More

  ರಂಗಭೂಮಿ ಹಲವು ಆಯಾಮಗಳ ಸಂಗಮ

  ಬಳ್ಳಾರಿ : ರಂಗಭೂಮಿ ಹಲವಾರು ಆಯಾಮಗಳ ಸಂಗಮವಾಗಿದ್ದು, ಅದರಲ್ಲಿ ಶ್ರವ್ಯ ಹಾಗೂ ದೃಶ್ಯ
  ಮಾಧ್ಯಮದಂತಹ ಮಾಧ್ಯಮ ನಮ್ಮೆಲ್ಲರ ಆತ್ಮ ಬಲವಾಗಿದೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಜೆ.ತಿಪ್ಪೆರುದ್ರಪ್ಪ ಹೇಳಿದರು.
  ಇಲ್ಲಿನ ಧರ್ಮಾವರಂ ರಾಮಕೃಷ್ಣಮಾಚಾರ್ಯರ ರಂಗಸಿರಿ ಸ್ಮಾರಕ ಭವನದ ಬೀಚಿ ಸಭಾಂಗಣದಲ್ಲಿ ರಂಗ ಜಂಗಮ
  ಸಂಸ್ಥೆ ಹಾಗೂ ಗಾಯತ್ರಿ ಪ್ರಕಾಶನ ಇವರ ಸಹಯೋಗದಲ್ಲಿ ಶನಿವಾರ ನಡೆದ ಪ್ರೊ.ರಾಮಕೃಷ್ಣಯ್ಯನವರ ನಿರ್ದೇಶನದ
  ನಾಟಕಗಳ ಅವಲೋಕನ ಕೈದೀವಿಗೆ ಹಾಗೂ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರ ವಾಲ್ಮೀಕಿ ಮತ್ತು ಇತರೆ ನಾಟಕಗಳ
  ಪುಸ್ತಕಗಳ ಲೋಕಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಟಕಗಳನ್ನು ಮತ್ತು ಸಾಹಿತ್ಯವನ್ನು ಕಟ್ಟುವ ಮೂಲಕ
  ಮುಂದಿನ ಪೀಳಿಗೆಗೆ ನಾಟಕಗಳು ತಲುಪಿಸುವ ಕಾರ್ಯ ಮಾಡಬೇಕು ಎಂದರು.
  ವೀ.ವಿ.ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಶಾಮ್ ಮೂರ್ತಿ ಮಾತನಾಡಿ, ಕಥೆ ಕಾದಂಬರಿ ಕಾವ್ಯಗಳು ಮನುಷ್ಯನ ಓದಿಸುವ
  ಮತ್ತು ಅದನ್ನ ಸೃಷ್ಟಿಸುವ ಕ್ರಿಯೆಗಳನ್ನಾಗಿ ರೂಪಿಸುತ್ತವೆ. ಆದರೆ ಆ ನಾಟಕಗಳು ಸೃಜನಶೀಲವಾಗಿ ಬದುಕನ್ನ ಕಟ್ಟಿಕೊಡುತ್ತವೆ ಎಂದು ಹೇಳಿದರು
  ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾವಿಭಾಗದ ಮುಖ್ಯಸ್ಥ ಪ್ರೊ.ರಾಮಕೃಷ್ಣಯ್ಯ ಮಾತನಾಡಿ, ರಂಗಭೂಮಿ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಮಹತ್ವಪೂರ್ಣವಾದದ್ದು ರಂಗ ಕೃತಿಗಳು ಸಮಕಾಲೀನ ವಸ್ತು ವಿಷಯಗಳೊಂದಿಗೆ ರಚನೆಗೊಂಡಾಗ ಅವುಗಳ ಮಹತ್ವ ತುಂಬಾ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ತಿಳಿಸಿದರು.
  ಈ ಸಂದರ್ಭದಲ್ಲಿ ಅಣ್ಣಾಜಿ ಕೃಷ್ಣಾರೆಡ್ಡಿ, ಕಲಾವಿದರಾದ ಜಗದೀಶ್ ಕೆ. ವೆಂಕೋಬಚಾರಿ ವಿಜಯಿಂದ್ರ, ಹೇಮೇಶ್ವರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts