ಹುಬ್ಬಳ್ಳಿ: ರಂಗಪಂಚಮಿ ಮುನ್ನಾ ದಿನವಾದ ಗುರುವಾರ ನಗರದ ವಿವಿಧೆಡೆ ಕಾಮಣ್ಣ-ರತಿದೇವಿ ಮೂರ್ತಿಗಳಿಗೆ ಪೂಜೆ ನಡೆಯಿತು. ಚಿಂದಿ ಓಣಿ, ದಿವಟೆ ಓಣಿ, ಮ್ಯಾದರ ಓಣಿ, ತಿಮ್ಮಸಾಗರ ಓಣಿ, ತುಮಕೂರು ಓಣಿ ಮತ್ತಿತರೆಡೆ ಕಾಮಣ್ಣ-ರತಿದೇವಿ ಮೂರ್ತಿಗಳನ್ನು ಹೂವುಗಳಿಂದ ಶೃಂಗರಿಸಲಾಗಿತ್ತು. ಶುಕ್ರವಾರದಂದು ಕಾಮಣ್ಣ ಮೂರ್ತಿಯ ದಹನ ನಡೆಯಲಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮೂರ್ತಿಗಳ ದರ್ಶನ ಪಡೆದರು.
ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ಪೆಂಡಾಲ್ಗಳು ಭಕ್ತರಿಂದ ತುಂಬಿದ್ದವು. ನೈವೇದ್ಯ ಹಿಡಿದು, ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸುತ್ತಿದ್ದುದು ಎಲ್ಲೆಡೆ ಕಂಡುಬಂತು.
ಭಾವಸಾರ ಹೋಳಿ ಇಂದು:
ಭಾವಸಾರ ಯೂಥ್ ಫೆಡರೇಷನ್ ವತಿಯಿಂದ ಮಾ. 13ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಭಾವಸಾರ ಹೋಳಿ(ರಂಗ ಪಂಚಮಿ ಉತ್ಸವ) ನಗರದ ಚವ್ಹಾಣ ಗ್ರೀನ್ ಗಾರ್ಡನ್ನಲ್ಲಿ ಏರ್ಪಾಟಾಗಿದೆ. ಭಾವಸಾರ ಕ್ಷತ್ರೀಯ ಸಮಾಜದವರಿಗಾಗಿಯೇ ಈ ಸಂಭ್ರಮ ಆಯೋಜಿಸಲಾಗಿದೆ.