ಕೊಟ್ಟಲಗಿ: ಅನ್ನ ನೀಡುವ ರೈತ, ವಿದ್ಯೆ ನೀಡುವ ಶಿಕ್ಷಕ ಹಾಗೂ ದೇಶ ಗಡಿ ಕಾಯುವ ಮೂಲಕ ನಮ್ಮೆಲ್ಲರನ್ನು ರಕ್ಷಿಸುವ ಯೋಧರೆ ನಿಜವಾದ ಹೀರೋಗಳು ಎಂದು ಕಾಂಗ್ರೆಸ್ ಮುಖಂಡ ಚಿದಾನಂದ ಸವದಿ ಹೇಳಿದರು.
ಗ್ರಾಮದಲ್ಲಿ ಮಾಜಿ ಸೈನಿಕರ ಸೇವಾ ಸಂಘ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ಮೋಸಿನ್ ಸಿಕಂದರ್ ಮುಲ್ಲಾ ಅವರ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವಕರು ದುಶ್ಚಟಗಳಿಂದ ದೂರಾಗುವ ಮೂಲಕ ನಿರ್ದಿಷ್ಟ ಗುರಿ ಹೊಂದಿ ನಿರಂತರ ಪ್ರಯತ್ನ ಹಾಗೂ ಪರಿಶ್ರಮದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಕಮರಿಯ ಅತ್ಮಾರಾಮ ಸ್ವಾಮೀಜಿ ಮಾತನಾಡಿ, ದೇಶ ಸೇವೆ ಹಾಗೂ ರಕ್ಷಣೆಗಾಗಿ ಕಾರ್ಯನಿರ್ವಹಿಸುವ ಯೋಧರ ಸೇವಾ ಮನೋಭಾವ ಹಾಗೂ ತ್ಯಾಗ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊನವಾಡದ ಬಾಬು ಮಹಾರಾಜರು, ಮುಫ್ತಿ ಹಬೀಬಉಲ್ಲಾ ಕಾಶ್ಮಿ, ಮೌಲಾನಾ ಅಬ್ಬಾಸ್, ಜಿಸಲಪ್ಪ ತಾಂವಶಿ, ಸಿಕಂದರ ಮುಲ್ಲಾ ಇತರರಿದ್ದರು.