ರಂಭಾಪುರಿ ಶ್ರೀಗಳಿಗೆ ಅವಮಾನ

ಗದಗ: ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಂಗಳವರ ಬಗ್ಗೆ ಫೇಸ್​ಬುಕ್​ನಲ್ಲಿ ಹಗುರವಾಗಿ ಮಾತನಾಡಿರುವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪಂಚಾಚಾರ್ಯ ಸೇವಾ ಸಂಘದ ಪದಾಧಿಕಾರಿಗಳು ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಂಘ ಗದಗ-ಬೆಟಗೇರಿ, ಅಖಿಲ ಭಾರತ ವೀರಶೈವ ಸಮನ್ವಯ ಸಮಿತಿ, ಪಂಚಪೀಠಗಳ ಸದ್ಭಕ್ತರು, ಅಭಿಮಾನಿಗಳು ಮತ್ತು ಗದಗ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಅನೇಕರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.ಧರ್ಮ ಒಡೆಯುವ, ಸಾಮಾಜಿಕ ಶಾಂತಿ ಕದಡುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದರ ಮೂಲಕ ರಾಜ್ಯ, ದೇಶದ ಸಮಸ್ತ ವೀರಶೈವ ಲಿಂಗಾಯತರನ್ನು ಕೆಣಕಿದಂತಾಗಿದೆ. ಮುಂದೆ ಆಗಬಹುದಾದ ಅನಾಹುತಗಳಿಗೆ ಎಡೆ ಮಾಡಿಕೊಡದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.  ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಬಸಣ್ಣ ಮಲ್ಲಾಡದ, ಉಪಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ, ಸುರೇಶ ಅಬ್ಬಿಗೇರಿ, ಯುವ ಘಟಕದ ಅಧ್ಯಕ್ಷ ಅನಿಲ ಅಬ್ಬಿಗೇರಿ, ಅಖಿಲ ಭಾರತ ವೀರಶೈವ ಸಮನ್ವಯ ಸಮಿತಿ ಉಪಾಧ್ಯಕ್ಷ ಪ್ರಕಾಶ ಬೇಲಿ, ಬಾಬಣ್ಣ ಶಾಬಾದಿಮಠ, ಮಂಜಣ್ಣ ಬೇಲೇರಿ, ವಿ.ಎಸ್. ಶಿವಕಾಳಿಮಠ, ಶರಣಯ್ಯ ಜುಕ್ತಿಹಿರೇಮಠ, ಶಿವಾನಂದಯ್ಯ ಹಿರೇಮಠ, ರಾಜು ಖಾನಪ್ಪನವರ, ಸೋಮಣ್ಣ ಮಲ್ಲಾಡದ, ಅಜ್ಜಣ್ಣ ಮುಧೋಳ, ಬಸವರಾಜ ಕೂಗು, ಅಜ್ಜಣ್ಣ ಮಲ್ಲಾಡದ, ಚಂದ್ರು ಅಬ್ಬಿಗೇರಿ, ಎಸ್.ಕೆ.ಬೆಲ್ಲದ, ಎಂ.ಸಿ.ಧನ್ನೂರಹಿರೇಮಠ, ಮಹಾಂತೇಶ ಪಾಟೀಲ, ಸುರೇಶ ಹಾದಿಮನಿ, ಉಮಾಪತಿ ಭೂಸನೂರಮಠ, ಎಸ್.ಸಿ. ಚಳಗೇರಿ ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.