ಯೌವ್ವನದ ನಡೆ ಬದುಕಿನ ಸೂತ್ರ

blank

ಬಾಗಲಕೋಟೆ: ಯೌವ್ಬನದಲ್ಲಿ ತೆಗೆದುಕೊಳ್ಳುವ ನಿರ್ಧಾರ ಮತ್ತು ಪರಿಶ್ರಮ ಮುಂದಿನ ಜೀವನವನ್ನು ನಿರ್ಧರಿಸುತ್ತದೆ. ಇದು ಜೀವನದ ಅತ್ಯಮೂಲ್ಯ ಸಮಯವಾಗಿದ್ದು ವ್ಯಸನದಾಸರಾಗದೆ ಗುರಿ ಸಾಽಸುವತ್ತ ಹೆಜ್ಜೆಗಳು ಇರಲಿ ಎಂದು ಬಾಗಲಕೋಟೆ ಜಿಲ್ಲೆಯ ಉಪ ಪೊಲೀಸ್ ಅಽಕ್ಷಕ ಗಜಾನನ ಸುತಾರ ಹೇಳಿದರು.

blank

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ , ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಯುವ ಜನತೆ ಮಾದಕ ವ್ಯಸನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಮನರಂಜನೆ ಮತ್ತು ಸ್ನೇಹ ಸಹವಾಸಗಳು ಇದಕ್ಕೆ ಕಾರಣವಾಗುತ್ತಿವೆ. ವ್ಯಸನ ದಾಸಿಯಾದರೆ ಹೊರಬರುವುದು ಕಷ್ಟ ಜಾಗೃತರಾಗಿರಿ. ಋಣಾತ್ಮಕ ಚಿಂತನೆಗಳಿಗೆ ಬಲಿಯಾಗದೆ, ಅಹಂ ಭಾವನೆ ಮೈಗೂಡಿಸಿಕೊಳ್ಳದೆ ಸೌಜನ್ಯಯುತ ಮತ್ತು ಗೌರವಯುತ ಜೀವನ ರೂಪಿಸಿಕೊಳ್ಳಿ, ನಿಽðಷ್ಟ ಗುರಿಯೊಂದಿಗೆ ಅಧ್ಯಯನ ಮಾರ್ಗ ಕಂಡುಕೊಳ್ಳಿ ಎಂದರು.

ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಮಹಿಳೆಯರು ಮತ್ತು ಯುವಜನತೆ ಎಚ್ಚರಿಕೆ ವಹಿಸಬೇಕು. ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೊದಲು ಜಾಗೃತಿ ವಹಿಸಿ. ಅದೊಂದು ವರ್ಚುವಲ್ ಜಗತ್ತಾಗಿದ್ದು, ಅದರಿಂದ ಜೀವನ ನಿರ್ಮಾಣವಾಗದು. ಸೈಬರ್ ವಂಚನೆಗೆ ಒಳಗಾದರೆ ನಿರ್ಭಯವಾಗಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ವಾಹನ ಸಂಚಾರದ ವೇಳೆ ರಸ್ತೆ ನಿಯಮಗಳನ್ನು ಪಾಲಿಸಿ ಜೀವ ಮತ್ತು ಜೀವನದ ಬಗ್ಗೆ ಕಾಳಜಿ ವಹಿಸಿ. ಕ್ರೀಡೆ ಮತ್ತು ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಂಡು ಆತ್ಮಸ್ಥೆÊರ್ಯ ಮತ್ತು ಆರೋಗ್ಯದ ಕಡೆಗೆ ಗಮನ ವಹಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಚಾರ್ಯ ಎಸ್.ಆರ್.ಮುಗನೂರಮಠ ಮಾತನಾಡಿ, ಕನಸುಗಳು ವಿದ್ಯಾರ್ಥಿಗಳಿಗೆ ಅವಶ್ಯಕ, ಕನಸುಗಳನ್ನು ನನಸಾಗುವಲ್ಲಿ ಶ್ರಮವನ್ನು ತೊಡಗಿಸಬೇಕು, ವಿದ್ಯಾರ್ಥಿ ಜೀವನ ಬಂಗಾರದ ಜೀವನವಿದ್ದಂತೆ ಬದುಕನ್ನು ರೂಪಿಸುವ ಹವ್ಯಾಸಗಳನ್ನು ಬೆಳಸಿಕೊಳ್ಳಿ. ನಿವು ಇಡುವ ಹೆಜ್ಜೆಗಳು ಯಶಸ್ವಿ ಹೆಜ್ಜೆಗಳಾಗಲಿ ಎಂದು ತಿಳಿಸಿದರು.

ಸಾಧಕರಿಗೆ ಸತ್ಕಾರ ಪುರಸ್ಕಾರ:
ಮಹಾವಿದ್ಯಾಲಯದ ಕಲಾದೀಪ್ತಿ ವಾರ್ಷಿಕ ಸಂಚಿಕೆ ಮತ್ತು ಡಾ.ಎಸ್.ಎನ್ ರಾಂಪೂರ ಸಂಪಾದಿತ ದೇಶಗತ ಮನೆತನಗಳು ಹಾಗೂ ಸಮಕಾಲಿನ ಮಠ-ಮಾನ್ಯಗಳು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಡಿಲಿಟ್ ಪದವಿ ಪಡೆದ ಡಾ. ಆರ್.ನಾಗರಾಜು ಮತ್ತು ಡಾಕ್ಟರೇಟ್ ಪದವಿ ಪಡೆದ ಡಾ.ಎಂ.ಎಚ್ ವಡ್ಡರ ಹಾಗೂ, ಡಾ.ಸಂತೋಷ ಗೊರವ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟಿವಟಿಕೆಯಲ್ಲಿ ಸಾಧನೆ ಗೈದ ಮತ್ತು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸತ್ಕರಿಸಲಾಯಿತು. ಡಾ.ಎಸ್.ಡಿ ಕೆಂಗಲಗುತ್ತಿ ವಾರ್ಷಿಕ ವರದಿ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಪದ ನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎಂ.ಗಾAವ್ಕರ್, ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಠೋಡ, ಸಾಂಸ್ಕೃತಿಕ ಚಟುವಟಿಕೆ ಸಂಯೋಜಕ ಡಾ.ಕೆ.ವಿ ಮಠ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಎನ್ ರಾಂಪೂರ, ದೈಹಿಕ ನಿರ್ದೇಶಕ ಎಂ.ಎA.ದೇವನಾಳ, ವಿದ್ಯಾರ್ಥಿ ಪ್ರತಿನಿಽಗಳಾದ ವಾರೇಶ ಯಂಕAಚಿ, ಪಾರ್ವತಿ ಹಿರೇಮಠ ಉಪಸ್ಥಿತರಿದ್ದರು.

Share This Article
blank

ಬಿಸಾಡುವ ಮುನ್ನ ತಿಳಿಯಿರಿ Watermelon Seeds ಪವರ್​​: ಇದರಲ್ಲಿದೆ 5 ನಂಬಲಾಗದ ಆರೋಗ್ಯ ಪ್ರಯೋಜನೆಗಳು

Watermelon Seeds: ಬೇಸಿಗೆಯಲ್ಲಿ ಬಿಸಿಲು ಜೋರಾದ ತಕ್ಷಣ ದೇಹವನ್ನು ತಂಪಾಗಿಸಲು ನಾವು ಹೆಚ್ಚಾಗಿ ಕಲ್ಲಂಗಡಿಯನ್ನು ಆಶ್ರಯಿಸುತ್ತೇವೆ.…

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

blank