ್ಲ. ಬದುಕುವುದು ಕಷ್ಟವಾಗಿದೆ. ಹೀಗಾಗಿ ನಮಗೆ ದಯಾಮರಣ ನೀಡಿ ಎಂದು ಕೋರಿದರು.
  ಮನೆ ಕುಸಿದು ಬಿದ್ದ ನಂತರ ಸರ್ಕಾರದ ಅನುದಾನದಲ್ಲಿ ಪುನರ್ ನಿರ್ಮಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಬೇಲೂರು ತಾಲೂಕು ಪಂಚಾಯಿತಿಯ ಅನುಮೋದನೆ ಪಡೆದು ಮನೆ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಭಿಸಿದ್ದೇನೆ. ಆದರೆ ಗ್ರಾಮದ ಕೆಲವು ವ್ಯಕ್ತಿಗಳು ನಮಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಮನೆಯ ಅಡಿಪಾಯವನ್ನು ಧ್ವಂಸ ಮಾಡಿದ್ದಾರೆ. ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಗೆ ಖುದ್ದಾಗಿ ದೂರು ನೀಡಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ. ಆದರೂ ಕೆಲವರು ಮನೆ ನಿರ್ಮಾಣ ಮಾಡದಂತೆ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕಾರಣದಿಂದ ನಾವು ಜಿಲ್ಲಾಧಿಕಾರಿ ಕಚೇರಿಗೆ ಬಂದು ಅರ್ಜಿ ನೀಡಿದ್ದೇವೆ ಎಂದು ಹೇಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts