Friday, 16th November 2018  

Vijayavani

Breaking News

ರಕ್ತದೊತ್ತಡ ಮಾತ್ರೆಯ ಅಡ್ಡ ಪರಿಣಾಮ ಪರೀಕ್ಷಿಸಿ

Tuesday, 02.01.2018, 3:01 AM       No Comments

| ಡಾ. ವಸುಂಧರಾ ಭೂಪತಿ

# ನನ್ನ ಮಗನಿಗೆ 9 ವರ್ಷ. ಅವನಿಗೆ ಮೊಣಕಾಲಿನಲ್ಲಿ ಹಸಿರು ಬಣ್ಣದ (5-8 ತಿಂಗಳಿಂದ) 25 ಪೈಸೆ ಅಗಲದ ಕಲೆ ಕಾಣಿಸಿಕೊಂಡು ನೋವು ಅಂತಿದ್ದ. ತತ್ಕಾಲಕ್ಕೆ ಏನೋ ಒಂದು ನೋವಿನ ಮುಲಾಂ ಹಚ್ಚಿದ್ವಿ. ಆದರೆ, ಈಗೀಗ, ಅಲ್ಲಲ್ಲಿ ಕಾಲುಗಳಲ್ಲಿ ಹೆಚ್ಚು ನೋವು ಕಾಣಿಸ್ತಿದೆ. ಕಲೆ ಮೇಲೆ ಅದುಮಿದರೆ ಹೆಚ್ಚು ನೋವು ಅಂತಾನೆ. ತೊಡೆ ಮೇಲೆ ಕೆಂಪು ಬಣ್ಣದ ಗುರುತುಗಳು ಮೂಡುತ್ತಿರುತ್ತವೆ. ಅಲ್ಲಲ್ಲಿ ಹಸಿರು ಬಣ್ಣದ ಮಚ್ಚೆಗಳು. ಕರೆಂಟ್ ಹೊಡೆದ ಹಾಗಾಗುತ್ತದೆ ಎನ್ನುತ್ತಾನೆ. ಮೊಣಕಾಲು, ಮೀನಖಂಡಗಳಲ್ಲಿ ಇವು ಮೂಡುತ್ತಿದ್ದು, ಕಾಲು ಕೈಗಳಲ್ಲಿ ಸ್ವಲ್ಪ ಬಿಗಿತ ಇರುತ್ತದೆ. ಅಂಗೈನಲ್ಲಿ ಬೆಳ್ಳಗಿನ ಪೊರೆ ಥರ ಏಳುತ್ತದೆ. ಉಗುರುಗಳಲ್ಲಿ ಬೆಳ್ಳಗಿನ ಗುರುತೂ ಇದೆ. ದಯವಿಟ್ಟು ಈ ಸಮಸ್ಯೆಗೆ ಪರಿಹಾರ ಹೇಳಿ.

| ಚಂದನ ದಾವಣಗೆರೆ

ನಿಮ್ಮ ಮಗನನ್ನು ದಾವಣಗೆರೆಯಲ್ಲಿರುವ ಆಯುರ್ವೆದ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿ. ಕಾಯಿಲೆ ಯಾವುದೆಂದು ಪತ್ತೆಯಾದಲ್ಲಿ ಚಿಕಿತ್ಸೆ ಸುಲಭವಾಗುತ್ತದೆ. ನೀವು ತಿಳಿಸಿದ ಲಕ್ಷಣಗಳನ್ನು ಗಮನಿಸಿದರೆ ರಕ್ತಕ್ಕೆ ಸಂಬಂಧಿಸಿದ ಕಾಯಿಲೆಯಾಗಿರಬಹುದು. ಮಾಂಸಖಂಡಗಳನ್ನೂ ಒಳಗೊಂಡಿರುವುದರಿಂದ ನೋವು ಕಾಣಿಸಿಕೊಳ್ಳುತ್ತಿದೆ. ತಡ ಮಾಡಬೇಡಿ. ತಕ್ಷಣ ಚಿಕಿತ್ಸೆ ಕೊಡಿಸಿ. ಕೆಲವು ಬಾರಿ ತೀವ್ರ ರಕ್ತಹೀನತೆಯಿಂದಲೂ ಹೀಗಾಗುತ್ತದೆ. ಆಹಾರದಲ್ಲಿ ಹೆಚ್ಚು ಸೊಪು್ಪ, ತರಕಾರಿ, ಹಣ್ಣುಗಳನ್ನು ನೀಡಿ. ಖರ್ಜೂರ ತಿನ್ನಲು ಕೊಡಿ.

# ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೇನೆ. ಮೊಣಕಾಲಿನಲ್ಲಿ ತುಂಬ ನೋವಿದೆ. ಈ ಸಮಸ್ಯೆಯಿಂದ ನನ್ನನ್ನು ಮುಕ್ತಗೊಳಿಸಿ.

| ರೇಣುಕಾ ಮೇವುಂಡಿ

ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಔಷಧ, ಪಥ್ಯ, ವ್ಯಾಯಾಮ ಕ್ರಮಬದ್ಧವಾಗಿರಲಿ. ಎಳ್ಳೆಣ್ಣೆಯಲ್ಲಿ ಕರ್ಪರ ಬೆರೆಸಿ ಕಾಯಿಸಿ, ಆರಿಸಿ ಎಣ್ಣೆ ತಯಾರಿಸಿ ಇಟ್ಟುಕೊಂಡು, ಪ್ರತಿದಿನ ಮೊಣಕಾಲಿಗೆ ಹಚ್ಚಿ ಮಸಾಜ್ ಮಾಡಿ ಶಾಖ ತೆಗೆದುಕೊಳ್ಳಬೇಕು. ಮೆಟ್ಟಿಲು ಹತ್ತಿ ಇಳಿಯಬೇಕಾದಲ್ಲಿ ನಿಧಾನವಾಗಿ ತಿರುಗಾಡುವುದನ್ನು ರೂಢಿಸಿಕೊಳ್ಳಿ. ಆಹಾರದಲ್ಲಿ ಸುಣ್ಣಾಂಶ ಅಧಿಕವಿರುವ ಮೊಸರು, ಸೊಪು್ಪಗಳನ್ನು ಹೆಚ್ಚು ಸೇವಿಸಿ. ಮಹಾರಾನ್ನಿದಿ ಕಷಾಯವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟು ನೀರು ಬೆರೆಸಿ ಊಟದ ನಂತರ ತೆಗೆದುಕೊಳ್ಳಿ. ತೀವ್ರ ನೋವಿದ್ದಲ್ಲಿ ಹತ್ತಿರದ ಆಯುರ್ವೆದ ಆಸ್ಪತ್ರೆಗೆ ಹೋಗಿ ಜಾನುಬಸ್ತಿ ಚಿಕಿತ್ಸೆಯನ್ನು 2 ವಾರಗಳ ಕಾಲ ಪಡೆಯಿರಿ.

#ಪತಿಗೆ 45 ವರ್ಷ. ನನಗೆ 36 ವರ್ಷ. ಮದುವೆಯಾಗಿ 15 ವರ್ಷಗಳಾಗಿವೆ. ನಮಗೆ 12 ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿಗೆ ನಾಲ್ಕು ವರ್ಷಗಳಿಂದ ರಕ್ತದೊತ್ತಡದ ಸಮಸ್ಯೆ ಇದೆ. ಅವರು ಖಅಘಔಣಇ0 ಎಂಬ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಸಕ್ಕರೆ ಕಾಯಿಲೆ ಇಲ್ಲ. ಕಳೆದ 2 ವರ್ಷಗಳಿಂದ ಅವರಿಗೆ ಹಿಂದಿನಂತೆ ಸಂಭೋಗ ಮಾಡಲು ಆಗುತ್ತಿಲ್ಲ. ರಾತ್ರಿ ಸಮಯ ಅವರಿಗೆ ನಿಮಿರುವಿಕೆ ಸಾಧ್ಯವಾಗುತ್ತಿಲ್ಲ. ಬೆಳಗಿನ ಜಾವ ಮಾತ್ರ ಅಲ್ಪಮಟ್ಟಿಗೆ ಪ್ರಯತ್ನಿಸುತ್ತಾರೆ. ಗಡಸುತನವೂ ಇಲ್ಲ, ಹಿಂದಿನಷ್ಟು ವೀರ್ಯವೂ ಹೊರಚೆಲ್ಲುವುದಿಲ್ಲ. ಇದಕ್ಕೆ ಏನಾದರೂ ಪರಿಹಾರ ಇದೆಯೇ?

| ಹೆಸರು ಬೇಡ, ಮೈಸೂರು

ನಿಮ್ಮ ಪತಿ ಈಗ ರಕ್ತದೊತ್ತಡಕ್ಕೆ ತೆಗೆದುಕೊಳ್ಳುತ್ತಿರುವ ಮಾತ್ರೆಯ ಅಡ್ಡ ಪರಿಣಾಮಗಳೇನಾದರೂ ಇದೆಯೇ ಎಂಬುದನ್ನು ನಿಮ್ಮ ಕುಟುಂಬ ವೈದ್ಯರನ್ನು ಕೇಳಿ ಅರಿತುಕೊಳ್ಳಿ. ಹಾಗೇನಾದರೂ ಇದ್ದಲ್ಲಿ ಮಾತ್ರೆ ಬದಲಾಯಿಸಿ ಕೊಡುತ್ತಾರೆ. ಸದ್ಯ ವಾಜೀಕರ ರಸಾಯನವನ್ನು ದಿನಕ್ಕೆರಡು ಬಾರಿ ಒಂದು ಚಮಚೆಯಷ್ಟು ಊಟದ ನಂತರ ಸೇವಿಸಿ, ಹಾಲು ಕುಡಿಯಲು ಹೇಳಿ. ಸಿದ್ಧಮಕರಧ್ವಜ ಮಾತ್ರೆಯನ್ನು ದಿನಕ್ಕೆರಡು ಬಾರಿ ಒಂದು ಮಾತ್ರೆಯಂತೆ ಸೇವಿಸಲು ಹೇಳಿ. ಅಂಜೂರ ಮತ್ತು ಬಾದಾಮಿಯನ್ನು ಪ್ರತಿದಿನ 6-8ರಷ್ಟು ತಿನ್ನಲಿ. ಉದ್ದಿನ ಬೇಳೆಯಿಂದ ತಯಾರಿಸಿದ ಆಹಾರ ಸೇವನೆಯೂ ಉತ್ತಮ.

Leave a Reply

Your email address will not be published. Required fields are marked *

Back To Top